ಇದೇನಪ್ಪ ಅಂತೀರಾ ಒಂದು ಸಮೀಕ್ಷೆ ಪ್ರಕಾರ ನೀವು ಸೆಕ್ಸ್ ಮಾಡೋದು ಬಿಟ್ರೆ ನೀವು ೧೫೦ ವರ್ಷ ಬದುಕಬಹುದು ಅಂತ ಬಯೋಗ್ರಂಟಾಲಜಿ ರಿಸರ್ಚ್ ಫೌಂಡೇಶನ್ ಎನ್ನುವ ಬ್ರಿಟನ್ನ ಸಂಸ್ಥೆ ಹೊಸ ಸಮೀಕ್ಷೆಯೊಂದನ್ನು ನಡೆಸಿದ್ದು, ಸೆಕ್ಸ್ನಲ್ಲಿ ಭಾಗಿಯಾಗದೇ ಇರೋದ್ರಿಂದ ದೀರ್ಘಕಾಲ ಬದುಕಬಹುದು ಎಂದು ಹೇಳಿದೆ.
ಜೊತೆಗೆ ಹೆಚ್ಚು ತಿಂದು ಹೆಚ್ಚು ವ್ಯಾಯಾಮ ಮಾಡುವುದಕ್ಕಿಂತ ಹಿತ ಮಿತವಾದ ಆಹಾರ ತಿಂದು ಸಾಮಾನ್ಯವ್ಯಾಯಾಮಗಳನ್ನು ಮಾಡಿದರೆ ಸಾಕು ಎಂದು ಸಮೀಕ್ಷಾ ವರದಿ ಹೇಳಿದೆ. ಒಂದೊಮ್ಮೆ ನೂರು ವರ್ಷ ಬದುಕುವುದು ಎಂದರೆ ಸಾಮಾನ್ಯ ಸಂಗತಿ. ಆದರೆ ಈಗ ಹಾಗಲ್ಲ. ಒತ್ತಡದ ಸನ್ನಿವೇಶಗಳು ಮಾನವನ ಆಯುಷ್ಯವನ್ನು ಕಡಿಮೆಗೊಳಿಸುತ್ತಿವೆ ಎಂದು ಹೇಳಿದೆ.
ಮದುವೆ, ಮಕ್ಕಳು, ಕೌಟುಂಬಿಕ ಸಂಬಂಧದ ಗೊಂದಲಗಳಿಂದ ಒತ್ತಡಗಳು ಸಹಜವಾಗಿರುತ್ತದೆ. ಅಲ್ಲದೇ ತಡವಾಗಿ ವಿವಾಹವಾದರೆ ಇದರ ಪರಿಣಾಮ ಇನ್ನೂ ಹೆಚ್ಚಾಗಿರುತ್ತದೆ. ಆದ್ದರಿಂದ ಮನುಷ್ಯನ ಸಾಮರ್ಥ್ಯ ಕ್ಷೀಣಿಸಿರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.