ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಪಾಸ್‌ಪೋರ್ಟ್‌ ಕಳವು

0
463

ಚೆನ್ನೈ: ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಪಾಸ್‌ಪೋರ್ಟ್‌ ಮತ್ತು ಇತರ ವಸ್ತುಗಳು ಅಮೆರಿಕದಲ್ಲಿ ಕಳುವಾಗಿವೆ. ಹೌಸ್ಟನ್‌ನಲ್ಲಿರುವ ಭಾರತದ ಕನ್ಸಲೇಟ್‌ ಅವರು ಬಾಲಸುಬ್ರಹ್ಮಣ್ಯಂ ಅವರ ಸಹಾಯಕ್ಕೆ ಧಾವಿಸಿ,  24 ಗಂಟೆಗಳ ಒಳಗೆ ಪಾಸ್‌ಪೋರ್ಟ್‌ ನಕಲು ಪ್ರತಿಗಳನ್ನು ಒದಗಿಸಿದ್ದಾರೆ.

 

ಈ ವಿಷಯವನ್ನು ಫೇಸ್‌ಬುಕ್‌ ಮೂಲಕ ಬಹಿರಂಗಪಡಿಸಿರುವ ಬಾಲಸುಬ್ರಹ್ಮಣ್ಯಂ ಅವರು, ‘ಪಾಸ್‌ಪೋರ್ಟ್‌, ಕ್ರೆಡಿಟ್‌ಕಾರ್ಡ್‌, ನಗದು ಹಾಗೂ ಗೀತೆಗಳ ಪ್ರತಿಗಳು ಇದ್ದ ನನ್ನ ಚೀಲ ಕಳುವಾಗಿವೆ’ ಎಂದು ತಿಳಿಸಿದ್ದಾರೆ.

 

‘ತ್ವರಿತಗತಿಯಲ್ಲಿ ಪಾಸ್‌ಪೋರ್ಟ್‌ನ ನಕಲು ದಾಖಲೆಗಳನ್ನು ಒದಗಿಸಿದ ಕನ್ಸಲ್‌ ಜನರಲ್‌ ಅವರಿಗೆ ಧನ್ಯವಾದಗಳು’ ಎಂದು ಅವರು ತಿಳಿಸಿದ್ದಾರೆ.

 

ಬಹುಭಾಷಾ ಗಾಯಕರಾಗಿರುವ ಅವರು, ‘ಎಸ್‌ಪಿಬಿ50’ ಸರಣಿ ಕಾರ್ಯಕ್ರಮಕ್ಕಾಗಿ ಸಿಯಾಟಲ್, ಲಾಸ್‌ ಏಂಜಲೀಸ್‌, ಅಟ್ಲಾಂಟಾಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.