2014 ಎಲೆಕ್ಷನ್-ನಲ್ಲಿ ಮತ ಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ ಸಯ್ಯದ್ ಎಂಬ ವ್ಯಕ್ತಿ: ಇದು ನಿಜವಿರಬಹುದಾ??

0
397

ಚುನಾವಣೆಯಲ್ಲಿ ಮತ ಹಾಕಲು ಬಳಸುವ ವಿದ್ಯುನ್ಮಾನ ಮತ ಯಂತ್ರಗಳ ಕುರಿತು ಹಲವು ದಿನಗಳಿಂದ ಅನುಮಾನಗಳು ಮೂಡಿದವು ಇದರ ಕುರಿತು ಹಲವಾರು ಚರ್ಚೆಗಳು ಕೂಡ ನಡೆದವು. ಇದೆ ಇವಿಎಂ ಕುರಿತಂತೆ ಹೊಸ ಅಲೆಯೊಂದು ಹರಡಿದ್ದು 2014 ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎನ್ಡಿಎ ಮೈತ್ರಿಕೂಟದ ಜಯದ ಹಿಂದೆ ಇವಿಎಂ ಹ್ಯಾಕ್ ಮಾಡಲಾಗಿದೆ ಎಂಬ ಭಾರೀ ಆರೋಪವೊಂದು ಕೇಳಿ ಬಂದಿದೆ.


Also read: ರಾತ್ರೋರಾತ್ರಿ ಖಾಲಿ ಸೈಟ್-ನಲ್ಲಿ ತಾಯಿ ಭುವನೇಶ್ವರಿಯ ಪುತ್ಥಳಿ ಪ್ರತ್ಯಕ್ಷವಾದ ಕಾರಣ ಕೇಳಿದ್ರೆ ನೀವು “ಹೀಗೂ ಉಂಟೆ” ಅಂತ ಹೇಳ್ತೀರ!

2014 ಚುನಾವಣೆಯಲ್ಲಿ ಇವಿಎಂ ಹ್ಯಾಕ್?

ಹೌದು ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ಆಯೋಜಿಸಿದ ಇವಿಎಂ ಹ್ಯಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೇರಿಕ ಮೂಲದ ಸೈಬರ್ ತಜ್ಞ ಸಯಿದ್ ಶುಜಾ ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾದ್ಯ ಎಂದು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಈಗಾಗಲೇ ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ‘ಇವಿಎಂ ದುರ್ಬಳಕೆ’ ನಡೆದಿದೆ. ಹೇಗೆಂದರೆ ಬ್ಲೂಟೂತ್ ನಿಂದ ಇವಿಎಂ ಹ್ಯಾಕ್ ಮಾಡಬೇಕಾದರೆ ಗ್ರಾಫೈಟ್ ಹೊಂದಿರುವ ಟ್ರಾನ್ಸ್ಮಿಟರ್ ಇದ್ದರೆ ಸಾದ್ಯವಾಗುತ್ತೆ ಅದೇರೀತಿ 2014ರ ಲೋಕಸಭಾ ಚುನಾವಣೆಯಲ್ಲಿ ಟ್ರಾನ್ಸ್ಮಿಟರ್‌ಗಳನ್ನು ಬಳಸಲಾಗಿದೆ. ಮತ್ತು 7hz ಕಡಿಮೆ ಕಂಪನಾಂಕದ ಮಾಡ್ಯುಲೇಟರ್ ಬಳಸಿ ಹ್ಯಾಕ್ ಮಾಡಲಾಗಿದೆ ಎಂದು ಸೈಬರ್ ತಜ್ಞ ಸಯೀದ್ ಶುಜಾ ಹೇಳಿದ್ದಾರೆ.


Also read: ಪಾಸ್-ಪೋರ್ಟ್ ಇಲ್ಲ ಅಂತ ವಿದೇಶ ಪ್ರವಾಸ ಮಾಡೋಕೆ ಆಗ್ತಿಲ್ಲ ಅಂತ ಯೋಚನೆ ಮಾಡ್ಬೇಡಿ, ಇನ್ಮೇಲಿಂದ ಈ ದೇಶಗಳಿಗೆ ಹೋಗಿಬರಲು ಅಧಾರ್ ಕಾರ್ಡ್ ಸಾಕು!

ಸಾಕ್ಷಿಯಾಗಿದ್ದ ಗೋಪಿನಾಥ್ ಹತ್ಯೆ:

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು. ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳನ್ನು ನಾನು ಸಲ್ಲಿಸುತ್ತೇನೆ. ಮತ್ತು ಹ್ಯಾಕ್ ಮಾಡಿದ ತಂಡದಲ್ಲಿ ನಾನೂ ಇದ್ದೆ. ಇದೊಂದು ಬಹುದೊಡ್ಡ ಜಾಲವಾಗಿದ್ದು, ಹ್ಯಾಕಿಂಗ್ ಬಗ್ಗೆ ತಿಳಿದಿದ್ದ ಗೋಪಿನಾಥ್ ಮುಂಡೆಯವರನ್ನು ಹತ್ಯೆ ಮಾಡಲಾಯಿತು. ಇನ್ನು ಈ ಕುರಿತು ಆರ್ಟಿಐ ಅರ್ಜಿ ಸಲ್ಲಿಸಿದ್ದ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರನ್ನೂ ಕೊಲ್ಲಲಾಯಿತು ಎಂದು ಆರೋಪಿಸಿದ್ದಾರೆ.. ಈ ಕುರಿತು ಯಾವುದೇ ದಾಖಲೆಗಳನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದು ಸೈಯದ್ ತಿಳಿಸಿದ್ದಾರೆ.

ಹ್ಯಾಕ್ ಮಾಡಿಯೇ ಆಮ್ ಆದ್ಮಿ ಪಾರ್ಟಿ ಗೆದ್ದಿದು?

ಸೈಯದ್ ಶುಜಾ ಹೇಳುವ ಪ್ರಕಾರ ದಿಲ್ಲಿಯಲ್ಲಿ ಟ್ರಾನ್ಸ್‌ಮಿಶನ್ ನಿಲ್ಲಿಸಿದಾಗ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ವಿಜಯಿಯಾಯಿತು ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ, ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗ ಆರಂಭಿಸಿದ ಟ್ರಾನ್ಸ್‌ಮಿಶನನ್ನು ತಡೆಯಲಾಯಿತು. ಮತ್ತು ಆಮ್ ಆದ್ಮಿ ಪಾರ್ಟಿಗೆ ಸಹಾಯವಾಗುವಂತೆ ನಾವು ಫ್ರೀಕ್ವೆನ್ಸಿಯನ್ನು ಬದಲಾಯಿಸಿದೆವು. ವಾಸ್ತವಿಕ ಫಲಿತಾಂಶವು 2009ರ ಚುನಾವಣಾ ಫಲಿತಾಂಶವನ್ನು ಹೋಲುತ್ತಿತ್ತು 2008 ಅಕ್ಟೋಬರ್ 29ರಂದು ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, 70 ಸ್ಥಾನಗಳ ಪೈಕಿ ಕಾಂಗ್ರೆಸ್ 43, ಬಿಜೆಪಿ 23, ಬಹುಜನ ಸಮಾಜ ಪಕ್ಷ 2, ಲೋಕಜನ ಶಕ್ತಿ ಪಕ್ಷ ಮತ್ತು ಪಕ್ಷೇತರರು ತಲಾ ಒಂದು ಸ್ಥಾನಗಳನ್ನು ಗೆದ್ದಿದ್ದಾರೆ. ಎಂದು ಸೈಯದ್ ಶುಜಾ ಹೇಳಿದರು.


Also read: ಆದಾಯ ತೆರಿಗೆ ಇಲಾಖೆಯಿಂದ ಬಿಗ್ ಶಾಕ್; ಇನ್ಮುಂದೆ 20 ಸಾವಿರದವರೆಗೆ ನಗದು ವ್ಯವಹಾರ ಮಾಡಿದರೆ ಮನೆಗೆ ಐಟಿ ನೋಟಿಸ್..

ಸುಳ್ಳು ಎಂದ ಚುನಾವಣಾ ಆಯೋಗ:

ಬ್ಲೂಟೂತ್ ಮೂಲಕ ಈ ಸಾಧನವನ್ನು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಫೈಟ್ ಆಧಾರಿತ ಟ್ರಾನ್ಸ್ ಮಿಟರ್ ಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಭಾರತೀಯ ಚುನಾವಣೆ ಆಯೋಗವು, ಇವಿಎಂಗಳನ್ನು ಭದ್ರತೆ ಮತ್ತು ಸುರಕ್ಷತೆಯಲ್ಲಿ ಇಡಲಾಗುತ್ತದೆ. ಇದನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ. ಈ ರೀತಿ ಆರೋಪ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನು ರಿಲಾಯನ್ಸ್ ಕಂಪೆನಿಯು ಕೂಡಾ ಕಡಿಮೆ ಫ್ರೀಕ್ವೆನ್ಸಿ ನೀಡಿ ಸಹಕರಿಸಿತ್ತು ಎದು ಆರೋಪ ಮಾಡಿದ್ದಾರೆ. ಸದ್ಯ ಇದೊಂದು ಗಂಭೀರ ಪ್ರಕರಣವಾಗಿ ರೂಪುಗೊಂಡಿದೆ.