ಇಂದು ಶನಿಮೌನಿ ಅಮಾವಾಸ್ಯೆ 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ; ಯಾವ ರಾಶಿಗಳಿಗೆ ಶನಿ ಪ್ರವೇಶ, ಯಾವ ರಾಶಿಗೆ ಶನಿಕಾಟದಿಂದ ಮುಕ್ತಿ.?

0
2279

Astrology in kannada | kannada news

ಇಂದು ವರ್ಷದ ಮೊದಲ ಅಮಾವಾಸ್ಯೆ ಇದ್ದು, ಈ ಅಮಾವಾಸ್ಯೆಯ ವಿಶೇಷತೆ ಸಾಕಷ್ಟಿದೆ, ಏಕೆಂದರೆ ಇಂದು ಶನಿಮೌನಿ ಅಮಾವಾಸ್ಯೆ. ಪ್ರಬಲ ಗ್ರಹವಾದ ಶನಿ ಇಂದು ಅಮಾವಾಸ್ಯೆಯ ದಿನ ಮದ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಇದನ್ನು ಶನಿಮೌನಿ ಅಮಾವಾಸ್ಯೆ ಅಂತಲೇ ಕರೆಯಲಾಗುತ್ತದೆ. ಶನಿಯು 30 ವರ್ಷಗಳ ನಂತರ ತನ್ನದೇ ಮನೆಯಾದ ಮಕರ ರಾಶಿಗೆ ಸಂಚರಿಸುವುದು ಅತ್ಯಂತ ಪ್ರಮುಖವಾದ ಸಂಗತಿಯೆಂದು ಪರಿಗಣಿಸಲಾಗುತ್ತದೆ. ಮಧ್ಯಾಹ್ನ 12.05ಕ್ಕೆ ಮಕರ ರಾಶಿಗೆ ಶನಿ ಪ್ರವೇಶ. ಇಂದಿನಿಂದ ಮೂರು ವರ್ಷಗಳ ಕಾಲ ಮಕರರಾಶಿಯಲ್ಲೇ ಶನಿ ಸಂಚರಿಸಲಿದೆ.

2023ರ ಜನವರಿಯಲ್ಲಿ ಶನಿ ಗ್ರಹ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 2017ರಲ್ಲಿ ಧನುಸ್ಸು ರಾಶಿಗೆ ಪ್ರವೇಶಿಸಿದ್ದ ಶನಿ ಗ್ರಹ. 12 ರಾಶಿಗಳನ್ನು ಸುತ್ತಲು ಶನಿ ಗ್ರಹಕ್ಕೆ 30ರಿಂದ 32 ವರ್ಷಗಳ ಕಾಲಾವಧಿ ಬೇಕಾಗಲಿದೆ. 2022ರ ಏಪ್ರಿಲ್ ನಲ್ಲಿ ಶನಿ ಗ್ರಹ ಕುಂಭರಾಶಿಗೆ ತಾತ್ಕಾಲಿಕವಾಗಿ ಪ್ರವೇಶಿಸಲಿದ್ದಾನೆ. ಇಂದು ಮಕರರಾಶಿಗೆ ಶನಿ ಗ್ರಹ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಭಕ್ತರು ಶನೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಅದರಿಂದ ಕೆಲವು ರಾಶಿಗಳಿಗೆ ಸಾಕಷ್ಟು ಕೆಟ್ಟದನ್ನು ಮಾಡಲಿರುವ ಶನಿ, ಕೆಲವು ರಾಶಿಗಳಿಗೆ ಅದೃಷ್ಟವನ್ನೇ ತರಲಿದ್ದಾನೆ. ಹಾಗಾದರೆ ಯಾವ ರಾಶಿ ಶನಿಯ ಪ್ರವೇಶ? ಯಾವ ರಾಶಿಗೆ ಶನಿಯ ಮುಕ್ತಿ ನೀಡಲಿದ್ದಾನೆ. ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವುದು ಇಲ್ಲಿದೆ ನೋಡಿ.

ಶನಿ ಪ್ರವೇಶದ ರಾಶಿಗಳು, ಮತ್ತು ಪರಿಹಾರ;

1. ವೃಶ್ಚಿಕ:

ದಿನ ಭವಿಷ್ಯ

ಸಾಡೇಸಾತಿ ಸಂಪೂರ್ಣ ಬಿಡುಗಡೆಯಾಗುವುದರಿಂದ ವಿಶೇಷವಾಗಿ ಶನೇಶ್ಚರಸ್ವಾಮಿಗೆ ಪಂಚಾಮೃತ ಅಭಿಷೇಕ, ತೈಲಾಭಿಷೇಕ, ಸಂಕಲ್ಪ ಹೋಮ, ಇತ್ಯಾದಿಗಳನ್ನು ಮಾಡಿಸುವುದರಿಂದ ಇನ್ನು 30 ವರ್ಷಕಾಲ ಶನೇಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬಹುದು.

2. ಧನಸ್ಸು:

ದಿನ ಭವಿಷ್ಯ

ಸಾಡೇಸಾತಿ ಕೊನೆಯ ಹಂತವಾದ್ದರಿಂದ (ಎರಡೂವರೆ ವರ್ಷ) ಈ ದೋಷವಿರೋ ರಾಶಿಯವರು ಶನೇಶ್ಚರ ಸ್ವಾಮಿಗೆ ತೈಲಾಭಿಷೇಕ, ಸಂಕಲ್ಪ ಹೋಮ ಇತ್ಯಾದಿಗಳನ್ನು ಮಾಡಿಸಿದರೆ ಶತ್ರುಭಯ, ವಿದ್ಯಾಹೀನತೆ, ಗೃಹ ಕಲಹ, ದುಷ್ಟ ಮಿತ್ರರ ಸಹವಾಸ ಇತ್ಯಾದಿಗಳು ಪರಿಹಾರವಾಗುತ್ತೆ.

3. ಮಕರ:

ದಿನ ಭವಿಷ್ಯ

ಜನ್ಮದಲ್ಲಿ ಎರಡೂವರೆ ವರ್ಷ ಶನಿ ನೆಲೆಸುವುದರಿಂದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ. ಇದರೊಂದಿಗೆ ಜನ್ಮ ಶನಿ ಕಾಡುವಾಗ ಸುಳ್ಳು ಹೇಳುವಿಕೆ, ಮೋಸ, ವಂಚನೆ ಮಾಡುವ ಬುದ್ಧಿ, ಒರಟುತನ, ಚಂಚಲ ಬುದ್ಧಿ, ಅತಿಕೋಪ, ಕೆಟ್ಟ ಜನರ ಸಹವಾಸ ಮಾಡುವಂತಹ ಬುದ್ಧಿಯನ್ನು ಕೊಡುವುದರಿಂದ ತೈಲಾಭಿಷೇಕ ಮಾಡಿಸಿದರೆ ದೋಷಗಳಿಂದ ಮುಕ್ತರಾಗಬಹುದು.

4. ಕುಂಭ:

ದಿನ ಭವಿಷ್ಯ

ಸಾಡೇಸಾತಿ ಪ್ರಾರಂಭವಾಗುವುದರಿಂದ ತೈಲಾಭಿಷೇಕ, ಸಂಕಲ್ಪ ಹೋಮ, ಪಂಚಾಮೃತ ಅಭಿಷೇಕ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಂಡು ಶನಿ ದೋಷ ನಿವಾರಣೆ ಮಾಡಿಕೊಳ್ಳಬಹುದು.

ಶನಿ ಮುಕ್ತಿ ನೀಡುವ ರಾಶಿಗಳು;

ಮೇಷ ರಾಶಿ:

ದಿನ ಭವಿಷ್ಯ

ಶನಿಯು ಮಕರ ರಾಶಿಗೆ ಸಂಚರಿಸುವ ನಿಟ್ಟಿನಲ್ಲಿ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ತೊಂದರೆ, ಶತ್ರು ಕಾಟ, ಆರೋಗ್ಯ ಸಮಸ್ಯೆ ತಲೆದೋರಲಿದೆ. ಕುಟುಂಬದಲ್ಲಿ ಮನಸ್ತಾಪ, ಆದಾಯಕ್ಕಿಂತ ಖರ್ಚು ಹೆಚ್ಚಳವಾಗಲಿದೆ. ಕೆಲವೊಮ್ಮೆ ಯಾವುದೇ ಕೆಲಸಕ್ಕೆ ಮುನ್ನುಗ್ಗುವ ಮೊದಲು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ.

ವೃಷಭ ರಾಶಿ:

ದಿನ ಭವಿಷ್ಯ

ಈ ರಾಶಿಯ ಒಂಬತ್ತನೇ ಮನೆಯಲ್ಲಿ ಶನಿ ಸಂಚರಿಸಲಿದ್ದು, ಅನಾವಶ್ಯಕವಾಗಿ ಅಪವಾದ ಕೇಳುವ ಪ್ರಮೇಯ ಒದಗಿ ಬರಲಿದೆ. ಮಾನಸಿಕ ನೆಮ್ಮದಿ ಕೆಡುವ ಸಾಧ್ಯತೆ ಹೆಚ್ಚು. ನಿಮ್ಮ ಆಪ್ತರು, ಬಂಧುಗಳು ನಿಮ್ಮಿಂದ ದೂರವಾಗಬಹುದು. ಹೃದಯ ಸಂಬಂಧಿ ತೊಂದರೆ ಕಾಡಬಹುದು. ವೃಷಭ ರಾಶಿಗೆ ಮಿಶ್ರ ಫಲ ಇದ್ದಿರುವುದರಿಂದ ಹಂತ, ಹಂತವಾಗಿ ಏಳಿಗೆ ಕಾಣಲಿದ್ದೀರಿ.

ಮಿಥುನ ರಾಶಿ:

ದಿನ ಭವಿಷ್ಯ

ಈ ರಾಶಿಯ ಎಂಟನೇ ಮನೆಯಲ್ಲಿ ವಾಸವಾಗಿದ್ದು, ಶನಿ ಪ್ರವೇಶದಿಂದಾಗಿ ನೀವು ಕೈಗೊಳ್ಳುವ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿದೆ. ಕೌಟುಂಬಿಕ ಕಲಹಕ್ಕೆ ಅವಕಾಶ ಕೊಡದಿರಿ, ಇದರಿಂದ ವೈಮನಸ್ಸು ಹೆಚ್ಚಾಗಬಹುದು. ಧನ ನಷ್ಟವಾಗಲಿದೆ. ಅಪಘಾತ ಭಯವಿದ್ದು, ಸಂಚಾರದ ವೇಳೆ ಎಚ್ಚರಿಕೆ ವಹಿಸಿ. ನಿಮ್ಮ ಸ್ನೇಹಿತವರ್ಗವೇ ನಿಮ್ಮ ವಿರುದ್ಧ ತಿರುಗಿಬೀಳಲಿದ್ದಾರೆ.

ಕಟಕ ರಾಶಿ:

ದಿನ ಭವಿಷ್ಯ

ಈ ರಾಶಿಯ ಏಳನೇ ಮನೆಗೆ ಶನಿ ಸಂಚರಿಸಲಿದ್ದು, ಅನಾವಶ್ಯಕ ತಿರುಗಾಟದಿಂದ ಖರ್ಚು, ವೆಚ್ಚಗಳು ಹೆಚ್ಚಲಿದೆ. ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದ್ದು, ನಿಮ್ಮ ಬದುಕಿನ ರೂವಾರಿ ನೀವೇ ಆಗಿದ್ದರಿಂದ ಭವಿಷ್ಯದ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಿ. ಅನಾರೋಗ್ಯ ಸಮಸ್ಯೆ ಕಾಡಬಹುದು.

ಸಿಂಹ ರಾಶಿ:

ದಿನ ಭವಿಷ್ಯ

ಈ ರಾಶಿಯ ಆರನೇ ಮನೆಗೆ ಶನಿ ಪ್ರವೇಶವಾಗಲಿದ್ದು, ನಿಮಗೆ ಅಚ್ಚರಿಯ ಫಲವನ್ನು ನೀಡಲಿದ್ದಾನೆ. ಸಕಲ ಇಷ್ಟಾರ್ಥವನ್ನು ನೆರವೇರಿಸಲಿದ್ದು, ನೀವು ನಂಬಿರುವ ಮನೆ ದೇವರಿಗೆ ಪೂಜೆ ಸಲ್ಲಿಸಿ. ಆರೋಗ್ಯ, ಉದ್ಯೋಗ ಭಾಗ್ಯ ಕರುಣಿಸಲಿದ್ದು, ಹಂತ, ಹಂತವಾಗಿ ಜೀವನದಲ್ಲಿ ಅಭಿವೃದ್ಧಿ ಕಂಡು ಬರಲಿದೆ.

ಕನ್ಯಾ ರಾಶಿ:

ದಿನ ಭವಿಷ್ಯ

ಈ ರಾಶಿಯ 5ನೇ ಮನೆಗೆ ಶನಿ ಸ್ಥಾನ ಪಲ್ಲಟವಾಗಲಿದ್ದು, ಜೀವನದಲ್ಲಿ ಕಿರಿಕಿರಿ ಎದುರಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜತೆ ಘರ್ಷಣೆಗೆ ಇಳಿಯದಿರಿ. ಹಿರಿಯ ಅಧಿಕಾರಿಗಳ ಸೂಚನೆಯನ್ನು ಕಡೆಗಣಿಸದಿರಿ. ಧನ ವ್ಯಯವಾಗಲಿದೆ. ಸ್ಥಳ, ಉದ್ಯೋಗ ಬದಲಾವಣೆ ಸಾಧ್ಯತೆ ಇದ್ದು, ಅಪವಾದ ಭೀತಿ ಎದುರಿಸಲಿದ್ದೀರಿ.

ತುಲಾ ರಾಶಿ:

ದಿನ ಭವಿಷ್ಯ

ಈ ರಾಶಿಯ ನಾಲ್ಕನೆ ಮನೆಯನ್ನು ಶನಿ ಪ್ರವೇಶಿಸಲಿದ್ದು, ನಿಮಗೆ ಮಿಶ್ರಫಲ ನೀಡಲಿದ್ದಾನೆ. ಕಷ್ಟ-ಕಾರ್ಪಣ್ಯಗಳು ಕರ್ಮ ಫಲದ ಮೇಲೆ ಅನುಭವಿಸಬೇಕಾಗಲಿದೆ. ಕೋರ್ಟ್, ಕಚೇರಿ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಬಂಧು, ಬಳಗ ದೂರವಾಗುವ ಸಾಧ್ಯತೆ ಇದೆ. ಖರ್ಚು, ವೆಚ್ಚಗಳು ಅಧಿಕವಾಗಲಿದೆ. ಅನಾವಶ್ಯಕ ಹಣ ವ್ಯಯಕ್ಕೆ ಕಡಿವಾಣ ಹಾಕಿ.

ಮೀನ ರಾಶಿ:

ದಿನ ಭವಿಷ್ಯ

ಈ ರಾಶಿಯ ಹನ್ನೊಂದನೆ ಮನೆಗೆ ಶನಿ ಪ್ರವೇಶವಾಗಲಿದ್ದು ನಿಮಗೆ ಉತ್ತಮ ಫಲವನ್ನು ಕರುಣಿಸಲಿದ್ದಾನೆ. ಈವರೆಗೂ ಮಿಶ್ರಫಲ ಅನುಭವಿಸುತ್ತಿದ್ದ ನೀವು ಇನ್ಮುಂದೆ ದೇವರ ಅನುಗ್ರಹದಿಂದ ಕೈಹಾಕಿದ ಕಾರ್ಯಗಳು ಕೈಗೂಡಲಿದೆ. ದಾಯಾದಿ ಕಲಹ ಕಂಡುಬರಲಿದೆ. ಧೈರ್ಯಗೆಡದೆ ಸಂಸಾರ ಮುನ್ನಡೆಸಿ. ಪತಿ, ಪತ್ನಿ ನಡುವೆ ಭಿನ್ನಾಭಿಪ್ರಾಯ ತಲೆದೋರದಂತೆ ಎಚ್ಚರಿಕೆ ವಹಿಸಿ.

ಪರಿಹಾರ: ಶನೇಶ್ಚರನ ಈ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಶನಿಕಾಟದಿಂದ ಮುಕ್ತಿ ಪಡೆಯಬಹುದು. ಶನಿಕಾಟದಿಂದ ಸಂಪೂರ್ಣ ಮುಕ್ತಿ ಹೊಂದುವುದು ಕಷ್ಟ. ಆದರೆ ಬೆಟ್ಟದಷ್ಟು ಬರುವ ಕಷ್ಟವನ್ನು ಕೊಂಚ ನಿವಾರಿಸಲು ಶಿವಸ್ಮರಣೆ, ಶಿವನ ಪೂಜೆ ಮಾಡಬೇಕು. ಬಡ ಬಗ್ಗರಿಗೆ, ದಾನ-ಧರ್ಮ ಮಾಡಿದರೆ ಶನಿಯನ್ನು ಸಂತೃಪ್ತಿಗೊಳಿಸಬಹುದು. ಶನಿವಾರ ಆಂಜನೇಯ ದರ್ಶನ, ಭಜರಂಗಿಗೆ ವಿಶೇಷ ಪೂಜೆ ಮಾಡಿದರೆ ಸಮಸ್ಯೆ ನೀಗಲಿದೆ. ಆಯಾಯ ನಕ್ಷತ್ರ ರಾಶಿಯವರಿಗೆ ಜ್ಯೋತಿಷಿಗಳ ಸಲಹೆ ಮೇರೆಗೆ ಶನಿದೋಷ ನಿವಾರಣೆಯ ಹೋಮ-ಹವನ ನಡೆಸಬೇಕಾಗುತ್ತೆ.