ಇತ್ತೀಚಿನ ದಿನಗಳಲ್ಲಿ ಆತಂಕ ಹೆಚ್ಚಿಸಿದ ಆಕಾಶಯಾನ; ದುಬೈಗೆ ಹೋಗಬೇಕಿದ್ದ ವಿಮಾನ ಗೋಡೆಗೆ ಡಿಕ್ಕಿ ಹೊಡೆದು ತಿರುಗಿದ್ದು ಮುಂಬೈನತ್ತ!!

0
426

ದುಬೈಗೆ ಹೋಗಬೇಕಿದ್ದ ಏರ್’ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ವಿಮಾನ ನಿಲ್ದಾಣದ ಗೋಡೆಯನ್ನು ಸವರಿದೆ. ವಿಮಾನ ಸಂಚಾರ ನಿಯಂತ್ರಣ ಕೇಂದ್ರದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ತಕ್ಷಣ, ಮುಂಬೈನತ್ತ ಪ್ರಯಾಣಿಸಿರುವ ಪ್ರಸಂಗ ತಮಿಳುನಾಡು ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. 136 ಪ್ರಯಾಣಿಕರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Also read: ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್’ಗೆ ನಡೆದಿತ್ತಾ ಸಂಚು..?

ವಾಯು ಸಾರಿಗೆ ನಿಯಂತ್ರಣ ಕೊಠಡಿಯ ಅಧಿಕಾರಿಗಳೊಂದಿಗಿನ ಸಂಪರ್ಕ ಕಳೆದುಕೊಂಡಿದ್ದ ವಿಮಾನವು ಅನಂತರ ಸುಮಾರು ನಾಲ್ಕು ತಾಸುಗಳ ಬಳಿಕ ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಘಟನೆ ಸಂಬಂಧ ತನಿಖೆ ಆರಂಭವಾಗಿದ್ದು, ಮುಗಿಯುವವರೆಗೂ ಪೈಲಟ್‌ ಹಾಗೂ ಸಹ ಪೈಲಟ್‌ ಅನ್ನು ವಶಕ್ಕೆ ಪಡೆಯಲಾಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತೇ ಅಥವಾ ಪೈಲಟ್‌ ಎಸಗಿದ ತಪ್ಪಿನಿಂದಾಗಿ ಈ ಘಟನೆ ನಡೆಯಿತೇ ಎಂಬುದು ಗೊತ್ತಾಗಿಲ್ಲ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also read: ಕರ್ನಾಟಕ ಸರ್ಕಾರದ ಮೈತ್ರಿಯಲ್ಲಿ ಒಂದು ವಿಕೆಟ್ ಪತನ; ಮತೊಮ್ಮೆ ಶುರುವಾಯಿತೇ ಅಪರೇಷನ್ ಕಮಲ?

ಈ ಸಂಬಂಧ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರಿಗೆ ಏರ್‌ ಇಂಡಿಯಾ ಮಾಹಿತಿ ನೀಡಿದೆ. ಪ್ರಕರಣ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಮಾನಯಾನ ಸಂಸ್ಥೆ, ‘ಎಲ್ಲಾ ಪ್ರಯಾಣಿಕರು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ. ಅಲ್ಲಿಂದ ದುಬೈಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದಿದೆ.

Also read: ಗಂಗಾ ನದಿ ಸ್ವಚ್ಛತೆಗೆ ಶ್ರಮಿಸಿದ ಅಗರ್ವಾಲ್ ಇನ್ನಿಲ್ಲ..!

ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣ ಸಾರ್ವಜನಿಕರಲ್ಲಿ  ಆತಂಕ ಸೃಷ್ಟಿಸಿದೆ. ಕೆಲವೆಡೆ ಪೈಲೆಟ್’’ಗಳ ಎಡವಟ್ಟು ಇನ್ನು ಕೆಲ ಸಂದರ್ಭಗಳಲ್ಲಿ ತಾಂತ್ರಿಕ ಧೋಷಗಳಿಂತ ವಿಮಾನಗಳು ನಿಯಂತ್ರಣ ಕಳೆದುಕೊಳ್ಳುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ವಾಯು ಸಾರಿಗೆ ಮೇಲೆ ಪರಿಣಾಮ ಬೀಳಲಿದೆ.