ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಪುಂಡಾಟದ ಬಗ್ಗೆ ಹಿರಿಯ ನಟ ಅನಂತ್ ನಾಗ್-ಅವರ ಮಾತು ಕೇಳಿ, ಅವರು ಎಂಥ ಪ್ರಬುದ್ದರು ಅಂತ ಗೊತ್ತಾಗುತ್ತೆ!!

0
678

ತಮಿಳುನಾಡಿನಲ್ಲಿ ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಕಾವು ಜೋರಾಗಿದೆ. ಹಲವು ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಎಲ್ಲರೂ ಕೈ ಜೋಡಿಸಿದ್ದಾರೆ. ಅಲ್ಲದೆ ರಾಜಕೀಯ ಮರೆತು ನಾಯಕ, ನಟರು ಸಹ ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಿಸಿಯ ಕಾವು ನಮ್ಮ ಬೆಂಗಳೂರಿಗೂ ತಟ್ಟಿದ್ದು ಸ್ಯಾಂಡಲ್​ವುಡ್​ ಹಿರಿಯ ನಟ ಅನಂತ್​ ನಾಗ್​ ರಾಜ್ಯದ ಪರ ಟೊಂಕ ಕಟ್ಟಿ ನಿಲ್ಲುವುದಾಗಿ ತಿಳಿಸಿದ್ದಾರೆ.

ತಮಿಳುನಾಡು ಕಾವೇರಿ ವಿಚಾರದಲ್ಲಿ ಹಲವು ವರ್ಷಗಳಿಂದ ಘರ್ಷಣೆಯ ನಿಲುವನ್ನು ತೋರಿಸುತ್ತಿದೆ. ಇನ್ನು ತಮಿಳುನಾಡು ಮುಖಂಡರು ಕಾವೇರಿ ವಿಚಾರವಾಗಿ ಬಂದ್​ ನಡೆಸಿದ್ದಾರೆ. ಅಲ್ಲದೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆ ಇರೋದ್ರಿಂದ, ಇಲ್ಲಿನ ಜನರ ಪ್ರೀತಿಯನ್ನು ಗಳಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಠಿಸುತ್ತಿದೆ ಎಂಬ ಮಾತು ಬರುತ್ತಿದೆ.

ಇನ್ನು ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದ್ರೂ, ಎಂತಹದ್ದೇ ಪರಿಹಾರವನ್ನು ಸೂಚಿಸಿದ್ರು ತಮಿಳನಾಡು ಅಪಸ್ವರ ಎತ್ತೋದು ವಾಡಿಕೆ.

ಕೇಂದ್ರ ಸರ್ಕಾರ ಬಿಟ್ಟು ಬಿಡಿ ಇನ್ನು ಸುಪ್ರೀಂ ಕೋರ್ಟ್​​ ಒಂದು ನಿರ್ಧಾರವನ್ನು ಪ್ರಕಟಿಸಿದ್ರೂ ಸಹ ರಾಜಕಾರಣಿಗಳು ಒಪ್ಪೋದೆ ಇಲ್ಲ. ಸದ್ಯ ತಮಿಳುನಾಡಿನಲ್ಲಿ ಯಾವುದೇ ಚುನಾವಣೆ ಇಲ್ಲ. ಆದ್ರೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಪ್ರಕರಣವನ್ನು ಎತ್ತಿಕೊಂಡಿದ್ದಾರೆ. ಅಲ್ಲದೆ ನಟರು ತಮ್ಮ ತಮ್ಮ ರಾಜಕೀಯವನ್ನು ನೀರಿನಲ್ಲಿ ಮಾಡುತ್ತಿದ್ದಾರೆ. ಅಲ್ಲದೆ ಹಿಂದಿನ ರಾಜಕಾಣಿಗಳು ಮಾಡಿದಂತೆಯೇ ಈಗಿನ ತಲೆ ಮಾರಿನ ರಾಜಕಾರಣಿಗಳು ಧರಣಿ ನಡೆಸುತ್ತಿದ್ದಾರೆ. ಅಲ್ಲದೆ ಹಲವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡ್ತಾ ಇದ್ದಾರೆ.

ಇನ್ನು ಕನ್ನಡ ನೆಲ ಜಲ ಹಾಗೂ ಭಾಷೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕಿದೆ. ಇನ್ನು ಕನ್ನಡಿಗರ ಜೊತೆ ನಾನು ಸಹ ಟೊಂಕ ಕಟ್ಟಿ ನಿಂತಿದ್ದೇನೆ ಎಂದು ಅನಂತ್​ ಕುಮಾರ್​ ತಿಳಿಸಿದ್ದಾರೆ.