ಬಡ ಗರ್ಭಿಣಿಯರಿಗೆ ಸೀಮಂತ ಭಾಗ್ಯ ಕಲ್ಪಿಸಿದ ಸ್ಪಂದನ ಫೌಂಡೇಶನ್

0
1853

44da6667-6499-4846-9b51-688fc0accaac

ಸಾಮಾಜಿಕ ಕಾರ್ಯಕರ್ತೆ ಮತ್ತು ಸ್ಪಂದನ ಫೌಂಡೇಶನ್ ನ ಅಧ್ಯಕ್ಷೆಯಾಗಿರುವ ಶ್ರೀಮತಿ ವೀಣಾ ರವರು ಇಬ್ಬರು ಬಡ ಗರ್ಭಿಣಿಯರಿಗೆ ಸೀಮಂತ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಾಜಾಜಿನಗರದ ನಾಲಕ್ಕನೆ ಬ್ಲಾಕ್ ನಲ್ಲಿರುವ ಸ್ಪಂದನ ಫೌಂಡೇಶನ್ ಕಚೇರಿಯಲ್ಲಿ ಪ್ರಕಾಶನಗರದ ಏನ್.ಸಾವಿತ್ರಿ ಮತ್ತು ಯಾಸ್ಮಿನ್ ಎಂಬುವವರಿಗೆ ಸೀಮಂತ ನೆರವೇರಿಸಿದರು. ಆಟೋ ಡ್ರೈವರ್ ಆಗಿದ್ದ ಸಾವಿತ್ರಿಯವರ ಪತಿ ಕೆಲ ತಿಂಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡಿದ್ದರು. ಇಷ್ಟೇ ಅಲ್ಲದೆ, ಈ ಇಬ್ಬರು ಗರ್ಭಿಣಿಯರಿಗೆ ಎಲ್ಲಾ  ರೀತಿಯಾದ ಔಶೋದೋಪಚಾರ, ತಪಾಸಣೆಯ ಜವಾಬ್ದಾರಿಯನ್ನು ಸ್ಪಂದನ ಫೌಂಡೇಶನ್ ಭರಿಸಿತ್ತು.

904da1fb-212c-43e7-8a33-4b9ef4fc0c70 4129aa78-4490-42c0-b9cd-113bce63d3f5

ವಕೀಲೆ ಕೂಡ ಆಗಿರುವ ವೀಣಾ ರವರು ಸಾಮಾಜಿಕ ಕಾರ್ಯಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಮತ್ತು ಶೋಷಣೆಗೊಳಗಾದ ಹೆಣ್ಣುಮಕ್ಕಳಿಗೆ ಆಸರೆಯಾಗಿ ತಮ್ಮ ಸ್ಪಂದನ ಫೌಂಡೇಶನ್ ಮೂಲಕ ಅನೇಕ ಶ್ಲಾಘನೀಯ ಕೆಲಸಗಳನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಶ್ರೀಮತಿ ವೀಣಾರವರು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ‘ಸಾಮಾನ್ಯ ಕನ್ನಡಿಗ’ ಸದಸ್ಯೆಯೂ ಹೌದು. ಭ್ರಷ್ಟಾಚಾರದ ವಿರುದ್ಧ, ಜಾಲತಾಣಗಳಲ್ಲಿ ಕನ್ನಡ ವಿರೋಧಿ ಪೋಸ್ಟ್ ಗಳನ್ನು ಹಾಕುವವರ ವಿರುದ್ಧ ‘ಸಾಮಾನ್ಯ ಕನ್ನಡಿಗ’ ರ ಜೊತೆಗೂಡಿ ಕೆಲಸ ಮಾಡಿದ್ದಾರೆ.

8a048112-3ae5-4742-b4ac-f0cee8c217ba

ನೊಂದ ಮಹಿಳೆಯರಿಗೆ, ಶೋಷಣೆಗೆ ತುತ್ತಾದ ಹೆಣ್ಣು ಮಕ್ಕಳಿಗೆ counselling ಮತ್ತು ಅವರಿಗೆ ಆರ್ಥಿಕ ಆಸರೆಯಾಗಿರುವುದಲ್ಲದೆ ಅವರ ಬದುಕನ್ನು ಕಟ್ಟಿ ಕೊಡುವುದರಲ್ಲಿ ತಮ್ಮ ಸಂಸ್ಥೆ ‘ಸ್ಪಂದನ ಫೌಂಡೇಶನ್’ ಮೂಲಕ ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ ವೀಣಾ ರವರು. ಸಾಮಾಜಿಕ ಸ್ವಾಸ್ಥ್ಯವನ್ನು ಸರಿಪಡಿಸಲು ಕೆಲಸ ಮಾಡುತ್ತಿರುವ ಇವರಿಗೆ ನಮ್ಮ ಬೆಂಬಲ ನೀಡೋಣ.