ಶ್ರೀವತ್ಸ ಕೃಷ್ಣರವರೆ ನಿಮ್ಮ ಐ.ಎ.ಎಸ್. ಹುದ್ದೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕೆ ಇರುವುದು, ದರ್ಪ ತೋರುವುದಕ್ಕಲ್ಲ!!!

0
524

ಗಾಳಿ.. ಬೆಳಕು.. ನೀರು.. ವಾಸಕ್ಕೆ ಮನೆ.. ಸಹಾಯ.. ಕೆಲಸ.. ಹಣ.. ಎಲ್ಲವೂ ಈ ನೆಲದ್ದೇ ಬೇಕು.. ಆದರೆಕನ್ನಡ ಮಾತ್ರ ಕೇಳಬೇಡಿ.. ನನಗೆ ಕನ್ನಡ ಬರುವುದಿಲ್ಲ.. ಹಿಂದಿ, ಇಂಗ್ಲಿಂಷ್‌ನಲ್ಲಿ ಮಾತನಾಡಿ ಎಂದುಹೇಳುವ ಅಧೀಕಾರಿಗಳಿಗೆ ಸರ್ಕಾರ ಶಾಕ್ ನೀಡಿದೆ.

ಬೇರೆ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಕೆಲಸದ ನಿಮಿತ್ತವಾಗಿ ಬರುವ ಐಎಎಸ್ ಅಧಿಕಾರಿಗಳು ಖಡ್ಡಾಯವಾಗಿ ಕನ್ನಡದಲ್ಲೇ ಕಾರ್ಯವನ್ನು ಮಾಡಬೇಕು. ಅಲ್ಲದೆ ವ್ಯವಹರಿಸುವಾಗಲೂಕನ್ನಡದಲ್ಲೇ ವ್ಯವಹರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಶುಕ್ರವಾರ ಖಡಕ್ ಆಗಿ ತಿಳಿಸಿದ್ದಾರೆ.

ಶ್ರೀವತ್ಸ ಕೃಷ್ಣ ಅವರು ಮಾಡಿದ್ದು ತಪ್ಪು. ಇಂಗ್ಲೀಷ್ ನಲ್ಲಿ  ಕಡತ ತನ್ನಿ ಎಂದು ಆದೇಶಿಸಿದ್ದು ತಪ್ಪು.ಈ ಕುರಿತು  ಮಾಹಿತಿ ಪಡೆಯುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

ದೆಹಲಿ ಮೂಲದ ಶ್ರೀವತ್ಸ ಕೃಷ್ಣ ಹತ್ತು ವರ್ಷದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರು ಐಎಎಸ್ ಅಧಿಕಾರಿಯಾಗಿದ್ದು, ಸಾರ್ವಜನಿಕ ಉದ್ಯಮಿಗಳ ಕಾರ್ಯದರ್ಶಿಯಾಗಿ ಕೆಲಸನಿರ್ವಹಿಸುತ್ತಿದ್ದಾರೆ. ಇವರು ಕಚೇರಿ ಕಡತಗಳನ್ನು ಇಂಗ್ಲಿಷ್‌ನಲ್ಲಿ ನೀಡುವಂತೆ ತಮ್ಮ ಕಿರಿಯಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಸದ್ಯ ದೊಡ್ಡ ಸುದ್ದಿಯನ್ನು ಮಾಡಿದೆ. ಇದನ್ನು ಕನ್ನಡಅಭಿವೃದ್ಧಿ ಪ್ರಾಧಿಕಾರದ ಖಂಡಿಸಿದ್ದು, ಶ್ರೀವತ್ಸ್ ಅವರಿಗೆ ನೋಟಿಸ್ ನೀಡಿದೆ.

ಈ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ಕಾರಣ ಕೇಳಿ ನೋಟಿಸ್ ನೀಡಿದ್ದೀವಿ. ಇಂಥ ಅಧಿಕಾರಿಗಳಿಗೆದಂಡನೆ ಆಗದ ಹೊರತು ಬುದ್ಧಿ ಬರುವುದಿಲ್ಲ. ಅವರು ತಿದ್ದುಕೊಳ್ಳದಿದ್ದರೆ ಕ್ರಮ ತೆಗೆದುಕೊಳ್ಳುವಂತೆಸರಕಾರಕ್ಕೆ ಶಿಫಾರಸು ಮಾಡ್ತೀವಿ ಎಂದು ತಿಳಿಸಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯ ಕನ್ನಡಬಾರದ ಅಧಿಕಾರಿಗಳ ವಿರುದ್ಧ ಛಾಟಿ ಬೀಸಿದ್ದಾರೆ.