ಧೂಮಪಾನಿಗಳೇ ಎಚ್ಚರ; ನಿಮಗೆ ಮೊದಲು ಹರಡುತ್ತೆ ಕೊರೊನಾ, ಯಾಕೇ, ಹೇಗೆ ಅಂತ ವ್ಯೆದ್ಯರು ಹೇಳಿದ ಮಾಹಿತಿ ಇಲ್ಲಿದೆ ನೋಡಿ.!

0
909

ವಿಶ್ವದಲ್ಲಿ ಸಾವಿನ ಬೀಜ ಬಿತ್ತುತ್ತಿರುವ ಕೊರೊನಾ ವೈರಸ್ ಬಗ್ಗೆ ಜನರು ಸರಿಯಾಗಿ ಕಾಳಜಿ ವಹಿಸುವುದು ಮುಖ್ಯವಾದ ಮೆಡಿಸೇನ್ ಅಂತಲೇ ಹೇಳಬಹುದು. ಆದರೆ ಜನರು ಅದಕ್ಕೆ ಕೇರ್ ಮಾಡದೇ ಇದ್ದರೆ ಮತ್ತಷ್ಟು ವೈರಸ್ ಹರಡುವುದರಲ್ಲಿ ಅನುಮಾನವಿಲ್ಲ ವೆಂದು ವ್ಯೆದ್ಯರು ಮಾಹಿತಿ ನೀಡಿದ್ದಾರೆ. ಅದರಲ್ಲಿ ಧುಮಪಾನಿಗಳಿಗೆ ವೈರಸ್ ವೇಗವಾಗಿ ಹರಡುತ್ತೆ, ಮತ್ತು ಅವರಿಗೇನೆ ಹೆಚ್ಚು ಅಪಾಯವೆಂದು ವ್ಯೆದ್ಯರು ಬೆಚ್ಚಿಬೀಳಿಸುವ ಸುದ್ದಿಯನ್ನು ತಿಳಿಸಿದ್ದು, ಧೂಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಇದರಿಂದ ಅವರುಗಳು ಉಸಿರಾಟದ ತೊಂದರೆಗಳಿಗೂ ಸಿಲುಕಲಿದ್ದಾರೆ. ಎಂದು ವ್ಯೆದ್ಯರು ತಿಳಿಸಿದ್ದಾರೆ.

ಧೂಮಪಾನಿಗಳಿಗೆ ಮೊದಲು ಹರಡುತ್ತ ಕೊರೊನಾ?

ಹೌದು ಬೆಂಗಳೂರಿನ ತಜ್ಞ ವೈದ್ಯ ಡಾ. ವಿಶಾಲ್ ರಾವ್ ಹೇಳುವಂತೆ ಧೂಮಪಾನಿಗಳಾಗಿದ್ದರೆ ಅವರುಗಳ ಮೇಲೆ ಸೋಂಕು ಕ್ಷಿಪ್ರವಾಗಿ ಇನ್ನಷ್ಟು ಪರಿಣಾಮ ಬೀರುತ್ತಿರುವುದಕ್ಕೆ ಸಮಗ್ರ ಪುರಾವೆ ದೊರೆತಿದೆ. ಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಅದರಿಂದ ಕ್ಷಯರೋಗದಂತಹ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಧೂಮಪಾನ ಮಾಡದ ವ್ಯಕ್ತಿಗಳಿಗೆ ಹೋಲಿಸಿದರೆ ಧೂಮಪಾನಿಗಳು ಕೋವಿಡ್-19ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಧೂಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಇದರಿಂದ ಅವರುಗಳು ಉಸಿರಾಟದ ತೊಂದರೆಗಳಿಗೂ ಸಿಲುಕಲಿದ್ದಾರೆ.

ಏಕೆಂದರೆ ಧೂಮಪಾನಿಗಳಿಗೆ ಮೊದಲೇ ಶ್ವಾಸಕೋಶಗಳು ಹಾನಿಗೊಳಗಾಗಿರುವುದರಿಂದ ಅವರಿಗೆ ಕೊರೋನಾ ಸೋಂಕು ತಗುಲಿದರೆ ಅದು ಅವರ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ ಶ್ವಾಸಕೋಶಗಳು ನೈಸರ್ಗಿಕವಾಗಿ ದ್ರವ ರೂಪದ ಲೋಳೆ (ಮ್ಯುಕಸ್) ಉತ್ಪತ್ತಿ ಮಾಡುತ್ತವೆ. ಆದರೆ ಧೂಮಪಾನ ಮಾಡುವಂತವರಲ್ಲಿ ದಪ್ಪನೆಯ ಮ್ಯುಕಸ್ ಗಟ್ಟಿಯಾಗಿರಲಿದ್ದು, ಅದು ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲಾಗದು. ಈ ಮ್ಯುಕಸ್ ಶ್ವಾಸಕೋಶದೊಳಗೆ ಕಟ್ಟಿಕೊಂಡು, ಅದು ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ ಅದು ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಕುಂದಿಸುತ್ತದೆ.

ಹಾಗಾಗಿ ಧೂಮಪಾನಿಗಳು ಧೂಮಪಾನ ಮಾಡದಂತವರ ಬಳಿ ಸೇರದಿರುವುದು ಅತಿ ಮುಖ್ಯ. ಲಾಕ್ ಡೌನ್ ನಿಂದಾಗಿ ಮನೆಗಳಲ್ಲೇ ಉಳಿಯುವ ಜನರು ತಮ್ಮ ಕುಟುಂಬದ ಸದಸ್ಯರ ಮುಂದೆ ಧೂಮಪಾನ ಮಾಡುವ ಸಾಧ್ಯತೆಗಳಿದ್ದು, ಇದರಿಂದ ಅವರು ಇಡೀ ಕುಟುಂಬದವರನ್ನು ಕೋವಿಡ್ ಎದುರು ಅಪಾಯಕ್ಕೆ ಸಿಲುಕಿಸುತ್ತಾರೆ ಎಂದು ಹೇಳಿದ್ದಾರೆ. “ಇದು ಧೂಮಪಾನ ತ್ಯಜಿಸಲು ಸಕಾಲ, ಧೂಮಪಾನ ಮಾಡುತ್ತಿರುವವರು ಈ 21 ದಿನಗಳ ಕೊರೋನಾ ಸವಾಲನ್ನು ಬಳಸಿಕೊಂಡು ವ್ಯಸನ ಮುಕ್ತರಾಗುವುದು ಒಳ್ಳೆಯದು” ಎಂದು ತಿಳಿಸಿದ್ದಾರೆ. ಈ ವಿಷಯದ ಕುರಿತು ಮಾತನಾಡಿರುವ ನಿಮ್ಹಾನ್ಸ್ ನ ವೈದ್ಯರಾದ ಡಾ|| ಪ್ರತಿಮಾ ಮೂರ್ತಿ, ಕೋವಿಡ್-19ಗೆ ಧೂಮಪಾನಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಧೂಮಪಾನ ಶ್ವಾಸಕೋಶದ ಕಾರ್ಯವನ್ನು ದುರ್ಬಲಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.

ಅದರಂತೆ ಧೂಮಪಾನಿಗಳಿಗೆ ಕೋವಿಡ್ ಸೋಂಕು ತಗುಲಿದರೆ ಅವರಲ್ಲಿ ಆರೋಗ್ಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು, ಅಂತವರು ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತದೆ. ಧೂಮಪಾನಿಗಳಿಗೆ ಕೋವಿಡ್ ಸೋಂಕು ತಗುಲದೇ ಇದ್ದರೂ ಸಹ ಧೂಮಪಾನವನ್ನು ವರ್ಜಿಸಲು ಇದು ಸೂಕ್ತವಾದ ಸಮಯ. ಇದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕೆಲವೇ ತಿಂಗಳುಗಳಲ್ಲಿ ಅವರ ಶ್ವಾಸಕೋಶದ ಕಾರ್ಯನಿರ್ವಹಣೆ ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಸಿಗರೆಟ್, ಬೀಡಿ ಬಿಡಲು ಇದೊಂದು ಸಕಾಲವಾಗಿದೆ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

Also read: ಕರೋನಾ ವೈರಸ್ ಬಂದ್ರೆ ನಿಮ್ಮಲ್ಲಿ ಯಾವ ಲಕ್ಷಣಗಳು ಕಾಣುತ್ತವೆ, ಪರೀಕ್ಷೆ ಯಾವಾಗ ಮಾಡಿಸಿಕೊಳ್ಳಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ!!