ಬೆಂಗಳೂರಿನಲ್ಲಿ ಪೊಲೀಸರ ಸಹಕಾರದಲ್ಲೇ ನಡೆಯುತ್ತಿದೆ ಸೆಕ್ಸ್ ದಂದೆ; ನಕಲಿ ಆಟೋ ಡ್ರೈವರ್ ವೇಷ ತೊಟ್ಟು ಯುವಕರನ್ನು ಲಾಡ್ಜ್ ತರುತ್ತಿರುವ ವ್ಯಕ್ತಿಗಳು.!

0
1212

ಬೆಂಗಳೂರು ಎಂದರೆ ಅದೇನೋ ಒಂದು ಗೌರವವಿದೆ ಅನ್ನ ಹುಡಿಕೊಂಡು ಬಂದವರಿಗೆ ಎಂದು ಕೈ ಬಿಡದ ರಾಜ್ಯಧಾನಿಯ ಹೆಸರು ಕೆಡುಸುವ ಕೆಲಸ ಹಲವು ನಕಲಿ ವ್ಯಕ್ತಿಗಳು ಮಾಡುತ್ತಿದ್ದು, ಮೆಜೆಸ್ಟಿಕ್-ನಲ್ಲಿ ಬರುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹುಡಿಗಿರರನ್ನು ಕೊಡಿಸಿ ಹಣ ಗಳಿಸುತ್ತಿರುವುದು ಇದೆಲ್ಲ ಪಬ್ಲಿಕ್ ಟಿವಿ ನಡೆಸಿದ ಕಾರ್ಯಚರಣೆಯಲ್ಲಿ ಭಯಲಾಗಿದ್ದು, ಆಟೋ ಡ್ರೈವರ್ನೆಪದಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಇದರು ಬೇರೆ ಊರುಗಳಿಂದ ಬರುವ ಯುವಕರನ್ನು ಮಾತನಾಡಿಸಿ ಎಲ್ಲ ಅವರೇ ರೂಮ್ ಗೆ ಕರೆದುಕೊಂಡು ಹೋಗಿ ಹುಡುಗಿಯರನ್ನು ಕೊಡಿಸಿ ಸಾವಿರಾರು ರೂ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

@publictv

ಹೌದು ಆಟೋ ಡ್ರೈವರ್ ನೆಪದಲ್ಲಿ ದೊಡ್ಡ ಮಟ್ಟದ ದಂದೆ ನಡೆಯುತ್ತಿದೆ. ಮೆಜೆಸ್ಟಿಕ್ ನ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಮತ್ತು ರೈಲ್ವೆ ನಿಲ್ದಾಣದಿಂದ ಯುವಕರು ಮೆಜೆಸ್ಟಿಕ್ ಅಂಡರ್ ಪಾಸ್ ಒಳಗಡೆ ಬರೋದನ್ನೇ ಈ ನಕಲಿ ಆಟೋ ಡ್ರೈವರ್-ಗಳು ಗಮನಿಸುತ್ತಾ ಇರುತ್ತಾರೆ. ಯುವಕರು ಅಂಡರ್ ಪಾಸ್ ನಿಂದ ಮೇಲೆ ಬಂದು ನಿಂತುಕೊಂಡರೆ ಸಾಕು, ನಿಜವಾದ ಆಟೋ ಡ್ರೈವರ್ ಗಳಂತೆ ವೇಷ ತೊಟ್ಟ ನಕಲಿ ಆಟೋ ಡ್ರೈವರ್ ಗಳು ಯುವಕರ ಬಳಿಗೆ ಬಂದು ಎಲ್ಲಿ ಹೋಗಬೇಕು ಸರ್, ಹುಡುಗಿ ಬೇಕಾ? ರೂಮಿಗೆ ಹೋಗೋಣ್ವ? ಲಾಡ್ಜಿಗೆ ಹೋಗೋಣ್ವ ಎಲ್ಲಾ ವ್ಯವಸ್ಥೆ ಇದೆ ಎಂದು ಯುವತಿಯರ ಫೋಟೋ ತೋರಿಸಿ ಬನ್ನಿ ಎಂದು ಸೆಕ್ಸ್ ಆಫರ್ ಕೊಟ್ಟು ಕರೆದುಕೊಂಡು ಹೋಗುತ್ತಾರೆ.

@publictv

ಈ ದಂಧೆಯನ್ನ ಮೆಜೆಸ್ಟಿಕ್ ಅಂಡರ್ ಪಾಸ್ ಒಳಗಡೆ ಹೋಗಿ ಮೆಟ್ರೋ ನಿಲ್ದಾಣದ ಕಡೆಗೆ ಹೋಗುವ ಅಂಡರ್ ಪಾಸ್ ಮೇಲೆ ನಿಂತುಕೊಂಡೆವು. ಆಗ ಬೇರೆ ಡ್ರೈವರ್ ಗಳು ಜನರಲ್ಲಿ ಯಾವ ಕಡೆ ಹೋಗಬೇಕು ಬನ್ನಿ ಕರೆದುಕೊಂಡು ಹೋಗುತ್ತೇವೆ ಅಂತಾರೆ. ಆದರೆ ನಕಲಿ ಆಟೋ ಡ್ರೈವರ್ ಗಳು ಯುವಕರ ಬಳಿಗೆ ಮಾತ್ರ ಬರುತ್ತಾರೆ ಬಂದು ಹುಡುಗಿ ಫೋಟೋ ತೋರಿಸಿ ಹಣದ ವಿಚಾರ ಮಾತನಾಡಿ ವಿವರಣೆ ಕೊಟ್ಟು ಕರೆದುಕೊಂಡು ಹೋಗಿ ದಂದೆ ನಡೆಸುತ್ತಾರೆ. ಹೀಗೆ ಅಲ್ಲಿ ನಿಂತ ಆಟೋ ಡ್ರೈವರ್ ಯುವಕರನ್ನು ಕರೆದು ಮಾತನಾಡಿಸಿ ಎಲ್ಲಿಗೆ ಹೋಗಬೇಕು? ಹುಡುಗಿಯರು ಬೇಕಾ ಎಂದು ಕೇಳುತ್ತಾನೆ.ಆಗ ಅವನ ಜೊತೆ ಮಾತನಾಡಿದ್ದಾಗ, ಯಾವುದೇ ಮೋಸ ಮಾಡುವುದಿಲ್ಲ ಕಲಾಸಿ ಪಾಳ್ಯದಲ್ಲಿ ಹೋಟೆಲ್ ಇದೆ ಅಲ್ಲಿ ಯಾವುದೇ ತೊಂದರೆ ಇಲ್ಲ, ಒಂದು ಹುಡುಗಿಗೆ 2000 ರೂ. ಅದರಲ್ಲಿ ಊಟ ವಸತಿ ಎಲ್ಲ ಸಿಗುತ್ತೆ, ನೀವೂ ಇಬ್ಬರು ಬಂದರೆ 4000 ಸಾವಿರ ಆಗುತ್ತೆ, ಎಂದು ನಂಬರ್ ಕೊಡುತ್ತಾನೆ. ನಂಬರ್ ಪಡೆದ ಪತಿನಿಧಿಗಳು ಕಾಲ್ ಮಾಡಿ ನಾವು ಮೂರು ಜನ ಇದ್ದವೆ ಎಷ್ಟು ಕೊಡಬೇಕು? ಮತ್ತೆ ಫೋಟೋದಲ್ಲಿ ತೋರಿಸಿದ ಹುಡುಗಿಯೇ ಇರುತ್ತಾಳೆ ಎಂದು ಕೇಳುತ್ತಾರೆ ಆಗ ವ್ಯಕ್ತಿ ಅವಳೇ ಇರುತ್ತಾಳೆ ಸರ್ ನಾನು ಯಾವುದೇ ಮೋಸ ಮಾಡುವುದಿಲ್ಲ ನನಗೂ ಮೂರು ಮಕ್ಕಳಿದ್ದಾರೆ ಹೇಗೆ ಮೋಸ ಮಾಡಲಿ ಹೇಳಿ ಎಂದು ಹೇಳುತ್ತಾನೆ.

@ publictv

ಮತ್ತೆ ನಮಗೆ ಕರೆದುಕೊಂಡು ಹೋದರೆ ಆಟೋ ಚಾರ್ಜ್ ಎಷ್ಟು ಎಂದು ಕೇಳುತ್ತಾರೆ. ಆಗ ನಾನೇ ವಾಪಸ್ ಬಂದು ಕರೆದುಕೊಂಡು ಬರುತ್ತೇನೆ ಅದಕ್ಕೆ 500 ರೂ. ಕೊಟ್ಟರೆ ಸಾಕು ಎಂದು ಹೇಳುತ್ತಾನೆ. ಮತ್ತೆ ಪೊಲೀಸ್ ಬರೋದಿಲ್ಲ ಯಾವುದೇ ತೊಂದರೆ ಆಗುವುದಿಲ್ಲ ಎಂದರೆ ಅದಕ್ಕೆ ಇಲ್ಲ ಸರ್ ಅವರಿಗೆ ಕಮಿಷನ್ ಹೋಗುತ್ತೆ ಅವರೇ ನಮಗೆ ಸಪೋರ್ಟ್ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿ ವ್ಯಕ್ತಿ ಪೊಲೀಸರಿಗೆ ಹಣ ಕೊಡುವ ದೃಶ್ಯ ಕ್ಯಾಮರದಲ್ಲಿ ಸೆರೆಯಾಗಿದೆ. ಅದಕ್ಕಾಗಿ ಮೆಜೆಸ್ಟಿಕ್ ಅಲ್ಲಿ ಈ ತರಹದ ಯಾವುದೇ ವ್ಯಕ್ತಿಗಳು ಕರೆದರು ಹೋಗದೆ ಇರುವುದು ಒಳ್ಳೆಯದು.