ತೋಟಗಾರಿಕೆ ಬೆಳೆಗಳು, ವೈವಿಧ್ಯಮಯ ಹೂವುಗಳನ್ನು ಬೆಳೆಯುವ ಆಸೆ ನಿಮ್ಮಗಿದೆಯೆ? ಹಾಗಿದ್ದಲ್ಲಿ ತಾರಸಿತೋಟ ಪದ್ಧತಿಯನ್ನು ಪಾಲಿಸಿ

0
2360

ತಾರಸಿನಲ್ಲಿ ತೊಟ್ಟ : ನಿಮ್ಮ ಮನೆಗೆ ಬೇಕಾಗುವಷ್ಟು ತರಕಾರಿ ನೀವೇ ಬೆಳೆಯಿರಿ

ಮನೆಯ ಅಂಗಳ ಅಥವಾ ಆವರಣದಲ್ಲಿ ಗಿಡ ನೆಡುವುದು, ಹೂವಿನ ಸಸಿ ಬೆಳೆಸುವುದು, ಬಿಡುವಿನ ವೇಳೆಯಲ್ಲಿ ಕೈತೋಟ ಮಾಡುವುದು ಗೃಹಿಣಿಯರಲ್ಲಿ ಒಂದು ಹವ್ಯಾಸವಾಗಿ ರೂಢಿಯಲ್ಲಿತ್ತು. ಅಂಗಳದಲ್ಲಿನ ಹಸಿರು ಮನಸ್ಸುಗಳಿಗೆ ಮುದನೀಡುವ, ಉಲ್ಲಾಸ ತರುವ ಭಾವನೆಗಳು ಕೈತೋಟದ ಹವ್ಯಾಸಕ್ಕೆ ಆ ದಿನಗಳಲ್ಲಿ ಜನಪ್ರಿಯತೆ ತಂದುಕೊಟ್ಟಿತ್ತು. ಅದರಲ್ಲೂ ಪ್ರಕೃತಿಯನ್ನು ಆರಾಧಿಸುವವರು, ಹೂವಿನ ಪರಿಮಳ, ಸೊಬಗಿನಿಂದ ಆಕರ್ಷಿತರಾದವರು ಲಭ್ಯವಿರುವ ಜಾಗದಲ್ಲೇ ಹಸಿರುಮನೆ ನಿರ್ಮಾಣಕ್ಕೆ ಆದ್ಯತೆ ನೀಡುವುದನ್ನು ರೂಢಿಸಿಕೊಂಡಿದ್ದರು. ಆಧುನಿಕತೆಯ ಪ್ರಭಾವ ಮನೆಯಂಗಳದಲ್ಲಿ ಗಿಡಮರ ಬೆಳಸುವುದಕ್ಕಿಂತ ಮನೆ ವಿಶಾಲವಾಗಿರಬೇಕೆಂದು ಬಯಸುವವರೇ ಅಧಿಕ. ಹಾಗಾಗಿಯೇ ನಗರ ಪ್ರದೇಶಗಳಲ್ಲಿ ಅಂಗಳದ ಜಾಗವನ್ನು ಇಂದು ವಾಹನಗಳು ಆಕ್ರಮಿಸಿವೆ. ಇಂಥ ಪರಿಸ್ಥಿತಿಯಲ್ಲಿ ಹಸಿರು ಮನೆ ನಿರ್ಮಾಣ ಹೇಗೆ? ಇದು ಏನಾದರೂ ಕನಸೇ ಎಂದು ನಿಮಗನ್ನಿಸಬಹದು. ಆದರೆ ವಾಸ್ತವದಲ್ಲಿ ಈ ಕಲ್ಪನೆ ನಿಜವಾಗಿರುವುದು `ರೂಫ್ ಗಾರ್ಡನ್’ `ಟೆರಸ್ ಗಾರ್ಡನ್’ ಅಥವಾ `ತಾರಸಿ ತೋಟ’ ಎಂಬ ಜನಪ್ರಿಯವಾಗಿರುವ ಕೈತೋಟದ ವಿಧಾನದಿಂದ. ತೋಟಗಾರಿಕೆ ಬೆಳೆಗಳು, ವೈವಿಧ್ಯಮಯ ಹೂವುಗಳನ್ನು ಬೆಳೆಯುವ ಆಸೆ ನಿಮ್ಮಗಿದೆಯೆ? ಹಾಗಿದ್ದಲ್ಲಿ ತಾರಸಿತೋಟ ಪದ್ಧತಿಯನ್ನು ಪಾಲಿಸಬಹುದು.

dsc_0095

  • ಆಧುನಿಕ ತೋಟಗಾರಿಕೆ ಪದ್ಧತಿಯಾಗಿ ಜನಪ್ರಿಯತೆ ಹೊಂದಿರುವ ತಾರಸಿ ಕೈತೋಟ ಪ್ರಾರಂಭಿಸುವ ಮುನ್ನ ತಾರಸಿಯ ಸುರಕ್ಷತೆ ಹಾಗೂ ಭದ್ರತೆಯನ್ನ ಖಾತರಿ ಪಡಿಸಿಕೊಳ್ಳಿ.
  • ಕೈತೋಟದ ಪ್ರಾರಂಭಕ್ಕೂ ಮೊದಲು ಮಾಹಿತಿಗಳನ್ನು ಸಂಗ್ರಹಿಸಿ. ಗಿಡಗಳು, ಹೂವಿನ ತಳಿಗಳು ಹಾಗೂ ಬೀಜಗಳ ಕುರಿತು ಮಾಹಿತಿ ಸಂಗ್ರಹಿಸಲು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ. ಟೆರಸ್ ಗಾರ್ಡನ್‍ಗೆ ಅಗತ್ಯ ಸಲಕರಣೆಗಳು, ಪರಿಕರಗಳು ಹಾಗೂ ಮಣ್ಣಿನ ವಿವರಗಳು, ಬಿಸಿಲಿನ ಧಗೆಯಿಂದ ಗಿಡಗಳನ್ನು ರಕ್ಷಿಸಲು ಅಗತ್ಯವಾದ ಸೊಳ್ಳೆಪರದೆ ಮಾದರಿಯ ಉತ್ಪನ್ನಗಳನ್ನು ಸಂಬಂಧಪಟ್ಟ ವಿಭಾಗೀಯ ತೋಟಗಾರಿಕೆ ಇಲಾಖೆಗಳಿಂದ ಪಡೆದುಕೊಳ್ಳಬಹುದು.
  • ಕೈತೋಟ ಆರಂಭಿಸುವ ಮುನ್ನ ತಾರಸಿಯಲ್ಲಿನ ಸ್ಥಳಾವಕಾಶ, ಬೆಳೆಸಬಹುದಾದ ಗಿಡಗಳು, ಅಲಂಕಾರಿಕ ಹೂವುಗಳು ಸೇರಿದಂತೆ ನಿಮ್ಮ ತಾರಸಿಯಲ್ಲಿ ಏನೇನು ಬೆಳೆಸಲು ಸಾಧ್ಯ ಎಂಬುದರ ಬಗ್ಗೆ ಮೊದಲು ಪಟ್ಟಿ ತಯಾರಿಸಿಕೊಳ್ಳಿ.

  • ಮನೆಯ ಮಾಳಿಗೆ ಮೇಲೆ ಕೈತೋಟ ಮಾಡಬಯಸುವವರು ಗಿಡಗಳಿಗೆ ಹಾಕುವ ನೀರು ಸರಾಗವಾಗಿ ಹರಿದುಹೋಗುವ ಒಳಚರಂಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ದಿನದಲ್ಲಿ ಎರಡು ಬಾರಿ ಗಿಡಗಳಿಗೆ ನೀರು ಉಣಿಸಿದರೆ ಸಾಕು. ಗಿಡ ಬೇಗ ಬೆಳೆಯಲೆಂದು ಪದೇಪದೇ ನೀರು ಹಾಕುವ ಕ್ರಮದಿಂದ ಗಿಡಗಳು ನೀರು ಹೆಚ್ಚಾಗಿ ಕೊಳೆತುಹೋಗುವ ಸಾಧ್ಯತೆ ಇರುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಗಿಡಗಳಿಗೆ ನೀರುಣಿಸಿ.

 • ಮಾಳಿಗೆಯಲ್ಲಿ ತೋಟ ಮಾಡಬಯಸುವವರು ಹೈಬ್ರೀಡ್ ಬೀಜಗಳನ್ನು ತಳಿಗಳ ಪೋಷಿಸುವ ನರ್ಸರಿ ಕೇಂದ್ರಗಳಿಂದ ಪಡೆದು ಪ್ಲಾಸ್ಟಿಕ್ ಇಲ್ಲವೇ ಮಣ್ಣಿನ ಪಾಟ್‍ಗಳಲ್ಲಿ ಹಾಕಿಡುವುದು ಉತ್ತಮ.
 • ಸಸಿಗಳು ಅಥವಾ ಗಿಡಗಳ ಬೆಳವಣಿಗೆಗೆ ಸೂರ್ಯನ ಬೆಳಕು ಪೂರಕವಾಗಿರಬೇಕು. ಸೂರ್ಯನ ಕಿರಣಗಳು ಗಿಡಗಳ ಮೇಲೆ ಸರಾಗವಾಗಿ ಹರಿಯುವಂತೆ ಗಿಡಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಿ. ಬಿಸಿಲಿನ ಉಷ್ಣತೆ ಅಧಿಕವಾಯಿತೆನ್ನಿಸಿದರೆ ತೆಳುವಾದ ಪರದೆಗಳಿಂದ ಮುಚ್ಚಿ ಗಿಡಗಳನ್ನು ರಕ್ಷಿಸಬಹುದು.
 • ಗಿಡಗಳಿಗೆ, ಸಸಿಗಳಿಗೆ ಸೂಕ್ತವಾದ ಗೊಬ್ಬರ ದೊರೆಯದಿದ್ದಾಗ ಅವುಗಳ ಬೆಳವಣಿಗೆಯಲ್ಲಿ ಕುಂಠಿತವಾಗಬಹುದು. ಗಿಡಗಳಿಗೆ ಅಗತ್ಯವೆಂದು ರಾಸಾಯನಿಕ ಗೊಬ್ಬರಕ್ಕಾಗಿ ದುಬಾರಿ ವೆಚ್ಚ ಮಾಡದೆ ಅಡುಗೆಗೆ ಬಳಸಿ.

green-room-diagram-green-room-composition

ಹಸಿರು ಸಸಿಗಳು, ಗಿಡಗಳು ಎಂಥವರ ಮನಸ್ಸಿನಲ್ಲೂ ಆಹ್ಲಾದತೆ ತರುವಂತೆ ನಿಮ್ಮ ತಾರಸಿ ಹಸಿರು ಉದ್ಯಾನವನಕ್ಕೆ ಸಾಕ್ಷಿಯಾಗಿದ್ದಲ್ಲಿ ಗಿಡಗಳ ಮಧ್ಯದಲ್ಲಿ ಕುಳಿತು ಕಾಫಿ-ಚಹಾ ಸೇವಿಸಲು ಅನುಕೂಲವಾಗುವಂತೆ ಪೀಠೋಪಕರಣಗಳ ವ್ಯವಸ್ಥೆ ಮಾಡಿಕೊಂಡಾಗ ಪ್ರಕೃತಿಯ ಸೊಬಗು ನಿಮ್ಮ ಮನೆಯಲ್ಲಿಯೇ ದೊರೆಯಲಿದೆ.