ಹೆಬ್ಬಾವು ಕರುವನ್ನ ತಿಂದಿದೆ ಎಂದುಕೊಂಡ ಜನಕ್ಕೆ ಹೊಟ್ಟೆ ಬಗೆದಾಗ ಶಾಕ್ ಆಗಿತ್ತು…!!

0
2607

ಆಹಾರಕ್ಕಾಗಿ ಓಡಾಟ… ಇವೆಲ್ಲದರ ಮಧ್ಯೆ ಸಿಲುಕುವ ಮನುಷ್ಯರಿಗೆ ವಿಷದ ಹಾವುಗಳಿಂದ ಪ್ರಾಣ ಸಂಕಟ. ಆದ್ರೆ ಇಲ್ಲೊಂದು ಅಮಾಯಕ ಹೆಬ್ಬಾವು ಮನುಷ್ಯರ ಉಪಟಳಕ್ಕೆ ಬಲಿಯಾಗಿದೆ. ಆದ್ರೆ ನಂಬಲೇಬೇಕು. ಹೌದು, ಈ ಘಟನೆ ನಡೆದಿರೋದು ನೈಜೀರಿಯಾದ ಅಬುಜಾದಲ್ಲಿ.ಇಲ್ಲಿನ ಸ್ಥಳೀಯರು ಹಾಗೂ ರೈತರ ನಿದ್ದೆ ಕೆಡಿಸಿದ್ದ ದೈತ್ಯ ಹೆಬ್ಬಾವನ್ನ ಇಲ್ಲಿನ ಜನ ಕೊಂದಿದ್ದಾರೆ. ಇದು ಆಫ್ರಿಕನ್ ರಾಕ್ ಪೈಥಾನ್ ಜಾತಿಗೆ ಸೇರಿದ ಹಾವು ಅಂತ ವರದಿಯಾಗಿದೆ.

b4e2ff956a27c63763b7b0a1028ae6b1

ಹೆಬ್ಬಾವನ್ನ ಕೊಂದು ಅದರ ಹೊಟ್ಟೆ ಬಗೆದು ನೋಡಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಹಾವುಗಳೆಂದರೆ ಭಯಂಕರ ಹಾಗೂ ಅಪಾಯಕಾರಿಗಳಾಗಿರುತ್ತವೆ. ಅದ್ರಲ್ಲೂ ಹೆಬ್ಬಾವುಗಳೆಂದರೆ ತುಂಬಾ ಡೇಂಜರ್. ಆದ್ರೆ ಈ ನರ ಪ್ರಾಣಿಗಳು ಅದರ ಹೊಟ್ಟೆ ಬಗೆಯುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿ ಒಂದು ಜೀವಕ್ಕೆ ಯಳ್ಳು ನೀರು ಬಿಟ್ಟಿದ್ದಾರೆ.

15036367_1409849222366159_7779724029317662480_n

ಕೊಂದವರು ಸುಮ್ಮನಾಗಿಬಿಟ್ಟಿದ್ದರೆ ಇಷ್ಟೊಂದು ಪ್ರಚಾರ ಪಡೆಯುತ್ತಿರಲಿಲ್ಲವೇನೋ, ಕೊಂದ ನಂತರ ಅದರ ಹೊಟ್ಟೆಯನ್ನು ಕಟ್ ಮಾಡಿ ಹೊಟ್ಟೆಯೊಳಗೆ ಸಾಲಾಗಿ ಜೋಡಿಸಿಟ್ಟಂತೆ ಇದ್ದ ಸುಮಾರು 100 ಮೊಟ್ಟೆಗಳನ್ನು ಹೊರತಗೆದಿದ್ದಾರೆ. ಕರುವನ್ನ ತಿಂದಿದೆ ಎಂದುಕೊಂಡು ಜನ ಹಾವನ್ನ ಕೊಂದಿದ್ದರು. ಆದ್ರೆ ಅನಂತರ ಗೊತ್ತಾಗಿದ್ದು ಅದು ಗರ್ಭಿಣಿ ಹಾವೆಂದು.ಕರ್ಮದ ವಿಚಾರವೆಂದರೆ, ಹಾವಿನ ಮೊಟ್ಟೆಯನ್ನ ತೆಗೆದು ಪಾತ್ರೆಗಳಲ್ಲಿ ತುಂಬಿಸಿ ಮಾರಾಟ ಮಾಡದ್ದಾರೆ. ಇದು ಇಲ್ಲಿನ ಜನರಿಗೆ ಅಪರೂಪದ ಭಕ್ಷ್ಯವಂತೆ. ಇಲ್ಲಿನ ಜನ ಅದನ್ನು ಕಂಡರೆ ಜನ ಎದ್ನೋ ಬಿದ್ನೋ ಅಂತ ಓಡ್ತಾರೆ.

eggs-of-snake-2-700x1024

ಒಂದು ಜಿರಲೆ ಸಾಯಿಸಿದರೇ ಫೋಟೋ ಕ್ಲಿಕ್ಕಿಸುವ ಜನ, ಹೆಬ್ಬಾವಿನ ಫೋಟೋ ತಗೆಯುವುದಕ್ಕೆ ಮರೆಯುತ್ತಾರೆಯೇ…? ಹೌದು, ಫೋಟೋಗಳು ಸಾಮಾಜಿಕ ಜಾಲತಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕೆಲವರು ಹಾವಿಗಾದ ಗತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.