ಇಂದು ಸುಬ್ರಹ್ಮಣ್ಯ ಷಷ್ಠಿ… ಇದರ ವಿಶೇಷತೆ ಮತ್ತು ಆಚರಣೆಗಳ ಬಗ್ಗೆ ತಿಳಿದುಕೊಳ್ಳಲು ಈ ಆರ್ಟಿಕಲ್ ಓದಿ…!!

0
1719

ಮಾರ್ಗಶಿರಮಾಸದ ಶುದ್ಧ ಷಷ್ಠಿಯು ಅತ್ಯಂತ ಪವಿತ್ರ ದಿನ. ಈ ದಿನವನ್ನು ಚಂಪಾಷಷ್ಠಿ ಅಥವಾ ಕುಕ್ಕೆ ಷಷ್ಠಿಯೆಂದೇ ಪ್ರಸಿದ್ಧ. ಇದು ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರಿಯವಾದ ದಿನ. ಸುಬ್ರಮಣ್ಯ ದಕ್ಷಿಣ ಭಾರತದ ಬಹುಜನಪ್ರಿಯ ದೇವ, ಶರಣವಭವ. ಕುಮಾರ ಸ್ವಾಮಿಯ ಆರಾಧನೆ ತಮಿಳುನಾಡಿನಲ್ಲಿ, ಇದರ ಪ್ರಭಾವದಿಂದ ನೆರೆಯ ಕನ್ನಡ ನಾಡಿನಲ್ಲೂ ಕೂಡ ನಡೆಯುತ್ತಿದೆ.

ಮಾಸಗಳಲ್ಲೇ ಮಾರ್ಗಶಿರ ಮಾಸವು ಶ್ರೇಷ್ಠ ಮಾಸವಾಗಿದ್ದು ಪವಿತ್ರ ಕ್ಷೇತ್ರಗಳಲ್ಲಿ, ನದಿ, ಸಂಗಮಗಳಲ್ಲಿ ಸಂಕಲ್ಪ ಮಾಡಿ ಸ್ನಾನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ, ಮೋಕ್ಷ ಪಡೆಯಲು ಸಾಧ್ಯವಿದೆ. ಮಾರ್ಗಶಿರ ಮಾಸದ ಪ್ರಮುಖ ಆಕರ್ಷಣೆ, ಆಚರಣೆಗಳಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಧಾನವಾದದ್ದು. ಇದು ಚಂಪಾಷಷ್ಠಿ ಎಂಬ ಹೆಸರಿನಿಂದ ನಾಡಿಗರೆಲ್ಲರಿಗೆ ಚಿರಪರಿಚಿತ.

ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ “ಬೀದಿ ಮಡೆಸ್ನಾನ” (ಉರುಳು ಸೇವೆ) ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಸಂತರ್ಪಣೆಯ ಉಚ್ಚಿಷ್ಠದಲ್ಲಿ ಹೊರಳಾಡಿಕೊಂಡು ಅಂಗಣದಲ್ಲಿ ಪ್ರದಕ್ಷಿಣೆ ಬರುವ “ಮಡೆಸ್ನಾನ” ಸೇವೆಯು ಮುಖ್ಯ ಹರಕಯಲ್ಲಿ ಒಂದಾಗಿದೆ. ಈ ದಿನಂದಂದು ಸುಬ್ರಹ್ಮಣ್ಯ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಹಲವು ರೀತಿಯ ಸಮಸ್ಯೆಗಳು ಬಗೆಹರಿಯಲಿವೆ ಎಂಬ ನಂಬಿಕೆ ಕೂಡ ಇದೆ.

ಸುಬ್ರಹ್ಮಣ್ಯ ಷಷ್ಠಿಯ ಪೂಜಾ ವಿಧಾನ

ಮಾರ್ಗಶಿರ ಮಾಸದ ಷಷ್ಠಿಯಂದು ಸುಬ್ರಹ್ಮಣ್ಯನನ್ನು ವಟುವಿನ ರೂಪದಲ್ಲಿ ಆರಾಧಿಸಲಾಗುತ್ತದೆ. ಸುಬ್ರಹ್ಮಣ್ಯನನ್ನು ವಟು( ಬ್ರಹ್ಮಚಾರಿ) ಸ್ವರೂಪದಲ್ಲಿ ಆರಾಧಿಸಲಾಗುವುದರಿಂದ ಷಷ್ಠಿ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬಿಕೆ.

ಸುಬ್ರಹ್ಮಣ್ಯ ಷಷ್ಠಿಯ ದಿನದಂದು ಬ್ರಹ್ಮಚಾರಿಗಳಿಗೆ ಆಹ್ವಾನ ನೀಡಿ ವಸ್ತ್ರಗಳನ್ನು ಫಲತಾಂಬೂಲಗಳನ್ನಿತ್ತು ನಮಸ್ಕರಿಸುವ ಮೂಲಕ ಸುಬ್ರಹ್ಮಣ್ಯನ ಸ್ವರೂಪವನ್ನು ಪೂಜಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ. ಕರ್ನಾಟಕದಲ್ಲಿರುವ ಅನೇಕ ಸುಬ್ರಹ್ಮಣ್ಯ ದೇವಾಲಯಗಳಿರುವ ಕ್ಷೇತ್ರಗಳಲ್ಲಿ ಇಂದಿಗೂ ಈ ಆಚರಣೆ ನಡೆಯುತ್ತಿದೆ.