ಸಾಹಸಿ ಮಕ್ಕಳಿಬ್ಬರಿಗೆ ಶೌರ್ಯ ಪ್ರಶಸ್ತಿ

0
1099

 

ಸಾವಿನಮಚಿಗೆ ಸಿಲುಕಿದ್ದ ಸಹಪಾಟಿಗಳನ್ನು ರಕ್ಷಿಸಿ ಸಾಹಸ ಮೆರೆದ ನಾಲ್ವರು ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರ ಈ ವರ್ಷದ ಹೊಯ್ಸಳ  ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕೆರೆಗೆ ಬಿದ್ದು ಮುಳುಗುತ್ತಿದ್ದ  ಶಾಲಾ ಬಸ್ ನಿಂದ ಮಕ್ಕಳನ್ನು ರಕ್ಷಿಸಿದ್ದ ಶಿಕಾರಿಪುರದ ಡಿ.ಆರ್. ಚಿರಮತ್,ಬಸ್ ಗೆ ಬೆಂಕಿ ಬಿದ್ದಾಗ ತುರ್ತು ನಿರ್ಗಮನ ದ್ವಾರ ತೆರೆದು ಸಹಪಾಠಿಗಳನ್ನು ಕಾಪಾಡಿದ ಮೈಸೂರಿನ ಶ್ರೇಯಸ್ ಎನ್.ರಾವ್ ಹಾಗೂ ಜಿ.ಎಂ.ಶಶಿಕುಮಾರ್ ಪ್ರಶಸ್ತಿಗೆ ಆಯ್ಕೆಯಾದವರು. ನ.14 ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಕಲ ಕ್ಷೇತ್ರಗಳಲ್ಲೂ ಸಾಧನೆ ಅನಾವರಣ

ಶಿಕ್ಷಣ ಕ್ಷೇತ್ರ: ಮೈತ್ರಿ ಎಂ, ಬೈರಿ (ಮಣಿಪಾಲ, ಉಡುಪಿ), ಅಮೆಯ ಅತುಲ ಯಾಳಗಿ(ಅನಗೋಳ, ಬೆಳಗಾವಿ), ಪಿ.ಬಿ.ರಿತೀನ್(ಚಿತ್ರದುರ್ಗ)

ಕಲಾಕ್ಷೇತ್ರ: ಸಾಕ್ಷಿ ಎಸ್. ಕೋಳೆಕರ್(ಸೋಮವಾರ ಪೇಟೆ, ಬೇಳಗಾವಿ), ಶ್ರೀರಕ್ಷಾ(ಬಿಜೈ), ಮಂಗಳೂರು)

ಕ್ರೀಡಾಕ್ಷೇತ್ರ: ಎಚ್.ವಿ.ಸಾಕ್ಷತ್ (ದರ್ಗಾ ಜೋಗಿಹಳ್ಳಿ, ದೊಡ್ಡಬಳ್ಳಾಪುರ). ವಿ.ವರ್ಷಾ (ಕವೂರ್, ಮಂಗಳೂರು). ಆಜಿಂಕ್ಯ ಘನಶ್ಯಾಮ್ ಜೋಷಿ (ನರ್ವೇಕರ್ ಗಲ್ಲಿ, ಬೆಳಗಾವಿ), ಕರಿಷ್ಮಾ ಎಸ್. ಸುನಿಲ್ (ಬಾರ್ಕೂರು, ಉಡುಪಿ), ಎಂ.ರೇವತಿ ನಾಯಕ್ (ಕೆಟಿಜೆ ನಗರ, ದಾವಣಗೇರೆ)

ಸಂಗೀತಕ್ಷೇತ್ರ: ಎ.ಸುನಾದಕೈಷ್ಣ(ಹೇಮಾವತಿನಗರ, ಮಂಗಳೂರು).

ಸಾಂಸ್ಕೃತಿಕ ಕ್ಷೆತ್ರ: ಸೌಮ್ಯಶ್ರೀ ಹಿರೇಮಠ್ (ಬಳ್ಳಾರಿ), ತುಳಸಿ ಹೆಗಡೆ(ಶಿತಸಿ,ಉತ್ತರಕನ್ನಡ). ಎಚ್.ಎಂ.ಸಾಯಿ ಸಿಂಚನ(ಶಿನಮೊಗ್ಗ)

ಇತರೆ ಪ್ರತಿಭಾಕ್ಷೇತ್ರ: ಆದ್ವತಾ ಮಹಾದೇವ ಬಡಿಗೇರ (ಬ್ಯಾಂಕರ್ಸ್ ಕಾಲನಿ, ವಿಯಪುರ)

ನಾವೀನ್ಯತೆ: ಸೀಮಾ ನಿಂಗಪ್ಪ ಶೆಟ್ಟರ್ (ಕಾರಟಗಿ, ಕೊಪ್ಪಳ), ಪಿ.ಶ್ರಾವ್ಯಾ (ಸಿರಾ, ತುಮಕೂರು),

ರೋಲರ್ ಸ್ಟೇಟಿಂಗ್ ನಲ್ಲಿ ವಿಶೇಷ ಸಾಧನೆ: ಬೆಂಗಳೂರಿನ ಬಸವೇಶ್ವರನಗರದ ವೈ.ಓಂ ಸ್ವರೂಪ್ ಗೌಡ.

ನ.14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ನಡೆಯುವ ‘ಮಕ್ಕಳ ಹಬ್ಬ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ, ಇದೇ ವೇಳೆ ವಿವಿಧ ಕ್ಷೇತ್ರಗಳ 17 ಮಕ್ಕಳಿಗೆ ಅಸಾಧಾರಣ ಪ್ತತಿಭೆ ಪ್ರಶಸ್ತಿ ನೀಡಲಾಗುತ್ತಿದ್ದು, ಇವರ ಹೆಸರನ್ನು ರಾಷ್ಟ್ರ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾದಿಗೆ. ಜತೆಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ  ಅತ್ಯುತ್ತಮ ಸೇವೆಸಲ್ಲಿಸಿದ 4 ಸ್ವಯಂಸೇವಾ ಸಂಸ್ಥೆಗಳು ಹಾಗೂ ನಾಲ್ವರು ವ್ಯಕ್ತಿಗಳನ್ನು ಮಕ್ಕಳ ಕಲ್ಯಾಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.