ಬಿಪಿಎಲ್ ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಇನ್ಮುಂದೆ ರೇಷನ್ ಬದಲು ಹಣ ನೀಡಲು ಚಿಂತನೆ ನಡೆಸಿದ ಕೇಂದ್ರ ಸರ್ಕಾರ..

0
1007

ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಬಹುದಿನಗಳಿಂದ ಹಲವಾರು ಗೊಂದಲದ ಮಾತುಗಳು ಕೇಳಿ ಬರುತ್ತಾನೆ ಇವೆ. ಒಂದು ವಿಷಯವಾಗಿ ಪಡಿತರ ವಿತರಣೆಯಲ್ಲಿ ವಿಳಂಭವಾಗಿ ಹಲವಾರು ವಿರೋಧಗಳು ಕೇಳಿ ಬಂದವು ನಂತರ ರೇಷನ್ ಅಕ್ರಮಗಳ ಪ್ರಕರಣಗಳು ಮೂಡಿಬಂದವು ಮತ್ತು ನಕಲಿ ಪಡಿತರ ಕಾರ್ಡ್-ಗಳ ಹಾವಳಿಗಳು ಹೆಚ್ಚಾಯಿತು ಇದನೆಲ್ಲ ಹತ್ತಿಕಲು ಕೋಪನ್ ವ್ಯವಸ್ಥೆ ಮಾಡಲಾಯಿತು. ಈ ವಿಷಯವಾಗಿ ವ್ಯಾಪಕ ವಿರೋಧಗಳು ಕೇಳಿ ಬಂದವು ಈ ಬದಲಾವಣೆಯ ನಂತರ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಯಿತು. ಹೀಗೆ ಒಂದಿಲ್ಲದೊಂದು ವಿವಾದ ಸೃಷ್ಟಿಸಿದ ಪಡಿತರ ಈಗ ಹೊಸ ನಿಯಮ ಜಾರಿ ಮಾಡಲು ಚಿಂತನೆ ನಡೆಸಿದೆ.

ಏನಿದು ಸುದ್ದಿ ?

ಬಿಪಿಎಲ್ ಪಡಿತರ ಚೀಟಿದಾರರಿಗೆ ಇನ್ನು ಮುಂದೆ ಅಕ್ಕಿಯ ಬದಲು ಹಣ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಕುರಿತು ಮಾಹಿತಿ ನೀಡಿದ್ದು, ದಾದರ್, ಪುದುಚೇರಿ ಹಾಗೂ ಛತ್ತೀಸ್ ಗಡದಲ್ಲಿ ಪ್ರಾಯೋಗಿಕವಾಗಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿಯ ಬದಲು ಹಣ ನೀಡಲಾಗುತ್ತಿದೆ. ಇದನ್ನು ಎಲ್ಲಾ ಕಡೆ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ. ಅದೇರೀತಿ ಕರ್ನಾಟಕದಲ್ಲಿ ಸುಮಾರು 6.11 ಕೋಟಿ ಜನಸಂಖ್ಯೆಯಿದ್ದು, 4.43 ಕೋಟಿ ಪಡಿತರ ಫಲಾನುಭವಿಗಳು ಇದ್ದಾರೆ. 26 ಲಕ್ಷ ಎಂಎಂಟಿ ಆಹಾರಧಾನ್ಯವನ್ನು ಕೇಂದ್ರದಿಂದ ಕರ್ನಾಟಕಕ್ಕೆ ಕೊಡಲಾಗುತ್ತಿದೆ. 1500 ಕೋಟಿ ರೂ. ಸಬ್ಸಿಡಿ ಹಣವನ್ನು ರಾಜ್ಯಕ್ಕೆ ಕೊಡಬೇಕಿದ್ದು, ಈಗಾಗಲೇ 300 ಕೋಟಿ ರೂ. ಪಾವತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೆ ವಿಷಯವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವರು ಪುದುಚೇರಿಯಲ್ಲಿ ಹಣದ ಬದಲು ಹಿಂದಿನ ವ್ಯವಸ್ಥೆಯಲ್ಲೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕೊಡಲಿ ಎಂದು ಅಲ್ಲಿನ ಕಾರ್ಡ್​ದಾರರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಅಕ್ಕಿ ಬದಲಿಗೆ ಹಣ ಕೊಡುವ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಯುತ್ತಿದೆ. ಈ ವ್ಯವಸ್ಥೆಯಿಂದ ಜನರಿಗೆ ಆದಷ್ಟು ಅನುಕೂಲಗಳು ಆಗಲಿದೆ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳನ್ನು ಖರೀಧಿಸುತ್ತಾರೆ. ಮತ್ತು ರೇಷನ್ ಕಾರ್ಡ್ ನಲ್ಲಿ ಅಕ್ರಮಗಳಿಗೆ ತಡೆ ಹಾಕಿದನಂತೆ ಆಗುತ್ತದೆ. ಎಂಬ ವಿಚಾರವಾಗಿ ಈ ವ್ಯವಸ್ಥೆ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

ಪಡಿತರ ಬದಲು ಹಣ ಸ್ವೀಕರಿಸುವರ?

ತಿಂಗಳಿಗೊಮ್ಮೆ ಸಿಗುವ ಅಕ್ಕಿ ಗೋಧಿ ಇತರೆ ರೇಷನ್ ಪದಾರ್ಥಗಳಿಂದ ಅದೆಷ್ಟೋ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದರು. ಒಂದು ವೇಳೆ ಈ ವ್ಯವಸ್ಥೆಯನ್ನು ಬದಲಿಸಿ ಹಣ ನೀಡಿದರೆ ಜನರು ಈ ಹಣವನ್ನು ಬೇರೋದಕ್ಕೆ ಬಳಕೆ ಮಾಡಿ ಆಹಾರ ಖರೀದಿಸಲು ಹಣ ಇಲ್ಲದಂತೆ ಆಗುತ್ತೆ ಎನ್ನುವುದು ಬಹುತೇಕರ ಅಭಿಪ್ರಾಯವಾದರೆ, ಕೆಲವೊಬ್ಬರು ಈ ಅಕ್ಕಿ ಗೋಧಿಯನ್ನು ತಿನ್ನಲು ಬಳಕೆ ಮಾಡುವುದಿಲ್ಲ ಅವುಗಳನ್ನು ಮಾರಾಟಮಾಡಿ ಬಂದ ಹಣದಿಂದ ಹೆಚ್ಚಿನ ಗುಣ ಮಟ್ಟದ ಆಹಾರಗಳನ್ನು ಪಡೆದುಕೊಳ್ಳುವರು ಆದಕಾರಣ ಸರ್ಕಾರವೇ ನೇರವಾಗಿ ಪಡಿತರಿಗೆ ಹಣ ನೀಡಿದರೆ ಉತ್ತಮವೆಂದು ಕೆಲವೋಬ್ಬರ ವಿಚಾರದ ಹಿನ್ನೆಲೆಯಲ್ಲಿ ಈ ನಿಯಮ ಜಾರಿ ಮಾಡುವುದು ಎಷ್ಟೊಂದು ಪ್ರಯೋಜನವಾಗಿ ಯಶಸ್ವಿಯಾಗುತ್ತೆ ಎಂದು ಕಾದು ನೋಡಬೇಕಿದೆ.

Also read: ವಾಹನ ಪ್ರಿಯರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್; ಹೊಸ ಬೈಕ್ ಮತ್ತು ಸ್ಕೂಟರ್‌ಗಳ ಮೇಲೆ ಹೆಚ್ಚುವರಿ ತೆರಿಗೆ..