ಮನೆಗೆ ನುಗಿದ್ದ ಹಾವನ್ನು ಹಿಡಿದು ಬಾಯಿಯಿಂದ ಕಚ್ಚಿ ಮೂರು ತುಂಡು ಮಾಡಿದ ಭೂಪ; ಮುಂದೇನಾಯಿತು ನೋಡಿ..

0
386

ದೇಶದಲ್ಲಿ ಇತ್ತೀಚಿಗೆ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಊಹೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಎನ್ನುವ ಘಟನೆಗಳು ನಡೆಯುತ್ತಿವೆ. ಅದರಲ್ಲಿ ಕುಡಿದ ನಸೆಯಲ್ಲಿ ಜನರು ಮಾಡುತ್ತಿರುವ ಕೆಲಸಗಳನ್ನು ನೋಡುತ್ತಿದ್ದ ಜನರಿಗೆ ನಗುವುದೋ.. ಅಳುವುದೋ.. ಎನ್ನುವ ಗೊಂದಲದಲ್ಲಿದ್ದಾರೆ. ಏಕೆಂದರೆ ನಸೆಯಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದು ಮಾಡುವ ವ್ಯಕ್ತಿಗೆ ತಿಳಿದರೆ ಅವರೇ ಅಸಹ್ಯೆ ಪಡುವಷ್ಟು ಗಂಭೀರವಾಗಿರುತ್ತೆ. ಅಂತಹದೇ ಒಂದು ಘಟನೆ ನಡೆದಿದ್ದು. ವ್ಯಕ್ತಿಯೊಬ್ಬ ಕುಡಿದ ನಸೆಯಲ್ಲಿ ಮಾಡಿರುವ ಕೃತ್ಯ ಒಂದು ರೀತಿಯಲ್ಲಿ ವಿಚಿತ್ರವಾಗಿದ್ದು, ನಶೆಯಲ್ಲಿದ್ದ ವ್ಯಕ್ತಿ ಹಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ್ದಾನೆ.

Also read: ಕುಡಿದು ವಾಹನ ಚಲಾಯಿಸುವ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಮಾಸ್ಟರ್ ಮೈಂಡ್ ಪ್ಲಾನ್ ಫುಲ್ ಸಕ್ಸಸ್; ಏನಿದು ಪ್ಲಾನ್??

ಹಾವನ್ನೇ ಕಚ್ಚಿನ ತುಂಡರಿಸಿದ?

ಹೌದು ಪ್ರಕೃತಿಗೆ ವಿರೋಧವಾಗಿ ಜನರು ನಡೆದುಕೊಳ್ಳುತ್ತಿದ್ದಾರೋ ಇಲ್ಲ ಜನರಿಗೆ ಪ್ರಕೃತಿ ವಿರೋದ್ಧವಾಗಿ ನಡೆಯುತ್ತಿದಿಯೋ ಗೊತ್ತಿಲ್ಲ, ಆದರೆ ಮಾನವನು ಯಾವ ಪ್ರಾಣಿಯನ್ನು, ಸರಿಸೃಪವನ್ನು ನೋಡಿ ಹೆದರುತ್ತಿದ್ದನೋ ಅವೇ ಮಾನವನನ್ನು ಕಂಡು ಹೆದರುತ್ತಿವೆ. ಏಕೆಂದರೆ ಈ ವ್ಯಕ್ತಿ ಮಾಡಿದ ಕೃತ್ಯ ಹಾಗಿದೆ. ಹೌದು ಎತಾಹ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ರಾಜ್ ಕುಮಾರ್ ಹಾವಿಗೆ ತಿರುಗಿ ಕಚ್ಚಿರುವ ವ್ಯಕ್ತಿಯಾಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ರಾಜ್ ಕುಡಿದು ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ಹಾವೊಂದು ಆತನಿಗೆ ಕಚ್ಚಿದೆ. ಆಗ ಕುಡಿದ ನಶೆಯಲ್ಲಿ ರಾಜ್ ಕೋಪಗೊಂಡು ಹಾವನ್ನು ಹಿಡಿದು ತಿರುಗಿ ಅದಕ್ಕೇ ಕಚ್ಚಿ, ತುಂಡು ತುಂಡಾಗಿಸಿದ್ದಾನೆ.

Also read: ಎರಡು ಬಾಳೆ ಹಣ್ಣಿಗೆ 442 ರೂ. ಬಿಲ್ ಮಾಡಿದ ಪಂಚತಾರ ಹೋಟೆಲ್; ಹಣ್ಣು ತಿಂದು ಈ ನಟ ಮುಂದೇನು ಮಾಡಿದ ಗೊತ್ತಾ??

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ ತಂದೆ ಬಾಬು ರಾಮ್ ಪ್ರತಿಕ್ರಿಯಿಸಿ, ಈ ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕುಡಿದಿದ್ದನು. ನಮ್ಮ ಮನೆಗೆ ನುಗ್ಗಿದ್ದ ಹಾವು ಆತನಿಗೆ ಕಚ್ಚಿತ್ತು. ಆಗ ರಾಜ್ ಹಾವನ್ನು ಹಿಡಿದು ಕಚ್ಚಿ ತುಂಡರಿಸಿದನು. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದೆ. ಆತನ ಚಿಕಿತ್ಸೆ ಖರ್ಚನ್ನು ಕಟ್ಟುವಷ್ಟು ಶಕ್ತಿ ನಮಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ವೈದ್ಯರು ರೋಗಿಯೊಬ್ಬ ನಮ್ಮ ಬಳಿ ಬಂದು ನಾನು ಹಾವನ್ನು ಕಚ್ಚಿದ್ದೇನೆ ಎಂದನು. ಆಗ ನಾವು ಹಾವು ಆತನಿಗೆ ಕಚ್ಚಿತ್ತು ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ನಂತರ ನಿಜ ಸಂಗತಿ ತಿಳಿಯಿತು. ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆತನನ್ನು ಬೇರೆ ಆಸ್ಪತ್ರೆಗೆ ರವಾನಿಸಿ ಎಂದು ಕುಟುಂಬಸ್ಥರಿಗೆ ಸೂಚಿಸಿದ್ದೆವು ಎಂದು ಹೇಳಿದ್ದಾರೆ.

ಈ ಹಾವನ್ನು ನೋಡಿದ ಸ್ಥಳಿಯರು ಮಾಹಿತಿ ನೋಡಿದ್ದು , ರಾಜ್ ಹಾವನ್ನು ಒಂದೇ ಬಾರಿ ಕಚ್ಚಿಲ್ಲ ಅದನ್ನು ಕೈಯಲ್ಲಿ ಹಿಡಿದು ಬಾಯಿಯಲ್ಲಿ ಇಟ್ಟುಕೊಂಡು ಅಗೆದಿದ್ದಾನೆ. ಆಗ ಹಾವು ಒಂದು ತುಂಡಾಗಿದೆ. ಅಷ್ಟಕ್ಕೇ ಬಿಡದ ವ್ಯಕ್ತಿ ಸುಮಾರು ಹೊತ್ತು ಕಚ್ಚಿ ತುಂಡು- ತುಂಡಾಗಿ ಕತ್ತರಿಸಿದ್ದಾನೆ. ಹಾವಿಗೆ ಮರಳಿ ಕಡಿಯಲು ಕೂಡ ಬಿಡದ ವ್ಯಕ್ತಿ ಈ ಕೃತ್ಯ ಮಾಡಿದ್ದು, ನೋಡಿದ ಜನರಿಗೆ ಭಯಂಕರ ಅನಿಸಿದೆ ಎಂದು ಹೇಳಿದ್ದಾರೆ.