‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ’ (ಎಸ್‌ಬಿಐ) ಉದ್ಯೋಗ ಅವಕಾಶ

0
1639

ಖಾಲಿ ಹುದ್ದೆಗಳ ಸಂಖ್ಯೆ: 2313

ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್‌ 6, 2017

ಪೂರ್ವಭಾವಿ ಪರೀಕ್ಷೆ : ಏಪ್ರಿಲ್‌ 29, 30 ಮತ್ತು ಮೇ 6, 7

ಮುಖ್ಯ ಪರೀಕ್ಷೆ: ಜೂನ್‌ 4, 2017

ಗುಂಪು ಚರ್ಚೆ ಮತ್ತು ಸಂದರ್ಶನ: 2017ರ ಜುಲೈ 10ರ ನಂತರ

ಅಂತಿಮ ಫಲಿತಾಂಶ ಪ್ರಕಟ: 2017ರ ಆಗಸ್ಟ್‌ 5

ವಿವರಗಳಿಗೆ: www.sbi.co.in

ದೇಶದ ಅತ್ಯಂತ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರುವ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ’ (ಎಸ್‌ಬಿಐ) ಪ್ರೊಬೆಷನರಿ ಆಫೀಸರ್‌ಗಳ ಭರ್ಜರಿ ನೇಮಕಕ್ಕೆ ಚಾಲನೆ ನೀಡಿದೆ. ಈ ವರ್ಷ 313 ಬ್ಯಾಕ್‌ಲಾಗ್‌ ಹುದ್ದೆಗಳೂ ಸೇರಿದಂತೆ ಒಟ್ಟು 2313 ಪ್ರೊಬೆಷನರಿ ಆಫೀಸರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಒಟ್ಟು ಹುದ್ದೆಗಳ ಪೈಕಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ 347, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 350 ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 606 ಹುದ್ದೆಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 7ರಿಂದ ಮಾರ್ಚ್‌ 6ರ ತನಕ ಅವಕಾಶ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಮುಂಬರುವ ಏಪ್ರಿಲ್‌ ಮತ್ತು ಮೇನಲ್ಲಿ ಪ್ರಿಲಿಮ್ಸ್‌ ನಡೆಯಲಿದ್ದು, ಜೂನ್‌ನಲ್ಲಿ ಮೇನ್‌ ಎಗ್ಸಾಮ್‌ ನಡೆಯಲಿದೆ ಎಂದು ಎಸ್‌ಬಿಐಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಹತೆಗಳೇನು?

ಯಾವುದೇ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಂತೆಯೇ ಅಂತಿಮ ವರ್ಷದ /ಸೆಮಿಸ್ಟರ್‌ ಪದವಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 21ರಿಂದ 30 ವರ್ಷ. ಅಂತೆಯೇ ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂ. ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.

ನೇಮಕ ಹೇಗೆ?

ಮೊದಲ ಹಂತದಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ರಾಜ್ಯದಲ್ಲಿ 9 ಪರೀಕ್ಷಾ ಕೇಂದ್ರ. ರಾಜ್ಯದಲ್ಲಿ ಬೆಳಗಾವಿ, ಬೆಂಗಳೂರು, ಬೀದರ್‌, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಈ ಪರೀಕ್ಷೆಯಲ್ಲಿ ಬ್ಯಾಂಕ್‌ ನಿಗದಿಪಡಿಸಿದಷ್ಟು ಅಂಕ ಪಡೆದು ತೇರ್ಗಡೆಯಾದವರು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ.
ಈ ಎರಡೂ ಮಾದರಿಯ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿದ್ದು, ವಸ್ತುನಿಷ್ಠ ಮತ್ತು ವಿವರಣಾತ್ಮಕ ಮಾದರಿಯ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದಲ್ಲಿ ನಡೆಯಲಿರುವ ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿ ನೇಮಕಕ್ಕೆ ಅರ್ಹತೆ ಪಡೆಯಬೇಕಾಗುತ್ತದೆ.

ಪ್ರೊಬೆಷನರಿ ಆಫೀಸರ್‌ ಆಗಿ ಆಯ್ಕೆಯಾದವರು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಎರಡು ವರ್ಷದ ತರಬೇತಿಯ ನಂತರ ಅಭ್ಯರ್ಥಿಗಳನ್ನು ಆಫೀಸರ್‌ಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.