ಮೋದಿ ಸರ್ಕಾರ ಬಂದ ಮೇಲೆ ಮುಲಾಜಿಲ್ಲದೆ I.T. ದಾಳಿ ನಡೆಯುತ್ತಿದೆ, ಈಗ ಬಾಲಿವುಡ್ ನಟ ಶಾರುಖ್ ಖಾನ್ ರ ಆಸ್ತಿಯ ಮೇಲೆ ರೇಡ್ ನಡೆದಿದೆ!!

0
702

ಬಾಲಿವುಡ್ ನ ಖ್ಯಾತ ನಟ, ಕಿಂಗ್ ಖಾನ್ ಎಂದೇ ಜನಪ್ರಿಯವಾಗಿರುವ ಶಾರುಖ್ ಖಾನ್ ಅವರ ಮನೆ ಮತ್ತು ಇತರೆ ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲ ಮೂಲಗಳಿಂದ ಮಾಹಿತಿ ಪಡೆದ ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾರುಖ್ ಒಡೆತನದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಾಲೀಕತ್ವದ ಫಾರ್ಮ್‌ ಹೌಸ್‌ನ್ನು ಸೀಜ್ ಮಾಡಿದ್ದಾರೆ. ಮಾಹಿತಿ ಪ್ರಕಾರ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರಂತೆ. ಮಹಾರಾಷ್ಟದ ರಾಜಧಾನಿ ಮುಂಬೈ ಸೇರಿದಂತೆ ಶಾರುಖ್ ಖಾನ್ ಅವರಿಗೆ ದೇಶದ ಹಲವೆಡೆ ಆಸ್ತಿಗಳಿವೆ.

ಆದಾಯ ತೆರಿಗೆ ಅಧಿಕಾರಿಗಳು (ಐಟಿ) ಮಂಗಳವಾರ ಬೆಳಗ್ಗೆ ಶಾರುಖ್ ಖಾನ್ ಅವರ ಮುಂಬೈನ ಅಲಿಬಾಗ್‌ನಲ್ಲಿರುವ ಫಾರ್ಮ್‌ ಹೌಸ್ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಈ ಐಟಿ ದಾಳಿಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ, ಇಂದು ಐಟಿ ದಾಳಿಯ ಕಾರಣ ಏನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಆದರೆ, ಕೆಲ ಮಾಹಿತಿ ಪ್ರಕಾರ ಕೃಷಿ ಭೂಮಿಯನ್ನು ಖರೀದಿಸಿ ಅದರಲ್ಲಿ ಐಷಾರಾಮಿ ಬಂಗಲೆ ನಿರ್ಮಿಸಿದ್ದರಂತೆ ಶಾರುಖ್. ಜಮೀನು ಖರೀದಿಸುವ ವೇಳೆ ಕೃಷಿಗಾಗಿಯೇ ಅದನ್ನು ಬಳಸುವುದಾಗಿ ಶಾರುಖ್ ಅರ್ಜಿಯಲ್ಲಿ ನಮೂದಿಸಿದ್ದರಂತೆ, ನಂತರ ಕಾನೂನು ಬಾಹೀರವಾಗಿ ಅಲ್ಲಿ ಐಷಾರಾಮಿ ಮನೆ ನಿರ್ಮಿಸಿದ್ದರಂತೆ.

ಒಟ್ಟಿನಲ್ಲಿ ಕಿಂಗ್ ಖಾನ್ ಅವರ ಆಸ್ತಿಗೆ ಐಟಿ ಅಧಿಕಾರಿಗಳು ಬೀಗ ಹಾಕಿರುವುದು ದೇಶದೆಲ್ಲೆಡೆ ಅನುಮಾನಕೆಡೆಮಾಡಿಕೊಟ್ಟಿದೆ.