ದುಃಖದಲ್ಲಿ ಸ್ಯಾಂಡಲ್​ವುಡ್, ಕನ್ನಡದ ಯುವ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು!!

0
293

ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ಖ್ಯಾತ ನಟ ಚಿರಂಜೀವಿ ಸರ್ಜಾ(39 ವರ್ಷ) ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಿರಂಜೀವಿ ಸರ್ಜಾ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಇಂದು ಮಧ್ಯಾಹ್ನ 3:30ರ ಸುಮಾರಿಗೆ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆ ವೈದ್ಯರು ಅವರಿಗೆ ಚಿಕಿತ್ಸೆ ನೀಡಲು ತುಂಬಾನೆ ಪ್ರಯತ್ನ ಪಟ್ಟಿದ್ದಾರೆ. ಅದರೂ ಚಿಕಿತ್ಸೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ನಿನ್ನೆಯ ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಸದ್ಯ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಮೃತದೇಹ ಇಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಪೋಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅಪೊಲೊ ಆಸ್ಪತ್ರೆ ಮೂಲಗಳ ಮಾಹಿತಿ ನೀಡಿವೆ.

2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್ವು ಡ್ಗೆಖ ಎಂಟ್ರಿ ಕೊಟ್ಟಿದ್ದ ಸರ್ಜಾ ಅವರು ವಾಯುಪುತ್ರ, ಚಂದ್ರಲೇಖ, ದಂಡಂ ದಶಗುಣಂ, ವರದ ನಾಯಕ, ಸೀಜರ್, ಸಿಂಗಾ, ಅಮ್ಮಾ ಐ ಲವ್ ಯು ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಸಿದ್ದರು. ಶಿವಾರ್ಜುನ ಅವರ ಕೊನೆಯ ಸಿನಿಮಾ.

ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡು 2018ರಲ್ಲಿ ವಿವಾಹವಾಗಿದ್ದರು. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮೊಮ್ಮಗ.

ಕನ್ನಡ ಚಿತ್ರರಂಗಕ್ಕೆ, ಲಕ್ಷಾಂತರ ಅಭಿಮಾನಿಗೆಳ ಮನಸ್ಸಿಗೆ, ಮನೆಯವರಿಗಿದು ತುಂಬಲಾರದ ನಷ್ಟ‌. ನಮ್ಮನ್ನೆಲ್ಲ ಅಗಲಿದ ಖ್ಯಾತ ನಟ ಚಿರಂಜೀವಿ ಸರ್ಜಾ ರವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ.