ಏನೇ ಕೆಡುಕಾಗಲಿ ಅದನ್ನು ಹಳೆಯ ಸರ್ಕಾರದ ಮೇಲೆ ಹೊರಿಸುವ ಕೆಲಸವನ್ನು ಇನ್ನೂ ಬಿಟ್ಟಿಲ್ಲ ಮೋದಿ ಸರ್ಕಾರ, ಎಸ್ ಬ್ಯಾಂಕ್ ವಿಫಲತೆಯನ್ನೂ ಕಾಂಗ್ರೆಸ್ ಮೇಲೆ ಹೊರಿಸಿವುದು ನ್ಯಾಯವೇ?

0
264

ದೇಶದಲ್ಲಿ ತಲ್ಲಣ ಮೂಡಿಸಿದ ಯಸ್ ಬ್ಯಾಂಕ್ ಆರ್‌ಬಿಐ ನಿರ್ಬಂಧ ಹೇರಿದ ಬೆನ್ನಲ್ಲೇ ಖಾತೆದಾರರು ಕಳವಳಗೊಂಡಿದ್ದಾರೆ. ಬ್ಯಾಂಕ್‌ನಲ್ಲಿನ ಹಣ ಹಿಂಪಡೆಯಲು ಜನ ಮುಂದಾಗಿದ್ದಾರೆ. ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬ್ಯಾಂಕ್‌ ಹೆಸರಿನಲ್ಲಿರುವ ‘ಯೆಸ್‌’ ಪದವನ್ನೇ ಲೇವಡಿ ಮಾಡಿದ್ದಾರೆ. ‘ನೋ ಯೆಸ್ ಬ್ಯಾಂಕ್. ಮೋದಿ ಮತ್ತು ಅವರ ವಿಚಾರಗಳು ದೇಶದ ಆರ್ಥಿಕತೆಯನ್ನೇ ಹಾಳು ಮಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2014ರಲ್ಲಿ 15 ಲಕ್ಷ ತೆಗೆದುಕೊಳ್ಳಿ ಎಂದ ಮೋದಿ, 2018ರಲ್ಲಿ ಪಕೋಡಾ ತೆಗೆದುಕೊಳ್ಳಿ ಎಂದಿದೆ. ಇದೀಗ ಬ್ಯಾಂಕ್‍ಗಳನ್ನು ಬಂದ್ ಮಾಡಲು ಚಾವಿ ಲೋ ಎನ್ನುತ್ತಿದೆ. ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ನಡೆಸುವ ಮತ್ತು ಹಣಕಾಸು ಸಂಸ್ಥೆಗಳನ್ನು ನಿರ್ವಹಿಸುವ ಅವರ ಸಾಮರ್ಥ್ಯವನ್ನು ಯೆಸ್‌ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಳಿಸಿದೆ. ಆಗ ಪಿಎಂಸಿ ಬ್ಯಾಂಕ್ ಆಯ್ತು, ಈಗ ಯೆಸ್ ಬ್ಯಾಂಕ್. ಸರ್ಕಾರಕ್ಕೆ ಏನಾದರೂ ಕಾಳಜಿ ಎಂಬುದು ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಹಣ ಸೇಫ್ ಆಗಿದೆ ನಿರ್ಮಲಾ ಸೀತಾರಾಮನ್;

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಆರ್‌ಬಿಐ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಯೆಸ್ ಬ್ಯಾಂಕ್‍ನಲ್ಲಿ ಎಸ್‍ಬಿಐ 5 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದು, ಅಲ್ಲಿನ ಉದ್ಯೋಗಿಗಳಿಗೆ ಒಂದು ವರ್ಷ ಯಾವುದೇ ಭಯ ಇರಲ್ಲ, ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಆರ್​ಬಿಐ ಗೌವರ್ನರ್ ನನಗೆ ಹೇಳಿದ್ದಾರೆ. ಆರ್​ಬಿಐ ಮತ್ತು ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಮುಂದಿನ ಕೆಲವು ತಿಂಗಳುಗಳ ಕಾಲ ನಾನೇ ಖುದ್ದಾಗಿ ಆರ್​ಬಿಐ ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ. ಗ್ರಾಹಕರು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಯುಪಿಎ ಸರ್ಕಾರದ ಸಾಲಗಳೇ ಮುಳುವಾಗಿವೆ;

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಿದ ಸಾಲಗಳೇ ಯೆಸ್ ಬ್ಯಾಂಕ್‍ಗೆ ಮುಳುವಾಗಿವೆ. ಯಶ್ ಬ್ಯಾಂಕ್ ಬಿಕ್ಕಟ್ಟು ದಿಢೀರ್ ಸಂಭವಿಸಿದ್ದಲ್ಲ. 2017ರಿಂದಲೇ ಬ್ಯಾಂಕ್ ಮೇಲೆ ನಾವು ನಿಗಾ ಇಟ್ಟಿದ್ದೇವು. ಈ ನಿಟ್ಟಿನಲ್ಲಿ ಆರ್‌ಬಿಐ ಯೆಸ್ ಬ್ಯಾಂಕ್‍ನ ವ್ಯವಸ್ಥಾಪ ನಿರ್ದೇಶಕ ಹಾಗೂ ಸಿಇಒ ಅವರನ್ನು ಬದಲಿಸಲು ಶಿಫಾರಸು ಮಾಡಿತ್ತು. ಅದರಂತೆ 2018ರ ಸೆಪ್ಟೆಂಬರ್ ನಲ್ಲಿ ಹೊಸದಾಗಿ ಸಿಇಒ ಅವರನ್ನು ನೇಮಕ ಮಾಡಲಾಗಿತ್ತು. ಅಂದಿನಿಂದ ಬ್ಯಾಂಕಿನ ಬಿಕ್ಕಟ್ಟು ಸುಧಾರಣಗೆ ಕೆಲಸ ನಡೆದಿತ್ತು ಎಂದು ತಿಳಿಸಿದರು. ಈ ವೇಳೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿ, ಆರ್ಥಿಕತೆಯನ್ನು ಕಾಪಾಡುವ ದೃಷ್ಟಿಯಿಂದಲೇ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಈ ತಿಂಗಳ ಒಳಗೆ ಯೆಸ್ ಬ್ಯಾಂಕ್ ಪುನರುಜ್ಜೀವನಕ್ಕೆ ಯೋಜನೆ ರೂಪಿಸಲಾಗುವುದು. ಗ್ರಾಹಕರು ಆತಂಕ ಪಡುವುದು ಬೇಡ ಎಂದಿದ್ದಾರೆ.