ಮಂತ್ರಾಲಯ ಕ್ಷೇತ್ರದ ಮಹಿಮೆ ತಿಳಿದುಕೊಂಡು, ರಾಯರ ಅನುಗ್ರಹಕ್ಕೆ ಪಾತ್ರರಾಗೋಣ!!

0
2165

1. ಮಂಚಾಲೆ ಎಂತಲೂ ಕರೆಯಲ್ಪಡುವ ಮಂತ್ರಾಲಯವು ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ತುಂಗಾ ನದಿ ತಟದ ಮೇಲೆ ನೆಲೆಸಿದೆ. ಗುರು ರಾಘವೇಂದ್ರರ ಬೃಂದಾವನವಿರುವ ಪುಣ್ಯ ಕ್ಷೇತ್ರ.

2. ಗುರುರಾಯರ ಪಾದಸೇವಕನಾದ ದಿವಾನ್ ವೆಂಕಣ್ಣನಿಂದ ರಾಯರ ಆದೇಶದಂತೆ ನಿರ್ವಣಗೊಂಡ ವೃಂದಾವನಾಂತರ್ಗತರಾಗಿ, ತುಂಗಭದ್ರಾ ನದಿತೀರದಲ್ಲಿ ಕಂಗೊಳಿಸುವ ಮಂತ್ರಾಲಯ ಮೂಲ ವೃಂದಾವನದಲ್ಲಿ ವಿರಾಜಮಾನರಾಗಿದ್ದಾರೆ.

3. ಶ್ರೀ ರಾಮಚಂದ್ರಮೂರ್ತಿ ಪ್ರಸನ್ನಚಿತ್ತನಾಗಿ ಏಳು ಮುಹೂರ್ತಗಳಷ್ಟು ಕಾಲ ಈ ಇಂದ್ರನೀಲಮಣಿಯಂತೆ ಶೋಭಿಸುವ ಬಂಡೆಯ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವವನಂತೆ ತನ್ನ ಪಾದಸ್ಪರ್ಶಪೂರ್ವಕ ವಿರಾಜಿಸಿದ್ದ. ಹಾಗಾಗಿ, ಈ ಬಂಡೆ ಶ್ರೀರಾಮನ ಪೂರ್ಣ ಸನ್ನಿಧಾನದಿಂದ ಇಂದಿಗೂ ಪರಮಪವಿತ್ರವಾಗಿದೆ. ಇದರಿಂದ ಶ್ರೀರಾಮನ ಚಾರಣಸೇವಕರಲ್ಲಿ ಅತ್ಯಲ್ಪನಾದ ನಾನು ಸಶರೀರವಾಗಿ ನೆಲೆಸುವ ವೃಂದಾವನ ನಿರ್ವಣವಾಗಿ 700 ವರ್ಷಗಳು ನನ್ನ ನಿತ್ಯ ಸನ್ನಿಧಾನದಿಂದ ಭಕ್ತ ಜನರಿಗೆ ಆರಾಧ್ಯವಾಗುವುದು ಶ್ರೀ ಹರಿವಾಯುಗಳ ಚಿತ್ತದಲ್ಲಿದೆ. ಹೀಗಾಗಿ ಈ ಶಿಲೆಯಲ್ಲೇ ನಾನು ನೆಲೆಸುವ ಬೃಂದಾವನ ನಿರ್ವಣವಾಗಲಿ’ ಎಂದು ಸಾಕ್ಷಾತ್ ರಾಯರೇ ಆದೇಶಿಸಿದ್ದರು.

4. ಈಗಾಗಲೆ 339 ವರ್ಷಗಳು ಗತಿಸಿದ್ದು ಇನ್ನೂ ಮುಂದಿನ 361 ವರ್ಷಗಳವರೆಗೆ ರಾಯರು ಜಾಗೃತರಾಗಿದ್ದು ಭಕ್ತರನ್ನು ಹರಸುತ್ತಾರೆ ಎಂಬ ವಿಶ್ವಾಸ ಅವರ ಅನುಯಾಯಿಗಳಲ್ಲಿದೆ.

5. ಮಂತ್ರಾಲಯ ಹೊರತು ಪಡಿಸಿದರೆ ಶ್ರೀರಾಯರ ಏಕಶಿಲಾ ಬೃಂದಾವನ ಇರುವುದು ಬಿಚ್ಚಾಲಿಯಲ್ಲಿ ಮಾತ್ರ. ಅವರ ಅಂತರಂಗ ಶಿಷ್ಯರಾಗಿದ್ದ ಅಪ್ಪಣ್ಣಚಾರ್ಯರ ನೆಲೆವೀಡು ಇದು.

6. ತ್ರೇತಾಯುಗದಲ್ಲಿ ಸೀತಾನ್ವೇಷಣೆಯ ನೆಪದಿಂದ ಸಂಚಾರ ಮಾಡುತ್ತ ಇಲ್ಲಿಗೆ ಬಂದ ಶ್ರೀ ರಾಮ-ಲಕ್ಷ್ಮಣರು ಬಂದು ಈ ನೆಲವನ್ನು ಪುನೀತಗೊಳಿಸಿದ್ದರು.

7. ತುಂಗಭದ್ರಾ ನದಿ ಎಡದಂಡೆಯಲ್ಲಿ ಪಂಚಮುಖಿ ಆಂಜನೇಯ ದೇವಸ್ಥಾನವಿದೆ. ಇಲ್ಲಿನ ಹೆಬ್ಬಂಡೆಗಳ ನಡುವೆ ಕುಳಿತು ಶ್ರೀ ರಾಘವೇಂದ್ರಸ್ವಾಮಿ, ಅಖಂಡ 12 ವರ್ಷ ತಪಸ್ಸು ಮಾಡಿದ್ದರು. ರಾಯರ ತಪಸ್ಸಿಗೆ ಮೆಚ್ಚಿ ಪಂಚಮುಖಿ ಆಂಜನೇಯ, ಕೊಲ್ಲಾಪುರ ಮಹಾಲಕ್ಷ್ಮೀ, ತಿರುಪತಿ ವೆಂಕಟರಮಣ ಸ್ವಾಮಿ ದರ್ಶನ ನೀಡಿದ ಪುಣ್ಯತಾಣವಿದು.

8. ಈ ಬೃಂದಾವನದಲ್ಲೇ ಉಭಯ ವಂಶಾಬ್ಧಿ ಚಂದ್ರಮರೂ, ಶ್ರೀ ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರೂ, ಶ್ರೀ ವಿಜಯರಾಯರು-ಶ್ರೀ ಗೋಪಾಲದಾಸರ ಕುಲ ಗುರುಗಳೂ, ಪ್ರಾತಃ ಸ್ಮರಣೀಯ ಪರಮಪೂಜ್ಯರಾದ ಶ್ರೀ ವಾದೀಂದ್ರತೀರ್ಥರು ವಿರಾಜಮಾನರಾಗಿದ್ದಾರೆ.

9. ತಿರುಪತಿ ವೆಂಕಟೇಶ್ವರ ಸನ್ನಿದ್ಧಿಯ ಲಾಡು ಪಡೆದಿರುವ ಪ್ರಸಿದ್ಧಿಯಂತೆಯೇ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪರಿಮಳ ಪ್ರಸಾದವೂ ಭಕ್ತವಲಯದಲ್ಲಿ ಖ್ಯಾತಿ ಪಡೆದಿದೆ.