ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಯಾಣದ ಪೌರಾಣಿಕ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳಿ?

0
1387

Kannada News | Karnataka Temple History

ಸ್ಪಟಿಕಸದೃಶವಾದ೦ತಹ ಸುಣ್ಣದಕಲ್ಲಿನ ಬ೦ಡೆಗಳಿ೦ದ ಯಾಣದ ಗುಹೆಗಳು ನಿರ್ಮಾಣಗೊ೦ಡಿವೆ. ಯಾಣದ ಬ೦ಡೆಗಳಿ೦ದೊಡಗೂಡಿರುವ ಶಿಖರವಾದ ಭೈರವೇಶ್ವರ ಶಿಖರವು 390 ಅಡಿಗಳಷ್ಟು ಎತ್ತರದಲ್ಲಿದ್ದು, ಮೋಹಿನಿ ಶಿಖರವು 300 ಅಡಿಗಳಷ್ಟು ಎತ್ತರದಲ್ಲಿದೆ.

ಪೌರಾಣಿಕ ಹಿನ್ನಲೆ

ಪ್ರಾಚೀನ ಸ್ಕಂದಪುರಾಣದ ಪೌರಾಣಿಕ ಕಥೆಯೊ೦ದರ ಪ್ರಕಾರ, ಭಸ್ಮಾಸುರನಿಗೆ ಈಶ್ವರನಿಂದ ಒಂದು ವರ ಪ್ರಾಪ್ತಿಯಾಗಿತ್ತು. ಯಾರ ತಲೆಯ ಮೇಲೆ ಕೈ ಇಟ್ಟರೂ ತಕ್ಷಣವೇ ಅವರು ಸುಟ್ಟು ಬೂದಿಯಾಗುತ್ತಿದ್ದರು. ಈ ವರದಿಂದಾಗಿ ಭಸ್ಮಾಸುರನಿಗೆ ಅಹಂಕಾರ ಉಂಟಾಯಿತು. ಸಿಕ್ಕ ಸಿಕ್ಕವರ ತಲೆಯ ಮೇಲೆ ಕೈಯಿಡುವುದು, ಅವರೆಲ್ಲಾ ಸುಟ್ಟು ಬೂದಿಯಾಗುವುದು ಕಂಡು ಭಸ್ಮಾಸುರ ತನ್ನ ಸಮಾನ ಯಾರೂ ಇಲ್ಲವೆಂದು ಜಂಭದಿಂದ ಮೆರೆಯುತ್ತಿದ್ದ. ಒಮ್ಮೆ ಈ ವರವನ್ನು ಕೊಟ್ಟ ಶಿವನನ್ನೇ ಧ್ವಂಸ ಮಾಡಬೇಕೆಂದು ಯೋಚಿಸಿ ಶಿವನನ್ನು ಅಟ್ಟಿಸಿಕೊಂಡು ಓಡುತ್ತಾ ಅವನ ಶಿರದ ಮೇಲೆ ಕೈಯಿಡಲು ಮುಂದಾದ. ಈ ಕೃತ್ಯದಿಂದ ಶಿವನಿಗೆ ಭಯವುಂಟಾಯಿತು. ತಕ್ಷಣವೇ ಶ್ರೀಮನ್ನಾರಾಯಣನ ಬಳಿಗೆ ಓಡಿ ತನಗೆ ಬಂದಿರುವ ವಿಪತ್ತನ್ನು ಹೇಳಿಕೊಂಡು ಅವನ ಸಹಾಯ ಬೇಡಿದ.

source: templepurohit.com

ಆಗ ನಾರಾಯಣ ಕಾರ್ಯೋನ್ಮುಖನಾದ. ಮೋಹಿನಿ ಎಂಬ ಸ್ತ್ರೀ ಇವನ ಮುಂದೆ ಪ್ರತ್ಯಕ್ಷಳಾದಳು. ಭಸ್ಮಾಸುರನು ಮೋಹಿನಿಯನ್ನು ಕಂಡು ಅವಳಲ್ಲಿ ಅನುರಕ್ತನಾದನು. ತನಗೆ ನೃತ್ಯ ಮಾಡಲು ಬರುತ್ತದೆಯೆಂದೂ, ಅವನೂ ತನ್ನಂತೆ ನೃತ್ಯ ಮಾಡಲು ಕಲಿಯ ಬೇಕೆಂದೂ ಪ್ರೇರೇಪಿಸಿದಳು.

source: ritsin.com

ಮೋಹಿನಿಯ ಮೋಹಪಾಶಕ್ಕೆ ಸಿಲುಕಿದ್ದ ಭಸ್ಮಾಸುರನು ಹಿ೦ದೆಮು೦ದೆ ನೋಡದೆ ಒಪ್ಪಿಕೊಳ್ಳುತ್ತಾನೆ. ಆಗ ಮೋಹಿನಿಯು ನರ್ತಿಸಲಾರ೦ಭಿಸುತ್ತಾಳೆ. ಭಸ್ಮಾಸುರನೂ ಕೂಡ ಮೋಹಿನಿಯನ್ನೇ ಅನುಸರಿಸುತ್ತಾ ಆಕೆಯ೦ತೆಯೇ ನರ್ತಿಸಲಾರ೦ಭಿಸುತ್ತಾನೆ.

source: sthitapragnya.wordpress.com

ನರ್ತನದ ಒ೦ದು ಹ೦ತದಲ್ಲಿ ಮೋಹಿನಿಯು ತನ್ನ ಕೈಯ್ಯನ್ನು ತನ್ನ ತಲೆಯ ಮೇಲಿರಿಸಿಕೊಳ್ಳುತ್ತಾಳೆ. ಮೈಮರೆತಿದ್ದ ಭಸ್ಮಾಸುರನೂ ಸಹ ಒಡನೆಯೇ ಮೋಹಿನಿಯನ್ನನುಸರಿಸಿ, ತಾನೂ ಕೂಡ ತನ್ನ ಕೈಯ್ಯನ್ನು ತನ್ನದೇ ತಲೆಯ ಮೇಲಿರಿಸಿಕೊಳ್ಳುತ್ತಾನೆ. ಶಿವನ ವರಪ್ರಸಾದದನ್ವಯ ಕೂಡಲೇ ಭಸ್ಮಾಸುರನು ಸ್ವಯ೦ಸ್ಪರ್ಶದಿ೦ದ ಸುಟ್ಟುಬೂದಿಯಾಗುತ್ತಾನೆ. ಈ ರೀತಿ ಶ್ರೀಮನ್ನಾರಾಯಣನು ಮೋಹಿನಿ ರೂಪದಿಂದ ರಾಕ್ಷಸ ರೂಪಿ ಭಸ್ಮಾಸುರನನ್ನು ಸಂಹರಿಸುತ್ತಾನೆ. ಹಾಗೆ ಮೃತಪಟ್ಟ ಭಸ್ಮಾಸುರನ ಬೂದಿಯಿ೦ದಲೇ ಇಲ್ಲಿನ ಬ೦ಡೆಗಳು ರೂಪುಗೊ೦ಡವು ಎ೦ಬ ನ೦ಬಿಕೆ ಇದೆ.

source: kabirgod.wordpress.com

watch:

ಇಲ್ಲಿ ಎರಡು ಶಿಖರಗಳಿವಿ. ಒಂದನ್ನು ಭೈರವೇಶ್ವರ ಶಿಖರ ವೆಂದೂ ಇನ್ನೊಂದನ್ನು ಮೋಹಿನಿ ಶಿಖರವೆಂತಲೂ ಜನ ಗುರುತಿಸಿದ್ದಾರೆ. ಭೈರವೇಶ್ವರ ಶಿಖರದ ಒಳಗೆ ಗುಹೆಗಳಿವೆ, ನೋಡಲು ಭೀತಿ ಹುಟ್ಟಿಸುವಷ್ಟು ದೊಡ್ಡದಾದಗುಹೆಗಳವು! ಇಂತಹ ಒಂದು ಮುಖ್ಯ ಗುಹೆಯಲ್ಲಿ ಭೈರವೇಶ್ವರ ದೇವರು ನೆಲೆಸಿದ್ದಾನೆ. ಈ ದೇವಸ್ಥಾನದಲ್ಲಿ ಶಿವ-ಮೋಹಿನಿ ಅಮ್ಮನವರಿಗೆ ಪೂಜೆ ಪ್ರತಿದಿನ ಸಲ್ಲುತ್ತದೆ. ಪ್ರತೀವರ್ಷ ಮಹಾಶಿವರಾತ್ರಿಯಂದು ಈ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಇನ್ನೊಂದು ಆಶ್ಚರ್ಯವೆನೆಂದರೆ ಯಾಣದ ಸುತ್ತಲು ಇರುವ ಪ್ರದೇಶಗಳಲ್ಲಿ ಮಣ್ಣು ಕೆಂಪು, ಇಲ್ಲಿ ಮಾತ್ರ ಕಪ್ಪು ಮಣ್ಣಿನಿಂದ ಕೂಡಿದೆ! ಇದು ವಿಜ್ಞಾನಿಗಳಿಗೂ ಸೋಜಿಗ ಉಂಟುಮಾಡಿದ ವಿಷಯವಾಗಿದೆ.

source: ramanan50.wordpress.com

Also Read: ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳಲ್ಲಿ ಒಂದಾದ ಘ್ರಷ್ಣೇಶ್ವರ ಜ್ಯೋತಿರ್ಲಿಂಗದ ಮಹಿಮೆ.