ಕಣ್ಣುಹಾರಿದ ಫಲಗಳು ಹಾಗೂ ಶಕುನಿಗಳು

0
5523

ಪುರುಷರು: ಬಲಗಣ್ಣಿನ ಮೇಲ್ಬಾಗಕ್ಕೆ ಬಲಗಡೆ ಹಾರಿದರೆ ಯಶಸ್ಸು ದೊರೆಯುವುದು. ಎಡಗಡೆ ಹಾರಿದರೆ ನಷ್ಟ-ಕಾರಿ, ಹುಬ್ಬಿನ ಅಥವಾ ಹಾರಲು ಹಾನಿಪ್ರದವು. ಬಲಕಣ್ಣಿಗೆ ಕೆಳಗೆ ಹಾರಲು ಲಾಭವು. ಎಡಭಾಗ ನಷ್ಟ ಪ್ರಾಪ್ತಿ, ಹುಬ್ಬು ಹಾರಲು ಲಾಭ, ಕೆಳದುಟಿಯ ಬಲರೆಪ್ಪೆ ಸುಖವು, ಎಡಗಡೆ ಯಶಸ್ಸು, ರೆಪ್ಪೆಯ ಕೆಳಗೆ ಹಾನಿ.

ಸ್ತ್ರೀಯರ: ಬಲಕಣ್ಣಿನ ಮೇಲ್ಬಾಗಕ್ಕೆ ಬಲರೆಪ್ಪೆಯು ಹಾರಿದರೆ ನಷ್ಟವು, ಎಡ ರೆಪ್ಪೆ ವಿಪತ್ಕಾಲವು ಹುಬ್ಬು ಹಾರಲು ಭಯ ಪ್ರಾಪ್ತಿಯು,ಕೆಳ ರೆಪ್ಪೆಯು ಸುಖ, ಎಡಗಡೆ ಸೌಖ್ಯ, ಆನಂದ, ಕಣ್ಣಿನ ರೆಪ್ಪೆಯ ಕೆಳಗೆ ಭಯ, ಎಡಗಣ್ಣಿನ ಮೇಲೆ ರೆಪ್ಪೆಯ ಬಲ ಭಾಗದಲ್ಲಿ ಹಾರಲು ಸುಖ, ಎಡಭಾಗದಲ್ಲಿ ಸಂತೋಷ, ಹುಬ್ಬು ಹಾರಲು ಭೀತಿಯು, ಕೆಳರೆಪ್ಪೆಯ ಬಲಗಡೆ ಲಾಭ, ಎಡಕ್ಕೆ ನಾಶವು, ರೆಪ್ಪೆಯ ಮಧ್ಯ ಕೆಳಭಾಗದಲ್ಲಿ ಭಯದ ಬಾಧೆ.

ದೇಹದಲ್ಲಿ ಅಂಗಾಂಗಗಳು ಹಾರಿದ ಫಲ: ಸ್ತ್ರೀಯರಿಗಾಗಲಿ, ಪುರುಷರಿಗಾಗಲಿ ತಲೆಯ ಬಲಕ್ಕೆ ಹಾರಲು ದೂರ ಪ್ರಯಾಣ, ಎಡಕ್ಕೆ ಹಾರಲು ರಾಜಮರ್ಯಾದೆ, ಮುಂದಲೆ ಆರೋಗ್ಯವು, ಮೂಗಿನ ಬಲಗಡೆ ಸ್ತ್ರೀ ಸುಖ, ಎಡಗಲ್ಲ ಹಾರಿದರೆ ದೆಹಾರಿಷ್ಟ, ಮತ್ತು ಸ್ತ್ರೀ ಚಿಂತೆ, ಬಲಗಿವಿ ಕಷ್ಟ ಉಂಟಾಗಿ ಪರಿಹಾರವಾಗುವದು,ಎಡಗಿವಿ ಧನ ಲಾಭ, ಎಡಗಲ್ಲವು ಸ್ತ್ರೀ ಸುಖ, ಎಡಗಡೆ ದೇಹ ಪೀಡೆಯು, ಮೇಲಿನ ತುಟಿ ಸಂಪತ್ತು ಲಾಭ, ಕೆಳತುಟಿ ಒಬ್ಬನಿಂದ ಲೇಸು, ಬಲ ಹೆಗಲು ಬಂಧುಗಳಲ್ಲಿ ಜಗಳ. ಎಡ ಹೆಗಲು ಶುಭ ಕರವು, ಬಲರಟ್ಟೆ ವಸ್ತ್ರಾಭರಣ ಪ್ರಾಪ್ತಿಯು, ಎಡರಟ್ಟಯು ಸಾಧಾರಣವು. ಬಲಭುಜ ಧನ ಧಾನ್ಯ ಸಂಪತ್ತು ಎಡಭುಜವು ದ್ರವ್ಯನಷ್ಟ. ಚಿಂತೆ, ಎದೆ ಅನ್ಯರ ಭಯ,ಬಲೆಎದೆಯು ಬಂಧುಗಳಲ್ಲಿ ದುಃಖಪ್ರದವು. ಎಡ ಎದೆಯು ಶುಭವು, ಹೊಟ್ಟೆ ಹಾರಿದರೆ ಭಾದೆಯು, ಬಲಕುಂಡೆ ಗಂಡಾಂತರವು, ಎಡಕುಂಡೆಯು ಹಾರಲು ಕೆಟ್ಟ ಅಪವಾದವು. ಬಲ ತೊಡೆ ಹಾರಿದರೆ ಒಳ್ಳೆಯದು, ಎಡತೊಡೆಯು ಭಯವು, ಬಲ ಮೊಣಕಾಲು ಒಳ್ಳೆಯದು ಎಡಮೊಣಕಾಲು ದಾರಿದ್ರ್ಯ ತನವು, ಪಾದ ಹಾರಲು ಪ್ರಯಾಣ. ಅಂಗೈ ಹಾರಲು ಧನಲಾಭ. ಈ ಪ್ರಕಾರವಾಗಿ ಫಲವನ್ನು ತಿಳಿಯಿರಿ.