ಮಾನವನ ದೇಹಕ್ಕೆ ಬರುವ ಸಾಮಾನ್ಯವಾದ ರೋಗಗಳು ವಿಭಿನ್ನ ತರಹದ ನೋವುವನ್ನು ತಂದು ಕೆಲವೊಂದು ಸಮಯದಲ್ಲಿ ಸರಿಯಾದ ಚಿಕ್ಸಿತೆ ಸಿಗದೇ ಸಾವು ಕೂಡ ಬರಬಹುದು ಅಂತಹ ರೋಗಗಳಲ್ಲಿ ಯಕೃತ್ತಿನ ರೋಗ ಸಾಮಾನ್ಯವಾಗಿ ಕಂಡರು ಇದರ ಬಾದೆ ಅನುಭವಿಸಿದವರಿಗೆ ಗೊತ್ತು. ಈ ರೋಗವನ್ನು ಪಿತ್ತಜನಕಾಂಗದ ರೋಗವೆಂದು ಕೂಡ ಕರೆಯಲಾಗುತ್ತದೆ. ಅನೇಕರು ಯಕೃತ್ತ್ ನಲ್ಲಿ ಸತ್ತ ರಕ್ತಕೋಶಗಳ ಸಂಖ್ಯೆಯಿಂದ ಆ ಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ, ಈ ಪ್ರಮಾಣ ಹೆಚ್ಚುವುದರಿಂದ ಕಾಮಾಲೆರೋಗಕ್ಕೆ ಒಳಗಾಗಿರುತ್ತಾರೆ. ಸತ್ತ ಕೆಂಪು ರಕ್ತಕಣಗಳ ಹೀಮೋಗ್ಲೋಬಿನ್ ವಿಭಜನೆಯಾಗುವುದರಿಂದಾಗಿ ಬೈಲಿರುಬಿನ್ ಮಟ್ಟವು ಅಧಿಕಗೊಳ್ಳುತ್ತದೆ, ಸಾಮಾನ್ಯವಾಗಿ ಯಕೃತ್ತು ರಕ್ತದಿಂದ ಬೈಲಿರುಬಿನ್ನ್ನು ತೆಗೆದುಹಾಕಿ ಪಿತ್ತರಸದ ಮೂಲಕ ಹೊರದೂಡುತ್ತದೆ. ಯಕೃತ್ತಿನ ಉರಿಯೂತವು ಅನೇಕ ವೈರಸ್, ಆಲ್ಕಹಾಲ್ ಅಲ್ಲದೇ ಕೆಲವು ವಿಷಗಳಿಂದ, ಅಥವಾ ಆನುವಂಶಿಕ ಸ್ಥಿತಿಗಳಿಂದಲೂ ಕೂಡ ಉಂಟಾಗುತ್ತದೆ. ಈ ರೋಗವನ್ನು ಅಲನೈನ್ ಟ್ರಾನ್ಸಮಿನೇಸ್-ನ ಮಟ್ಟವನ್ನು ಪರಿಶೀಲಿಸುವ ಮೂಲಕ ಕಂಡುಹಿಡಿಯುತ್ತಾರೆ.
Also read: ಮಾನಸಿಕ ಒತ್ತಡ ಯಾವುದರಿಂದ ಬರುತ್ತೆ? ಇಂತಹ ಒತ್ತಡವನ್ನು ನಿಯಂತ್ರಿಸುವುದು ಹೇಗೆ.?
ಯಕೃತ್ತಿನ ರೋಗ ಲಕ್ಷಣಗಳು?
- ಆವೃತವಾದ ನಾಲಿಗೆ
- ಅತಿಯಾದ ತುರಿಕೆಯ ಚರ್ಮ
- ಹೆಚ್ಚು ಹೆಚ್ಚು ಬೆವರುವುದು
- ಅಸಹ್ಯವಾದ ದೇಹದ ದುರ್ವಾಸನೆ
- ಕಣ್ಣುಗಳ ಕೆಳಗೆ ಕಪ್ಪು ಕಲೆ
- ತುರಿಸುವ ಕಣ್ಣುಗಳು ಮತ್ತು ಕೆಂಪಾಗಿ ಊದಿರುವ ಕಣ್ಣುಗಳು
- ಮೊಡವೆ ರೊಸಾಸಿಯ, ಚರ್ಮದ ಮೇಲೆ ಕಂದು ಬಣ್ಣದ ಚುಕ್ಕೆಗಳು ಮತ್ತು ಕಲೆಗಳು
- ಕೆಂಪೇರಿದ ಮುಖಭಾವ ಅಥವಾ ಮಿತಿಮೀರಿದ ಮುಖದ ರಕ್ತನಾಳಗಳು
ಯಕೃತ್ತ್ ರೋಗದಿಂದ (ಕಾಮಾಲೆ) ಆಗುವ ಪರಿಣಾಮಗಳು:
- ಮಾನಸಿಕ ಗೊಂದಲ”, ದೇಹವನ್ನು ಅತಿಯಾಗಿ ಬಿಸಿ ಮಾಡುವುದು
- ಬಿಳಚಿಕೊಂಡ ಮಲ
- ಮೂಳೆ ಸವೆತ,ಸುಲಭ ರಕ್ತಸ್ರಾವ
- ಮಾನಸಿಕ ಕುಸಿತ, ಚಿತ್ತ ಚಂಚಲತೆ, ಕೋಪ ಮತ್ತು ಮುಂಗೋಪಚರ್ಮದಲ್ಲಿ ಕಾಣುವ ರಕ್ತನಾಳಗಳಂತಹ ಸಣ್ಣ ಕಲೆಗಳು,
- ದೊಡ್ಡದಾದ ಗುಲ್ಮ ಕಿಬ್ಬೊಟ್ಟೆಯ ಕುಳಿಯಲ್ಲಿ ಸ್ರಾವ, ಶೀತ
- ಪಿತ್ತಜನಕಾಂಗದ ನಾಳದಿಂದ ಅಥವಾ ಮೇದೋಜೀರಕ ಗ್ರಂಥಿಯಿಂದ ಅಥವಾ ಪಿತ್ತಕೋಶದಿಂದ ನೋವು
- ದೈಹಿಕ ಲಕ್ಷಣ ಮತ್ತು ಜೀರ್ಣತೆಯ ಸಮಸ್ಯೆಗಳು
- ಓಕರಿಕೆಗೆ ಸಂಬಂಧಿದಂತೆ ಮತ್ತೆ ಮತ್ತೆ ಬರುವ ತಲೆನೋವು
ಈ ಯಕೃತ್ತ್ ರೋಗಕ್ಕೆ ಮನೆಮದ್ದು:
Also read: ಉಗುರು ಕಚ್ಚೋದ್ರಿಂದ ಯಾವ ಖಾಯಿಲೆ ಬರುತ್ತೆ..? ಉಗುರು ಕಚ್ಚು ವವರ ವ್ಯಕ್ತಿತ್ವ ಹೇಗಿರುತ್ತೆ ನೋಡಿ…
- ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬ ಮಾತಿದೆ. ಅದರಂತೆ ಕಾಮನೆ ರೋಗ ಬಂದರೆ ಅವರ ಕಣ್ಣುಗಳು ಹಳದಿಯಾಗುತ್ತವೆ. ಈ ರೋಗದ ಲಕ್ಷಣಗಳು ನಿಮಗೆ ಗೊತ್ತಾಗುತ್ತಿದ್ದಂತೆ ಈ ಮನೆ ಮದ್ದುಗಳನ್ನ ಬಳಸಿ ರೋಗದಿಂದ ಮುಕ್ತಿ ಪಡೆಯಿರಿ.
- ಮಾವಿನ ಕಾಯಿಗೆ ಕಾಳುಮೆಣಸು, ಜೇನುತುಪ್ಪವನ್ನು ಹಚ್ಚಿಕೊಂಡು ತಿನ್ನುತ್ತಿದ್ದರೆ ಪಿತ್ತಕೋಶ ಶಿಡ್ಡಿಯಾಗುವುದರ ಜೊತೆಗೆ ಪಿತ್ತರಸವು ವೃದ್ಧಿಯಾಗುತ್ತದೆ.
- ಒಂದು ಟೀ ಸ್ಫೂನಿನಷ್ಟು ಹುಣಸೆ ಗೊಜ್ಜಿಗೆ ಅರ್ಧ ಟೀ ಸ್ಫೂನಿನಷ್ಟು ಜೀರಿಗೆಯ ಪುಡಿ, ಒಂದು ಚಮಚ್ ಜೇನು ತುಪ್ಪ ಸೇರಿಸಿ ಒಂದು ವಾರ ಸೇವಿಸಿ.
- ಪೇರಳೆ ಹಣ್ಣನ್ನು ಹೋಳುಮಾಡಿ, ಜೀರಿಗೆ ಪುಡಿಯಲ್ಲಿ ಅಡ್ಡಿ ಒಂದು ರಾತ್ರಿ ಪೂರ್ತಿ ಮಂಜು ಬೀಳುತ್ತಿರುವ ಜಾಗದಲ್ಲಿಡಬೇಕು. ಮರುದಿನ ಬೆಳಗ್ಗೆ ಕಾಳಿ ಹೊಟ್ಟೆಗೆ ಎರಡು ವಾರಗಳವರೆಗೆ ಈ ರಸ ಕುಡಿಯುತ್ತಿದ್ದರೆ ಕಾಮಾಲೆ ನಿವಾರಣೆಯಾಗುತ್ತದೆ.
- ಒಂದು ಬಟ್ಟಲಿನಷ್ಟು ಹಸುವಿನ ಹಾಲಿಗೆ ಒಂದು ಟೀ ಸ್ಫೂಣ್ಣಿನಷ್ಟು ಒಣಶುಂಠಿಯ ಪುಡಿಯನ್ನು ಬೆರೆಸಿ, ದಿನಕ್ಕೆ ಒಂದೆರಡು ಬಾರಿ ಸೇವಿಸಬೇಕು.
- 8 ದಿನ ದೊಡ್ಡ ಪತ್ರೆ ಎಲೆಗಳನ್ನು ಚನ್ನಾಗಿ ಜಗಿದು, ರಸವನ್ನು ನುಂಗುತ್ತಿದ್ದರೆ ಕಾಮಾಲೆ ಮಾಯವಾಗುವುದು
ಯಕೃತ್ತ್ ರೋಗದಿಂದ ಬಳಲುತ್ತಿದ್ದರೆ ಈ ಆಹಾರ ಕ್ರಮಗಳನ್ನು ಪಾಲಿಸಿ:
- ಎಳನೀರನ್ನು ಸೇವಿಸುವುದರಿಂದ ದೇಹದ ಶಾಖವನ್ನು ಕಡಿಮೆಗೊಳಿಸಿ ಮೂತ್ರ ವಿಸರ್ಜನೆ ಸರಾಗವಾಗಿ ಆಗುವಂತೆ ಮಾಡುತ್ತದೆ.
- ಟೊಮೇಟೊ ಕಾಮಾಲೆ ರೋಗಿಗಳಿಗೆ ಒಂದು ಉತ್ತಮ ಆಹಾರವಾಗಿದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಹೇರಳವಾದ ವಿಟಮಿನ್ ಸಿ ರೋಗವನ್ನು ಶೀಘ್ರವೇ ಹತೋಟಿಗೆ ತರಲು ನೆರವಾಗುತ್ತದೆ. ಟೊಮೇಟೊ ಹಣ್ಣಿನ ಸಿಪ್ಪೆ ಮತ್ತು ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಖಾಲಿ ಹೊಟ್ಟೆಯಲ್ಲಿ ಹನ್ನೆರಡು ದಿನ ಸತತವಾಗಿ ಕುಡಿದರೆ ಕಾಮಾಲೇ ಶೀಘ್ರವೇ ಹತೋಟಿಗೆ ಬರುತ್ತದೆ.
- ಕಬ್ಬಿನ ಹಾಲು ದಿನಕ್ಕೊಂದು ಲೋಟ ಕುಡಿಯುವುದರಿಂದ ಯಕೃತ್ ತನ್ನ ಹಿಂದಿನ ಸ್ಥಿತಿಯನ್ನು ಪಡೆಯಲು ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.
- ಕಲ್ಲಂಗಡಿಯ ಬೀಜಗಳು ಹೊಟ್ಟೆಗೆ ಹೋದರೆ ಉರಿಯೂತವನ್ನು ಕಡಿಮೆ ಮಾಡಿ, ಮೂತ್ರವಿಸರ್ಜನೆಗೆ ಸಹಾಯ ಮಾಡುತ್ತದೆ. ಅಲ್ಲದೆ ಬೈಲಿರುಬಿನ್ ಮಟ್ಟವನ್ನು ಕಡಿಮೆಮಾಡುತ್ತದೆ.
- ತಾಜಾ ತರಕಾರಿಗಳು. ಆಲೂಗಡ್ಡೆ ಕ್ಯಾರೆಟ್, ಸಿಹಿ ಆಲೋಗಡ್ಡೆ, ಬೀಟ್ರೂಟ್ ಸೇರಿದಂತೆ ಇನ್ನಿತರ ತರಕಾರಿಗಳನ್ನು ಬೇಯಿಸಿ, ಹಿಸುಕಿ ಸೇವಿಸಬಹುದು. ಇವುಗಳ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ಕಬ್ಬಿಣಾಂಶ, ಪೋಷಕಾಂಶ, ಕೊಬ್ಬಿನಂಶಗಳನ್ನು ನೀಡುತ್ತವೆ.
- ನೆಲ್ಲಿಕಾಯಿ, ಮತ್ತು ನಿಂಬು ಜ್ಯೂಸ್: ನೆಲ್ಲಿಕಾಯಿಯಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಕಾಮಾಲೆಗೆ ಉತ್ತಮವಾದ ಆಹಾರವಾಗಿದೆ. ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.
ಯಕೃತ್ತ್ ರೋಗದ ಚಿಕ್ಸಿತೆ?
Also read: ಅರೆ ತಲೆನೋವು ಅನುಭವಿಸುವರು ಇದನ್ನು ನೋಡಿ ಜೀವನ ಪೂರ್ತಿ ತಲೆನೋವಿನಿಂದ ಮುಕ್ತಿ ಹೊಂದಿ.
ದೀರ್ಘಕಾಲದಿಂದ ಬಾಧಿಸುತ್ತಿರುವ ಯಕೃತ್ತಿನ ರೋಗಕ್ಕಿರುವ ನಿಜವಾದ ಚಿಕಿತ್ಸೆ ಯಕೃತ್ತಿನ ಕಸಿ ಅಥವಾ ಸ್ಥಳಾಂತರೀಕರಣವಾಗಿದೆ. ಆದರೆ ಸಲ್ಫಸಾಲಸೈನ್ ನಂತಹ ಸದ್ಯದಲ್ಲಿ ಪರೀಕ್ಷಿಸಲಾದ ಕೆಲವೊಂದು ಆಶಾದಾಯಕ ಜೌಷಧಿಗಳಿವೆ. ಈ ಔಷಧಿಗಳು ಯಕೃತ್ತಿನ ಪುನರ್ ಬೆಳವಣಿಗೆಯನ್ನು ನಿಲ್ಲಿಸುವ ವಿಶೇಷ ಪ್ರೋಟೀನ್ ಗಳನ್ನು ತಡೆಗಟ್ಟುವ ಮೂಲಕ ಪುನರ್ ಬೆಳವಣಿಗೆ ಸಹಕರಿಸುವ ಸಾಮರ್ಥ್ಯ ಹೊಂದಿವೆ. ಇದು ಯಕೃತ್ತಿಗೆ ಭಾಗಶಃ ಅಥವಾ ಸಂಪೂರ್ಣವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ಈ ಔಷಧಿಗಳನ್ನು ವೈದ್ಯಕೀಯವಾಗಿ ಪ್ರಯೋಗಗಳಿಗೆ ಒಳಪಡಿಸಿ ಪರೀಕ್ಷಿಸುತ್ತಿರುವ ಕಾರಣ, ಸದ್ಯದಲಿ ಇವುಗಳನ್ನು ಬಳಸುತ್ತಿಲ್ಲ. ಇದನ್ನು ರೋಗಿಯ ವಿಫಲವಾದ ಯಕೃತ್ತಿಗೆ, ಇಂಜೆಕ್ಷನ್ ನ ಮೂಲಕ ಸೇರಿಸಿ ಅಂಗವನ್ನು ಮತ್ತೆ ಬೆಳೆಯುವಂತೆ ಮಾಡಲಾಗುತ್ತದೆ. ಆದರೆ ಇದು ಇನ್ನೂ ಆರಂಭದ ಹಂತದಲ್ಲಿರುವ ರೋಗಕ್ಕೆ ಪರಿಣಾಮ ಬಿರುತ್ತೆ.