ಶಿವರಾಜಕುಮಾರ್ ಮತ್ತೆ ಒಬ್ಬ ಸಾಮಾನ್ಯ ನಾಗರಿಕನಾಗಿ ಕಾಣಿಸಿಕೊಂಡಿರುವ ಚಿತ್ರ ‘ಶ್ರೀಕಂಠ’

0
942

‘ಶಿವಸೈನ್ಯ’ದ ನಂತರ ಶಿವರಾಜಕುಮಾರ್ ಮತ್ತೆ ಒಬ್ಬ ಸಾಮಾನ್ಯ ನಾಗರಿಕನಾಗಿ ಕಾಣಿಸಿಕೊಂಡಿರುವ ಚಿತ್ರ ‘ಶ್ರೀಕಂಠ’. ಸಾಮಾನ್ಯ ವ್ಯಕ್ತಿಯಾಗಿದ್ದವನೊಬ್ಬ ಅನ್ಯಾಯದ ವಿರುದ್ಧ ಸಿಡಿದೇಳುವ ಕಥೆ ‘ಶ್ರೀಕಂಠ’ನದ್ದು. ‘ನಾನೂ ಎಷ್ಟು ದಿನ ಅಂತ ಸಾಚಾ ಮನುಷ್ಯನಾಗಿರಲಿ. ಒಮ್ಮೆಯಾದರೂ ಕೆಟ್ಟು ನೋಡೋಣ ಎಂದುಕೊಂಡಿದ್ದೇನೆ. ಈವರೆಗೆ ನನ್ನ ಬಾಯಲ್ಲಿ ಕೇಳಿರದ ಮಾತುಗಳೆಲ್ಲ ಈ ಚಿತ್ರದ ಸಂಭಾಷಣೆಯಲ್ಲಿವೆ’ ಎಂದು ಶಿವರಾಜಕುಮಾರ್ ತಮ್ಮ ಪಾತ್ರವನ್ನು ಪರಿಚಯಿಸಿದ್ದಾರೆ.

%e0%b2%b6%e0%b3%8d%e0%b2%b0%e0%b3%80%e0%b2%95%e0%b2%82%e0%b2%a0

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಹೇಮಂತ್ ಕುಮಾರ್, ಶಶಾಂಕ್ ಶೇಷಗಿರಿ, ಕಾರ್ತಿಕ್, ಶಿಲ್ಪಾ ಶ್ರೀಕಾಂತ್, ಬಾಬಿ ಹಾಡಿದ್ದಾರೆ. ಕೃಷ್ಣೇಗೌಡ, ವಿ. ನಾಗೇಂದ್ರಪ್ರಸಾದ್, ಚೇತನ್ ಗೀತಸಾಹಿತ್ಯ ರಚಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣಕಥೆ ಆಧರಿಸಿ ಮಂಜು ಸ್ವರಾಜ್ ಚಿತ್ರದ ಕಥೆ ರಸಿಚಿದ್ದಾರೆ.

ಶಿವರಾಜಕುಮಾರ್ ಆಸೆಪಟ್ಟು ಈ ಚಿತ್ರದಲ್ಲಿ ಒಂದು ಹಾಡು ಹೇಳಿದ್ದಾರೆ.

ಚಿತ್ರ: ಶ್ರೀಕಂಠ. ನಿರ್ದೇಶನ:ಮಂಜುಸ್ವರಾಜ್. ನಿರ್ಮಾಣ:ಮನುಗೌಡ. ಪಾತ್ರವರ್ಗ:ಶಿವರಾಕ್ ಕುಮಾರ್, ವಿಜಯ್ ರಾಘವೇಂದ್ರ, ಚಾಂದಿನಿ ಶ್ರೀಧರನ್, ರೇಖಾ, ಅಚ್ಯುತ್ ಕುಮಾರ್, ಮತ್ತಿತರು.

ಅಣ್ಣಮ್ಮನ ಕೂರಿಸೋದು, ರಾಜ್ಯೋತ್ಸವ ಆಚರಿಸೋದು, ರಾಜಕೀಯ ಭಾಷಣಕ್ಕೆ ಜನರನ್ನು ಸೇರಿಸೋದು, ದುಡ್ಡು ಕೊಟ್ಟರೆ ಯಾವ ಕೆಲಸ ಬೇಕಾದರೂ ಮಾಡುವುದು ಶ್ರೀಕಂಠನ (ಶಿವರಾಜ್ ಕುಮಾರ್) ಕಾಯಕ. ಬಡವರ ಸೇವೆ ಮಾಡಿಕೊಂಡು, ಅನಾಥ ಮಕ್ಕಳಿಗೆ ಪಾಠ ಹೇಳುವ ಶಶಿ (ಚಾಂದಿನಿ). ಈ ಎರಡು ಭಿನ್ನ ಬಗೆಯ ಮನಸ್ಥಿತಿಗಳು ಮದುವೆ ಮೂಲಕ ಒಂದಾಗುತ್ತವೆ. ಆದರೆ ಬದಲಾಗುವುದಿಲ್ಲ. ಅನಾಥರಾಗಿರುವ ಶ್ರೀಕಂಠನಿಗೆ ಸಂಸಾರ ಹೇಗೆ ನಿಭಾಯಿಸಬೇಕು ಎಂಮ ಸೂಕ್ಷ್ಮತೆ ಇರುವುದಿಲ್ಲ . ಬಯಸಿ ಮದುವೆಯಾದ ತಪ್ಪಿಗೆ ಶಶಿ ಎಲ್ಲವನ್ನೂ  ಅನುಭವಿಸಬೇಕಾದ ಪರಿಸ್ಥಿತಿ. ಈ ಮಧ್ಯೆ ಘಟನೆಯೊಂದರಿಂದ ಪ್ರೇರೇಪಿತನಾದ ಶ್ರೀಕಂಠ ಪತ್ನಿಯೊಂದಿಗೆ ನೆಮ್ಮದಿ ಬದುಕು ಕಟ್ಟಿಕೊಳ್ಳುವ ಪಣ ತೊಡುತ್ತಾನೆ. ಆದರೆ ವಿಧಿಯಾಟ ಬೇರೆಯೇ ಇರುತ್ತದೆ. ಅದು ಪ್ರೇಕ್ಷನ ಮನಕಲಕುತ್ತದೆ. ನಿರ್ದೇಶಕ ಮಂಜು ಸ್ವಾರಾಜ್ ಫ್ಲ್ಯಾಶ್ ಬ್ಯಾಕ್  ತಂತ್ರದೊಂದಿಗೆ ಚಿತ್ರವನ್ನು ನಿರೂಪಿಸುತ್ತಾರೆ. ಅದರ ಮಧ್ಯೆ ರಾಜಕೀಯ ಮೇಲಾಟಗಳು, ಪ್ರಸ್ತುತ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಿಳಿಸುವ ಕೆಲಸ ಮಾಡಿದ್ದಾರೆ.

ಟ್ರೈನ್ ಸಾಹಸ!

ಶಿವರಾಜ್ ಕುಮಾರ್ ಸಾಹಸ ಮಾಡುವುದು ಹೊಸದೇನಲ್ಲ. ಆದ್ರೆ, ‘ಶ್ರೀಕಂಠ’ ಚಿತ್ರದಲ್ಲಿ ಮಾಡಿರುವ ಟ್ರೈನ್ ಸಾಹಸ ಕುತೂಹಲ ಹೆಚ್ಚಿಸಿದೆ. ಚಲಿಸುವ ಟ್ರೈನ್ ಕೆಳಗೆ ನಿಜವಾಗಲೂ ಮಲಗಿದ್ದ ಹ್ಯಾಟ್ರಿಕ್ ಹೀರೋ ರಿಯಲ್ ಸ್ಟಂಟ್ ಮೂಲಕ ಗಮನ ಸೆಳೆದಿದ್ದಾರೆ. ಆ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಹೋಗಲೆ ಬೇಕು.

ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಚಿತ್ರಕಥೆಯಲ್ಲಿ ಕೆಲವೆಡೆ ಹಿಡಿತ ತಪ್ಪಿದ್ದಾರೇನೋ ಎಂದೆನಿಸಬಹುದು. ಸಂಗೀತಕ್ಕೆ ಗುಂಗು ಹಿಡಿಸುವ ಚಾರ್ಮ್ ಇಲ್ಲ ಎಂಬುದು ಹಿನ್ನೆಡೆ. ಸುರೇಶ್ ಬಾಬು ಛಾಯಗ್ರಹಣ ಸೊಗಸಾಗಿದೆ. ಆನಾಥನಾಗಿ ಶಿವರಾಜ್ ಕುಮಾರ್ ಅಭಿನಯ ಪ್ರಶಂಸರ್ಹ. ಕೋಪ ಒರಟುತನ,ಪ್ರೀತಿ, ವಾತ್ಸಲ್ಯ ಎಲ್ಲವನ್ನು ಒಂದೇ ಪಾತ್ರದಲ್ಲಿ ತೋರಿಸಿರುವ ಅವರ ನಟನಾಕೌಶಲ್ಯ ಚೆನ್ನಾಗಿದೆ. ನಾಯಕಿ ಚಾಂದಿನಿ ಸಿಕ್ಕಿದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಈ ಕಾಮನ್ ಮ್ಯಾನ್ ಪಾತ್ರವಾಗಿದೆ.