ಸರಿಯಾಗಿ ನಿದ್ದೆ ಮಾಡದೆ ಇದ್ರೆ ಎಷ್ಟೊಂದು ತೊಂದರೆ ಗೊತ್ತಾ? ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ನಿದ್ದೆ ಮಾಡಿದರೆ ಹೃದಯದ ಕಾಯಿಲೆ ಬರಬಹುದಂತೆ..

0
1328

ಉತ್ತಮ ಆರೋಗ್ಯಕ್ಕೆ ಬರಿ ಉತ್ತಮ ಆಹಾರ ತಿಂದರೆ ಸಾಕಾಗುವುದಿಲ್ಲ ಅದಕ್ಕೆ ಸರಿಯಾಗಿ ನಿದ್ದೆ, ವಿಶ್ರಾಂತಿ ಜೊತೆಗೆ ವ್ಯಾಯಾಮಗಳ ಅವಶ್ಯಕತೆ ಕೂಡ ಇದೆ. ಅದರಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ ಆರೋಗ್ಯದ ಮೇಲೆ ಹಲವು ಪರಿಣಾಮಗಳು ಬಿರುತ್ತೇವೆ ಎನ್ನುವುದಕ್ಕೆ ಹಲವು ಸಂಶೋಧನೆಗಳು ತಿಳಿಸಿವೆ ಅದರಂತೆ ಮತ್ತೊಂದು ಅಧ್ಯಯನ ನಡೆದಿದ್ದು ಒಂದು ರಾತ್ರಿಯಲ್ಲಿ ಏಳು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

Also read: ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ಕಬ್ಬಿನ ಹಾಲು ರಾಮಬಾಣ ಆಗೋದ್ರಲ್ಲಿ ಸಂಶಯನೇ ಇಲ್ಲ…ಹೇಗೆ ಅಂತೀರಾ ಮುಂದೆ ಓದಿ..

ಹೌದು ಅಧ್ಯಯನ ವರದಿಯೊಂದರಲ್ಲಿ ನಾವು ರಾತ್ರಿ ವೇಳೆ ಏಳು ಗಂಟೆಗಿಂತ ಕಡಿಮೆ ಮಲಗುವಂತಹ ಜನರಲ್ಲಿ ಹೃದಯದ ಕಾಯಿಲೆ(ಸಿವಿಡಿ) ಸಾಧ್ಯತೆಯು ಹೆಚ್ಚಾಗಿರುವುದು ಮತ್ತು ಹೃದಯದ ಕಾಯಿಲೆಯು ಬರುವುದು ಎಂದು ಅಧ್ಯಯನ ತಿಳಿಸಿದೆ. ಎಕ್ಸ್ ಪೆರಿಮೆಂಟಲ್ ಸೈಕಾಲಜಿಯಲ್ಲಿ ಈ ಅಧ್ಯಯನ ವರದಿಯು ಪ್ರಕಟಗೊಂಡಿದೆ. ಏಳು ಗಂಟೆಗಿಂತ ಕಡಿಮೆ ಮಲಗುವಂತಹ ಜನರಲ್ಲಿ ರಕ್ತದ ಮಟ್ಟವು ಮೂರು ಶಾರೀರಿಕ ನಿಯಂತ್ರಕ ಅಥವಾ ಮೈಕ್ರೋಆರ್ ಎನ್ ಎ ಗಿಂತಲೂ ಕಡಿಮೆ ಇರುವುದು. ಇದು ಜಿನ್ ಗಳ ಭಾವನೆ ಮತ್ತು ಹೃದಯದ ಆರೋಗ್ಯದಲ್ಲಿ ತುಂಬಾ ಪ್ರಮುಖ ಪಾತ್ರ ಬೀರುವುದು ಎಂದು ಹೇಳಲಾಗಿದೆ.

Also read: ನೀವು ನಿದ್ದೆಯಲ್ಲಿ ಕನಸು ಕಾಣೋದು ಕಡಿಮೆಯಾಗಿದೀಯಾ?? ಹಾಗಿದ್ರೆ ನೀವು ರೋಗಕ್ಕೆ ಹತ್ರವಾಗ್ತಿದೀರಾ ಜಾಗ್ರತೆ…

ಏನಿದು ಅಧ್ಯಯನ?

ಅಮೆರಿಕಾದ ಕೊಲೊರಾಡೊ ಯೂನಿವರ್ಸಿಟಿಯ ಪ್ರೊಪೆಸರ್ ಕ್ರಿಸ್ಟೋಪರ್ ಡಿ ಸೋಜಾ ಅವರ ಹೊಸ ಅಧ್ಯಯನ ತಿಳಿಸಿದ ಹಾಗೆ ನಿದ್ರೆಯಿಂದಾಗಿ ಹೃದಯದ ಆರೋಗ್ಯವು ಉತ್ತಮವಾಗುವುದು ಮತ್ತು ಸಂಪೂರ್ಣ ದೇಹಶಾಸ್ತ್ರ ಕೂಡ ಆಗಿದೆ. ಈ ಅಧ್ಯಯನಕ್ಕಾಗಿ ಸಂಶೋಧನಾ ತಂಡವು ಸುಮಾರು 44ರಿಂದ 62ರ ಹರೆಯದ ವಯಸ್ಸಿನ ಪುರುಷರು ಹಾಗೂ ಮಹಿಳೆಯರ ರಕ್ತದ ಮಾದರಿಯನ್ನು ಸಂಗ್ರಹಿಸಿತು ಮತ್ತು ಅವರ ನಿದ್ರೆಯ ಬಗ್ಗೆ ಪ್ರಶ್ನೆಗಳನ್ನು ಕೂಡ ಕೇಳಲಾಯಿತು. ಇದರಲ್ಲಿ ಭಾಗಿಯಾದ ಅರ್ಧದಷ್ಟು ಮಂದಿ ದಿನಕ್ಕೆ 8.5 ಗಂಟೆ ನಿದ್ರೆ ಮಾಡಿದರೆ, ಇನ್ನು ಕೆಲವರು ದಿನಕ್ಕೆ 6.8 ಗಂಟೆ ನಿದ್ರೆ ಮಾಡುತ್ತಿದ್ದರು. ಇದರಿಂದ ಉರಿಯೂತ, ಪ್ರತಿರೋಧಕ ಕಾರ್ಯನಿರ್ವಹಣೆ ಮತ್ತು ಹೃದಯದ ಆರೋಗ್ಯದ ಬಗ್ಗೆ ಮೈಕ್ರೊಆರ್ ಎನ್ ಎ ಯ 9 ರೀತಿಯ ಭಾವನೆಗಳನ್ನು ಸಂಶೋಧನಾ ತಂಡವು ಪರಿಕ್ಷಿಸಿತು.

Also read: ನಿದ್ದೆ ಮಾಡೋದು ಒಳ್ಳೇದೇ, ಆದರೆ ಅದು ಜಾಸ್ತಿ ಆದರೆ ದೇಹಕ್ಕೆ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತೆ ಗೊತ್ತ?

ಈ ಸಂಶೋಧನೆಯಲ್ಲಿ ಸರಿಯಾದ ನಿದ್ರೆ ಇಲ್ಲದೆ ಇರುವಂತಹ ಜನರಲ್ಲಿ ತುಂಬಾ ಕಡಿಮೆ MRI-125A , MIR -126 ಮತ್ತು MIR -146 A ಇರುವುದು ಕಂಡುಬಂದಿದೆ. ಇದು ಸರಿಯಾದ ನಿದ್ರೆ ಮಾಡುವವರಲ್ಲಿ ಹೆಚ್ಚಾಗಿದೆ. ಆದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಸರಿಯಾದ ಕ್ರಮವೇ ಎಂದು ಮಾತ್ರ ಇದುವರೆಗೆ ಸರಿಯಾಗಿ ತಿಳಿದಿಲ್ಲ. ಆದರೆ ದೇಹಶಾಸ್ತ್ರದ ನಿಯಂತ್ರಕವನ್ನು ಸರಿಯಾದ ಮಟ್ಟದಲ್ಲಿ ಇಟ್ಟುಕೊಳ್ಳಲು ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆಯು ಅಗತ್ಯವಾಗಿ ಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ಸೆಲ್ಯೂಲರ್ ಬ್ರೇಕ್ಸ್ ನಂತೆ ಇದೆ, ಮೈಕ್ರೋಆರ್ ಎನ್ ಎ ಕಡಿಮೆ ಇದ್ದರೆ ಆಗ ನಮ್ಮ ಸಂಪೂರ್ಣ ಆರೋಗ್ಯದ ಕೋಶದ ಮೇಲೆ ಅದು ಪರಿಣಾಮ ಬೀರಬಹುದು ಮೈಕ್ರೋಆರ್ ಎನ್ ಎ ರಕ್ತವನ್ನು ಹೃದಯದ ಕಾಯಿಲೆಗೆ ಒಳಗಾಗುವುದು ಎಂದು ತಿಳಿಸಿದ್ದಾರೆ.