ಸ್ಟಾಫ್​ ಸೆಲೆಕ್ಷನ್​ ಕಮಿಷನ್ ನಲ್ಲಿ ಖಾಲಿ ಇರುವ ವಿವಿಧ 10 ಸಾವಿರ ಹುದ್ದೆಗಳಿಗೆ​ ನೇಮಕಾತಿ ಪ್ರಕಟಣೆ.!

0
521

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸಿಬ್ಬಂದಿ ನೇಮಕ ಆಯೋಗ (ಸ್ಟಾಫ್​ ಸೆಲೆಕ್ಷನ್​ ಕಮಿಷನ್) ಖಾಲಿ ಇರುವ ವಿವಿಧ 10 ಸಾವಿರ ಹುದ್ದೆಗಳಿಗೆ​ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ಮೂಲಕ ನವೆಂಬರ್ 25, 2019ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..
ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: ಸ್ಟಾಫ್​ ಸೆಲೆಕ್ಷನ್​ ಕಮಿಷನ್ ವಿವಿದ ಹುದ್ದೆಗಳು

ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಿಂದ ಪದವಿ ಪಡೆದಿರಬೇಕು. 1-1-2020ರೊಳಗೆ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಖಾಲಿ ಇರುವ ಹುದ್ದೆಗಳು:

ಅಸಿಸ್ಟೆಂಟ್​ ಆಡಿಟ್​ ಆಫೀಸರ್ ಇನ್​ ಇಂಡಿಯಾ ಆಡಿಟ್​ & ಅಕೌಂಟ್

ಅಸಿಸ್ಟೆಂಟ್​ ಅಕೌಂಟ್​​ ಆಫೀಸರ್ ಇನ್​ ಇಂಡಿಯಾ ಆಡಿಟ್​ & ಅಕೌಂಟ್

ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​ ಇನ್​​ ಸೆಂಟ್ರಲ್​ ಸೆಕ್ರೇಟೇರಿಸ್ಟ್​

ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​ -ಗುಪ್ತಚರ ಇಲಾಖೆ

ಅಸಿಸ್ಟೆಂಟ್​ ಸೆಕ್ಷನ್​ ಆಫೀಸರ್​ -ರೈಲ್ವೆ ಸಚಿವಾಲಯ

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಇನ್ನು ವಯೋಮಿತಿ ವಿನಾಯಿತಿಯಲ್ಲಿ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ: ಅರ್ಜಿ ಶುಲ್ಕ 100 ರೂ. ಇರುತ್ತದೆ. ಅರ್ಹ ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನರು, ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಆನ್​ಲೈ ನ್​ ಮೂಲಕ ಅರ್ಜಿ ಸಲ್ಲಿಸಬೇಕು. ಎಸ್​ಎಸ್​​​ಸಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಹಾಕಬೇಕು. ಆದರೆ ಆಫ್​ಲೈನ್​ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25 2019

ಹೆಚ್ಚಿನ ಮಾಹಿತಿಗಾಗಿ: https://ssc.nic.in ಕ್ಲಿಕ್ ಮಾಡಿ.