ಸಿ.ಎಂ. ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆಯನ್ನು ಚಿತ್ರಿಕರಿಸದಂತೆ ಪತ್ರಕರ್ತರ ಮೇಲೆ ದಬ್ಬಾಳಿಕೆ ಮಾಡಿದ ಪೊಲೀಸ್; ಎಮರ್ಜೆನ್ಸಿ ನೆನಪಿಸುತ್ತಿದೆ ಈ ಘಟನೆ??

0
523

ಶಿವಮೊಗ್ಗ:  ಬಿಜೆಪಿ ಮುಖಂಡರು ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಖಾಸಗಿ ವಾಹಿನಿ ಕ್ಯಾಮೆರಾಮನ್ ಮೇಲೆ ದಾವಣಗೆರೆ ಎಸ್ಪಿ ಗುಳೇದ ಅನುಚಿತವಾಗಿ ವರ್ತಿಸಿ ಶರ್ಟ್ ಹಿಡಿದು ಎಳೆದಾಡಿ ಗುಂಡಾ ರೀತಿ ವರ್ತಿಸಿದ್ದಾರೆ.

ಶಿವಮೊಗ್ಗದ ನೆಹರ ನಗರದಲ್ಲಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶಕ್ಕೆ ಹಾಜರಾಜಗಲು ಸಾಗುತ್ತಿರುವಾಗ ಸಿಎಂಗೆ ಕಪ್ಪು ಬಾವುಟ ತೋರಲು ನಿರ್ಧರಿಸಿದ ಬಿಜೆಪಿ ಮುಖಂಡರು ರಸ್ತೆ ತಡೆಯಲು ಮುಂದಾಗಿದ್ದರು. ಇದನ್ನು ತಡೆಯಲು ಪೊಲೀಸರು ವಿಫಲರಾಗಿದ್ದು, ಬಿಜೆಪಿ ಮುಖಂಡರು ಕಪ್ಪು ಬಾವುಟ ತೋರಿಸಿ ಪೊಲೀಸ್ ವಾಹನಗಳನ್ನ ತಡೆದು ಪ್ರತಿಭಟಿಸಲು ಮುಂದಾದರು.

ಪೊಲೀಸರು ಪ್ರತಿಭಟನಾಕರರನ್ನು ಬಂಧಿಸಿದರು. ಈ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದ ಖಾಸಗಿ ವಾಹಿನಿ ಕ್ಯಾಮೆರಾಮನ್ ಶರ್ಟ್ ಹಿಡಿದು ಎಸ್ಪಿ ಗುಳೇದ ಮತ್ತು ಸಿಬ್ಬಂದಿ ಎಳೆದಾಡಿದ್ದಾರೆ. ಅಲ್ಲದೆ ಗುಂಡಾ ವರ್ತೆನೆ ತೋರಿ ವಿಡಿಯೋ ಡಿಲಿಟ್ ಮಾಡುವಂತೆ ಧಮ್ಕಿ ಹಾಕಿದ್ದಾರೆ.

ದಾವಣಗೆರೆ ಎಸ್ಪಿ ಗುಳೇದ ವರ್ತೆನೆಯಿಂದ ಪತ್ರಕರ್ತರೆಲ್ಲರು ಒಕ್ಕೂರಿಲಿನಿಂದ ಖಂಡಿನೆ ವ್ಯಕ್ತಪಡಿಸಿದ್ದಾರೆ.