ಶಾತವಾಹನ ದೊರೆಗಳು ಕನ್ನಡದವರೇ ಅಥವಾ ತೆಲುಗಿನವರೇ ?

0
1548

ಶಾತವಾಹನ ದೊರೆಗಳು ಕನ್ನಡದವರೇ ಅಥವಾ ತೆಲುಗಿನವರೇ ?

ಪ್ರೊ. ವಿ.ಎ. ಸ್ಮಿತ್ ಮತ್ತ್ತು ಭಂಡಾರಕರ್, ಇವರ ಪ್ರಕಾರ ಶಾತವಾಹನರ ನೆಲೆ ಶ್ರೀಕಾಕುಳಂ, ಕೃಷ್ಣ, ಗುಂಟೂರು, ಪೈಥಾನಗಳು. ನಾಣ್ಯಗಳಲ್ಲಿ ಮತ್ತು ಶಾಸನಗಳಲ್ಲಿ ಇವರನ್ನು ಆಂಧ್ರರೆಂದೂ, ಸ್ಕಂದ ಪುರಾಣದಲ್ಲಿಯೂ ಇವರನ್ನು ಆಂಧ್ರರೆಂದು ಕರೆಯಲಾಗಿದೆ.

ಕೆ.ಪಿ.ಜಯಸ್ವಾಲ್ ರ ಪ್ರಕಾರ ಇವರು ಕನ್ನಡ ನಾಡಿಗೆ ಸೇರಿದವರು, ಹಿರೇಹಡಗಲಿಯಲ್ಲಿ ದೊರೆತಿರುವ ಶಾಸನವು ಇವರು ಕನ್ನಡಿಗರೆಂಬುದನ್ನು ಹೇಳುತ್ತದೆ. ಉತ್ತರದ ಮೈಸೂರನ್ನು ಹಾಲ ಮತ್ತು ಇತರ ದೊರೆಗಳು ಆಳುತ್ತಿದ್ದರು.

ವಾದ ವಿವಾದಗಳು ಏನೇ ಇದ್ದರು
ಶಾತವಾಹನವು ಕನ್ನಡ ರಾಜಮನೆತನ, ಕನ್ನಡಿಗರ ಅರಸೊತ್ತುಗೆ ಎಂದು ನಿರೂಪಿಸಲು ಇರುವ ಏಕೈಕ ಲಿಖಿತ ದಾಖಲಿತ ಸಾಕ್ಷಾಧಾರ!

ಶಾತವಾಹನರ ಮೂಲಪುರುಷರು ಎನ್ನಲಾಗುವ ಸಿಮುಖ ಪುಲಮಾಯಿಯರು ಈ ಕನಗನಹಳ್ಳಿಯ ಸ್ತೂಪಕ್ಕೆ ಅತಿ ಹೆಚ್ಚು ದಾನ ದತ್ತಿ ದೇಣಿಗೆಯನ್ನು ಅರ್ಪಿಸಿದ್ದಾರೆ.
ಸಿಮುಖ ಮತ್ತು ಪುಲಮಾಯಿಯರ ಬಗ್ಗೆ ಮಾಹಿತಿ ದೊರಕಿಸಿರುವ ಏಕೈಕ ತಾಣ ಈ ಕನಗನಹಳ್ಳಿ ಸ್ತೂಪ.

ಎಲ್ಲೂ ಕಾಣ ಸಿಗದ ಅಪರೂಪದ ಗೌತಮ ಬುದ್ಧರ ಸ್ತೂಪಗಳಿರುವುದು ಚಿತ್ತಾಪುರ ತಾಲೂಕಿನ ಸನ್ನತಿ ಸಮೀಪದ ಕನಗನಹಳ್ಳಿಯಲ್ಲಿ.

ಶಾತವಾಹನರು ಕನ್ನಡದ ದೊರೆಗಳೆ ಎಂಬ ವಿಷಯಕ್ಕೆ ಇಂಬು ಕೊಡುವಂತೆ
ಶಾತವಾಹನರ ರಾಜಧಾನಿ ಪೈಥಾನಾ ಅಥವಾ ಪ್ರತಿಷ್ಠಾನ ಇದು ಹಳೆಯ ಕುಂತಳ(ಕನ್ನಡ) ದೇಶಕ್ಕೆ ಸೇರಿದ್ದು.

ಶಾತವಾಹನರ ಮತ್ತೊಂದು ವಂಶವಳಿಗೆ ಸೇರುವ ಚುಟು ದೊರೆಗಳು ಪಶ್ಚಿಮ ಕರ್ನಾಟಕದ ಹಲವು ಭಾಗಗಳನ್ನು ಆಳುತ್ತಿದ್ದರು,

satavananamap

ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು.
ಚುಟು ದೊರೆಗಳನ್ನು , ಕುಂತಳ ಶಾತಕರ್ಣಿಯರನ್ನು ಕನ್ನಡ ದೊರೆಗಳೆಂದು ಕರೆಯುತ್ತಿದ್ದರು.

ಹಾಗೂ ಬಳ್ಳಾರಿ ಜಿಲ್ಲೆಯನ್ನು ತಮ್ಮ ಶಕ್ತಿ ಕೇಂದ್ರವನ್ನಾಗಿಸಿ ಕೊಂಡಿದ್ದರು.

ಕ್ರಿ.ಪೂ 1ನೇ ಶತಮಾನದಿಂದ ಕ್ರಿ.ಶ 2ನೇ ಶತಮಾನದ ವರೆಗೂ ರಾಜ್ಯಭಾರ ನಡೆಸಿದ್ದಾರೆ.

ಈ ಕನಗನಹಳ್ಳಿಯ ಸ್ತೂಪದ ಅವಶೇಷಗಳೇ ಶಾತವಾಹನರ ಗತ ವೈಭವದ ಮೂಲಕ್ಕೆ ಹಿಡಿದ ಕನ್ನಡಿಯಾಗಿದೆ.

 

pc1
ಸಿಮುಖ ಪುಲಮಾಯಿ ಸಕಲ ದೈವ ಕಾರ್ಯಗಳೊಂದಿಗೆ ಉಜ್ಜಯಿನಿ ನಗರವನ್ನು ಉಡುಗೊರೆ ನೀಡುತ್ತಿರುವುದು ಸ್ಥಳ :ಕನಗನಹಳ್ಳಿ (೧ ನೇ ಶತಮಾನ ) ಚಿತ್ರ ಕೃಪೆ : ಒಸಮುಂದ್ ಬೊಪ್ರ್ರಚ್ಚಿ

 

೨ನೇ ಅಥವಾ ೩ನೇ ಶತಮಾನದ ಶುರುವಿನಲ್ಲಿ ಬೌದ್ಧ ಧರ್ಮ ಅತ್ಯಂತ ಉನ್ನತ ಸ್ಥಿತಿಯಲ್ಲಿ ಇದ್ದು ಕನಗನಹಳ್ಳಿ ಸುತ್ತಮುತ್ತಲಿನ ಬೌದ್ಧ ಧರ್ಮಿಯರ ನೆಲೆಯಾಗಿರಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ .

pc2
ಬುದ್ಧನ ತಾಯಿ ಮಾಯ ಸ್ಥಳ :ಕನಗನಹಳ್ಳಿ (೧ ನೇ ಶತಮಾನ ) ಚಿತ್ರ ಕೃಪೆ : ಕ್ರಿಶ್ಚಿಯನ್ ಲುಸಿಝನಿಟ್ಸ್

 

pc4
ಬುದ್ಧನ ಚಿತ್ರ ಸ್ಥಳ :ಕನಗನಹಳ್ಳಿ (೧ ನೇ ಶತಮಾನ ) ಚಿತ್ರ ಕೃಪೆ : ಕ್ರಿಶ್ಚಿಯನ್ ಲುಸಿಝನಿಟ್ಸ್
pc3
ಬುದ್ಧನ ಜನ್ಮಾಂತರದ ಕಥೆಗಳು ೧೬ ವಿವಿಧ ಕಲ್ಲು ಸಜ್ಜೆಗಳ ಮೇಲೆ ಬರೆಯಿಸಲಾಗಿದೆ ಸ್ಥಳ :ಕನಗನಹಳ್ಳಿ (೧ ನೇ ಶತಮಾನ ) ಚಿತ್ರ ಕೃಪೆ : ಕ್ರಿಶ್ಚಿಯನ್ ಲುಸಿಝನಿಟ್ಸ್