ಸೌರವ್ಯೂಹದ ಬಗ್ಗೆ ನಿಮಗೆಷ್ಟು ಗೊತ್ತು?

0
879

ಸೂರ್ಯ ನಮ್ಮ ಆಕಾಶಗಂಗೆಯ ಒಂದು ಅತಿ ಸಾಮಾನ್ಯ ನಕ್ಷತ್ರ. ಸದ್ಯದ ಲೆಕ್ಕಾಚಾರದಂತೆ ನಮ್ಮ ಗ್ಯಾಲಕ್ಷಿಯ ಕೇಂದ್ರ ಭಾಗದಿಂದ 30.000 ಜ್ಯೋತಿ ವರ್ಷಗಳ ದೂರದಲ್ಲಿ ಅಂದರೆ ಈ ಸುರಳಿ ಬ್ರಹ್ಮಾಂಡದ ಒಂದು ತೋಳಿನ ಕೊನೆಯ ಭಾಗದಲ್ಲಿ ನಮ್ಮ ಸೂರ್ಯನ ಸ್ಥಾನವಿದೆ.

ಇದರ ಗ್ರಹಗಾಳದ ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನೆಸ್, ನೆಫ್ಚೋನ್ ಎಂಬ 8 ಗ್ರಹಗಳ ಸಹಿತ, ಫ್ಲೊಟೊನಂತಹ 3 ಕುಬ್ಜಗಳು ಸೇರಿದಂತೆ, ಚಂದ್ರನು, ಧೂಮಕೇತುಗಳು, ಉಲ್ಕೆಗಳು ಸೇರಿದಂತೆ ಈ ಸೌರಪರಿಹಾರವು ನಮ್ಮ ಆಕಾಶ ಗಂಗೆಯಲ್ಲಿರುವ 10.000 ಕೋಟಿಕುಟುಂಬಗಳಲ್ಲಿ ಕೇಲವು ಒಂದು ಕುಟುಂಬ ಮಾತ್ರ ಇಲ್ಲಿ ಸೂರ್ಯನೇ ಈ ಕುಟುಂಬದ ಯಜಮಾನ. ನಮ್ಮ ಗ್ರಹ, ಉಲ್ಕೆ, ಉಪಗ್ರಹಗಳೆಲ್ಲಾ ಈ ಕುಟುಂಬದ ಸದಸ್ಯರು. ಈ ವ್ಯವಸ್ಥೆಯನ್ನೇ ನಾವು ಸೌರವ್ಯೂಹ, ಸೌರ ಪರಿವಾರ ಅಥವಾ ಸೌರಮಂಡಲ ಎಂದು ಕರೆಯುತ್ತಾರೆ.

ಆಕಾಶಗಂಗೆಯಲ್ಲಿ ಕಾಣುವ ನಕ್ಷತ್ರಗಳಲ್ಲಿ ನಮ್ಮ ಸೂರ್ಯನೇನೂ ಮಹಾನ್ ತಾರೆಯಲ್ಲ. ಅವನಿಗಿಂತಲೂ 60.000 ಪಟ್ಟು ಹೆಚ್ಚು ಪ್ರಕಾಶ ಮಾನವಾದ ರಿಗಲ್ (ವಾಧ ಪೃಷ್ಠ) ಎಂಬ ನಕ್ಷತ್ರವಿದೆ. ಇದು ಗಾತ್ರದಲ್ಲಿ ಸೂರ್ಯನಿಗಿಂತಲೂ 20 ಪಟ್ಟು ದೊಡ್ಡದು. ರಿಗೆಲ್ ಗಿಂತಲೂ ದುಪ್ಪಟ್ಟು ಪ್ರಕಾಶಮಾನವಾದ ದೊಡ್ಡ ತಾರೆ ಎಂದರೆ ಡೆಲ್ಟಾ. ಇದು ಬರಿಗಣ್ಣಿಗೆ ಕಾಣುವುದಿಲ್ಲ ಇಂತಗ ಭಾರಿ ಭಾರಿ ನಕ್ಷತ್ರಗಳ ಭಂಡಾರವೇ ನಮ್ಮ ಆಕಾಶಗಂಗೆಯ ಒಡಲಲ್ಲಿಇವೆ.