‘ಬಿಗ್ ಬಾಸ್’ ಮನೆಯಿಂದ ಹೊರಬಂದ ಶಾಲಿನಿ

0
975

ಕೊನೆಯ ವಾರಕ್ಕೆ ಬಂದಿರುವ ಕನ್ನಡ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಶಾಲಿನಿ ಹೊರ ಬಂದಿದ್ದಾರೆ.

ಮಿಡ್’ವೀಕ್’ನಲ್ಲಿ ಶಾಲಿನಿ ಬಿಗ್ ಬಾಸ್ ಮನೆಯಿಂದ ಹೊರಬೀಳುತ್ತಿದ್ದಾರೆ. ಮಿಡ್’ವೀಕ್’ನಲ್ಲಿ ಎಲಿಮಿನೇಟ್ ಆಗಲು ಮೋಹನ್ ಹೊರತುಪಡಿಸಿ ಮಿಕ್ಕವರೆಲ್ಲರನ್ನೂ ನಾಮಿನೇಟ್ ಮಾಡಲಾಗಿತ್ತು. ಕಳೆದ ವಾರದ ಎಲಿಮಿನೇಟೆಡ್ ಸ್ಪರ್ಧಿ ಭುವನ್ ತಮ್ಮ ವಿಶೇಷಾಧಿಕಾರದ ಮೂಲಕ ಮೋಹನ್ ಅವರಿಗೆ ನೇರವಾಗಿ ಫಿನಾಲೆಗೆ ಹೋಗುವ ಅವಕಾಶ ಕೊಟ್ಟಿದ್ದರು.

Shalini

ಈ ವಾರ ನೇರ ಫಿನಾಲೆ ತಲುಪಿರುವ ಮೋಹನ್ ಹೊರತು ಪಡಿಸಿ ಮಿಕ್ಕೆಲ್ಲರೂ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು. ಸುದ್ದಿಯ ಮೂಲಗಳ ಪ್ರಕಾರ ಶಾಲಿನಿ ಹೊರಬಿದ್ದಿದ್ದಾರೆ.ಆ ಮೂಲಕ ಪ್ರಥಮ್,ಮೋಹನ್,ಮಾಳವಿಕ,ರೇಖಾ,ಕೀರ್ತಿ ಫಿನಾಲೆ ತಲುಪಿದ್ದಾರೆ. ಬಿಗ್ ಬಾಸ್ ಟ್ರೋಫಿ ಯಾರು ಗೆಲ್ಲುತ್ತಾರೆ ಎಂದು ಈ ಭಾನುವಾರ ಗೊತ್ತಾಗಲಿದೆ.