ಮತ್ತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ; ಹೇಗಿದೆ ನೋಡಿ ಹೊಸ ಪ್ರಶ್ನೆಪತ್ರಿಕೆ ಸ್ವರೂಪ..

0
821

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಿಸಲಿದೆ. ವಿದ್ಯಾರ್ಥಿಗಳು ಕಲಿಕಾ ಗುಣಮಟ್ಟವನ್ನು ವೃದ್ಧಿಸಲು ಕಂಠಪಾಠ ಮಾಡುವ ಪದ್ಧತಿಯನ್ನು ತಪ್ಪಿಸಿ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸಲು ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆ ಮಾಡಲು ಮುಂದಾಗಿದ್ದು. ಕೌಶಲ್ಯ ಹಾಗೂ ವಿವರಣಾತ್ಮಕ ಹೊಂದಿರುವ ದೀರ್ಘಾವಧಿ ಪ್ರಶ್ನೆಗಳಿಗೆ ಆದ್ಯತೆ ನೀಡಿ, ವಿಷಯಾಧಾರಿತ ಅಂಕಗಳ ಹಂಚಿಕೆಗೆ ಒತ್ತು ನೀಡಲಾಗಿದೆ.

Also read: ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

ಹೌದು ಮುಂದಿನ ಮಾರ್ಚ್‌ಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೊಸ ರೀತಿಯ ಪ್ರಶ್ನೆಪತ್ರಿಕೆಗಳು ಸಿದ್ಧವಾಗಲಿವೆ. ಇದಕ್ಕೆ ತಕ್ಕನಾಗಿಯೇ ಶಾಲಾ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಬೇಕಿದೆ. ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಸಂಖ್ಯೆಯನ್ನು 40ರಿಂದ 38ಕ್ಕೆ ಇಳಿಕೆ ಮಾಡಲಾಗಿದೆ. ಘಟಕವಾರು ಅಂಕಗಳ ಹಂಚಿಕೆ ಪದ್ಧತಿಯನ್ನು ಕೈಬಿಟ್ಟು, ಮುಖ್ಯಾಂಶ ಅಂಕಗಳ ಹಂಚಿಕೆಗೆ ಇಲಾಖೆ ಮುಂದಾಗಿದೆ. ಏಕೆಂದರೆ ”ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ವೃದ್ಧಿಸುವುದು, ಕಂಠಪಾಠ ಪದ್ಧತಿಯನ್ನು ತಪ್ಪಿಸಿದೆ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗುತ್ತಿದೆ,” ಎಂದು ಮಂಡಳಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Also read: ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು 10 ವರ್ಷದಿಂದ ಬಳಸದಿದ್ದರೆ ಏನಾಗುತ್ತೆ? ಇಲ್ಲಿದೆ ನೋಡಿ ಮಾಹಿತಿ..

ಹೇಗಿದೆ ಹೊಸ ಪ್ರಶ್ನೆ ಪ್ರತಿಕೆಯ ಸ್ವರೂಪ?

1. ಬಹು ಆಯ್ಕೆಯ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ
2. ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
3. ಎರಡು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 16 ರಿಂದ 8ಕ್ಕೆ ಇಳಿಸಲಾಗಿದೆ
4. ಮೂರು ಅಂಕದ ಪ್ರಶ್ನೆಗಳ ಸಂಖ್ಯೆಯನ್ನಯ 6 ರಿಂದ 9ಕ್ಕೆ ಹೆಚ್ಚು ಮಾಡಲಾಗಿದೆ
5. ಹೊಸದಾಗಿ 5 ಅಂಕದ ಪ್ರಶ್ನೆ ಒಂದನ್ನು ಸೇರಿಸಲಾಗಿದೆ
6. ಕಠಿಣತೆಯ ಮಟ್ಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Also read: ಸ್ನೇಹಿತರ ಜೊತೆಗೆ ಟ್ರಿಪ್ ಹೋಗುವ ಯುವಕ-ಯುವತಿಯರೇ ಹುಷಾರ್; ಪ್ರವಾಸಿ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮಾಡಿದರೆ ಏನಾಗುತ್ತೆ ಈ ವಿಡಿಯೋ ನೋಡಿ!!

ಹೊಸ ಪದ್ದತಿಯ ಪ್ರಯೋಜನ ಏನು?

ಪ್ರಶ್ನೆಪತ್ರಿಕೆಯಲ್ಲಿ 40 ಪ್ರಶ್ನೆಗಳ ಬದಲಾಗಿ 38 ಪ್ರಶ್ನೆಗಳಿರುತ್ತದೆಯೇ ಹೊರತು ಹೆಚ್ಚಿನ ಬದಲಾವಣೆ ಏನೂ ಇರುವುದಿಲ್ಲ. ಕಳೆದ ವರ್ಷ ನೀಲನಕಾಶೆ ನೀಡಿರುವುದಿಲ್ಲ. ಆದರೆ ಘಟಕವಾರು ಅಂಕಗಳ ಹಂಚಿಕೆ ನೀಡಲಾಗಿತ್ತು. ಇದರಿಂದ ಶಿಕ್ಷಕರು ಕಡಿಮೆ ಅಂಕಗಳ ಹಂಚಿಕೆ ಅಂದರೆ 1 ಅಥವಾ 2 ಅಂಕ ಇರುವಂತಹ ಪಾಠಗಳನ್ನು ಭೋದಿಸದೇ ಇರುವಂತಹ ಸಂದರ್ಭಗಳು ಅಧಿಕವಾಗಿರುತ್ತದೆ. ಹಾಗಾಗಿ ಈ ವರ್ಷದಿಂದ ವಿಷಯಾಧಾರಿತ(ಥೀಮ್‍ವೈಸ್) ಅಂಕಗಳ ಹಂಚಿಕೆಯನ್ನು ನಿಗದಿ ಮಾಡಲಾಗಿದ್ದು ಈ ಕ್ರಮ ಹೆಚ್ಚು ವೈಜ್ಞಾನಿಕವಾಗಿದ್ದು ಹಾಗೂ ತಾರ್ಕಿಕವಾದದ್ದು ಆಗಿದೆ. ಇದರಿಂದಾಗಿ ಶಿಕ್ಷಕರು ಎಲ್ಲಾ ಅಧ್ಯಾಯಗಳನ್ನು ಬೋಧನೆ ಮಾಡುವುದು ಕಡ್ಡಾಯವಾಗಿರುತ್ತದೆ.

Also read: ದೇಶಾದ್ಯಂತ ಒಂದೇ ಮಾದರಿಯ ಡ್ರೈವಿಂಗ್ ಲೈಸೆನ್ಸ್‌ ಜಾರಿ; ಒನ್ ಎಲೆಕ್ಷನ್, ಒನ್ ರೇಷನ್, ಒನ್ ಡ್ರೈವಿಂಗ್ ಲೈಸೆನ್ಸ್‌, ಕೇಂದ್ರ ಸರ್ಕಾರದ ಚಿಂತನೆ!!

ಪ್ರಸ್ತುತ ಪರೀಕ್ಷಾ ಪದ್ಧತಿಯನ್ನು ಸಾಧಾರಣವಾಗಿ ಕೇಳಿ ಬರುವ ಸಾಮೂಹಿಕ ನಕಲನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಮೂಡಿಸಬಹುದು. ದೀರ್ಘ ಉತ್ತರದ ಪ್ರಶ್ನೆಗಳಿಂದ ಮಕ್ಕಳಲ್ಲಿ ಬರವಣಿಗೆಯ ಕೌಶಲ್ಯ ಮೂಡಿಸಬಹುದು. ಮಕ್ಕಳಲ್ಲಿ ಅಭಿವ್ಯಕ್ತಿ ಕೌಶಲ್ಯ ಬೆಳೆಸುತ್ತದೆ. ಶಿಕ್ಷಕರಲ್ಲಿ ಬೋಧನಾ ಸಾಮಥ್ರ್ಯ ಹೆಚ್ಚಾಗುತ್ತದೆ. ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ನಡೆಸಿರುವ ಅಜೀಂ ಪ್ರೇಮ್‌ಜೀ ಫೌಂಡೇಶನ್‌ ಪರಿಣಿತರ ತಂಡ, ಪ್ರಶ್ನೆ ಪತ್ರಿಕೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಸಲಹೆ ನೀಡಿತ್ತು. ಅದರಂತೆ ಬದಲಾವಣೆ ಮಾಡಲಾಗಿದೆ.