ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್; ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ LPG ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ..

0
496

ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ LPG ಗ್ರಾಹಕರಿಗೆ ಉಡುಗರೆ ನೀಡಿದೆ. 14.2 ಕೆ.ಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಸೋಮವಾರದಿಂದ ಜಾರಿ ಬಂದಿದ್ದು, ರೂ. 5.91 ಕಡಿಮೆಯಾಗಿದೆ. ಕಳೆದ ಬಾರಿ ರೂ. 6.52 ರಷ್ಟು ಬೆಲೆಯನ್ನು ತಗ್ಗಿಸಲಾಗಿತ್ತು ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ. ಕಳೆದ ತಿಂಗಳು 14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ರೂ. 507.42 ರಷ್ಟಿತ್ತು. ಈಗ ಎಲ್ಪಿಜಿ ದರ ರೂ. 500.90 ರಿಂದ ರೂ. 494.99 ಕ್ಕೆ ಇಳಿದಿದೆ. ಇನ್ನು ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆಯಲ್ಲೂ ಇಳಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆಗಳಿಗೆ ಅನುಗುಣವಾಗಿ ಸಿಲಿಂಡರ್‌ ಬೆಲೆ ಇಳಿಕೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್‌ ದರವನ್ನು ರೂ. 120.50 ರಂತೆ ಕಡಿಮೆ ಮಾಡಲಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ದರ ಪ್ರತಿ ಸಿಲಿಂಡರ್ ಗೆ ಕಳೆದ ಬಾರಿ ರೂ. 133 ಇಳಿಕೆ ಮಾಡದೆ.

Also read: ಕೆ.ಎಸ್.ಆರ್.ಟಿ.ಸಿ. ಬಸ್ ಬ್ರೇಕ್ ಫೇಲ್ ಆದಾಗ, ತನ್ನ ಲಾರಿಗೆ ಗುದ್ದಿಸಿ ಗುದ್ದಿಸಿಕೊಂಡು 70 ಜನರ ಜೀವ ಉಳಿಸಿದ ಲಾರಿ ಚಾಲಕನ ಬಗ್ಗೆ ಓದಲೇ ಬೇಕು..

ಯಶಸ್ವಿಯಾಗಿ ಉಜ್ವಲ ಯೋಜನೆ:

ಕೇಂದ್ರದ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಉಜ್ವಲ ಯೋಜನೆಯ ಮೂಲಕ 10 ಕೋಟಿ ಮನೆಗಳಿಗೆ ಎಲ್ಪಿಜಿ ಸಂಪರ್ಕ ಒದಗಿಸಿದೆ. ಈ ಯೋಜನೆ ಸಾಕಾರಕ್ಕಾಗಿ ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳು ಕೈಜೋಡಿಸಿವೆ. ಕೇಂದ್ರದ ಉಜ್ವಯ ಯೋಜನೆಯಂತೆ ರಾಜ್ಯದಲ್ಲಿ ಅನಿಲಭಾಗ್ಯ ಯೋಜನೆ ಅನುಷ್ಠಾನವಾಗಿದೆ. ಕೇಂದ್ರ ಸರ್ಕಾರ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ರಾಜ್ಯದ ಶೇ. 60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ಹೀಗಾಗಿ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಅವರೆಲ್ಲರಿಗೂ ಅಡುಗೆ ಅನಿಲ (ಗ್ಯಾಸ್) ನೀಡುವ ಉದ್ದೇಶ ಹೊಂದಿದೆ.

ಸಬ್ಸಿಡಿಯಲ್ಲಿ ವರ್ಷಕ್ಕೆ 12 ಸಿಲಿಂಡರ್:

ಎಲ್ಪಿಜಿ ಗ್ರಾಹಕರು ಒಂದು ವರ್ಷದ ಅವಧಿಯಲ್ಲಿ 12 ಸಿಲಿಂಡರ್-ಗಳನ್ನು ಸಬ್ಸಿಡಿ ಸಹಿತವಾಗಿ ಪಡೆಯಬಹುದಾಗಿದೆ. ಸಬ್ಸಿಡಿ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಒಂದು ವೇಳೆ 12 ಸಿಲಿಂಡರ್-ಕ್ಕಿಂತ ಹೆಚ್ಚಿನ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಖರೀದಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ಸಬ್ಸಿಡಿ ಇರುವುದಿಲ್ಲ. ಈ ಎಲ್ಲ ಮಾಹಿತಿಯಲ್ಲಿರುವಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಬೆಲೆ ಇಳಿಕೆ ಕಂಡಿರುವುದು ಹಾಗು ಡಾಲರ್ ಎದುರು ರೂಪಾಯಿ ವಿನಿಮಯ ದರ ಇಳಿಕೆಯೆತ್ತ ಸಾಗುತ್ತಿರುವುದು ಎಲ್ಪಿಜಿ ಬೆಲೆ ಇಳಿಕೆಗೆ ಕಾರಣವಾಗಿದೆ.

ಬಡ ಕುಟುಂಬಗಳಿಗೆ LPG:

ಕೇಂದ್ರ ಸರ್ಕಾರದ ಉದ್ದೇಶದಂತೆ ಶೇ. 100 ರಷ್ಟು ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ. 2011 ರ ಸಮಾಜೋ ಆರ್ಥಿಕ ಜಾತಿ ಜನಗಣತಿ (SECC) ಆಧಾರದ ಮೇಲೆ ಸಂಪರ್ಕಗಳನ್ನು ನೀಡಲಾಗುತ್ತಿತ್ತು. ನಂತರ ಪ್ರಧಾನ ಮಂತ್ರಿ ಆವಾಸ ಯೋಜನೆ ಮತ್ತು ಅಂತ್ಯೋದಯ ಯೋಜನೆಯ ಫಲಾನುಭವಿಗಳಾದ ಎಸ್‌ಸಿ, ಎಸ್‌ಟಿ, ಅರಣ್ಯ ನಿವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು, ದ್ವೀಪ ನಿವಾಸಿಗಳು, ಅಲೆಮಾರಿ ಬುಡಕಟ್ಟು ಜನಾಂಗ, ಚಹಾ ಎಸ್ಟೇಟ್‌ಗಳ ಬಡವರಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು. ಈಗ ಎಲ್ಲ ವರ್ಗದ ಕಡು ಬಡವರಿಗೂ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಎಲ್‌ಪಿಜಿ ವಿತರಣೆ ಮಾಡುತ್ತಿದೆ.

Also read: ರಾಜ್ಯ ದ್ರೋಹಿಗಳಿಂದ ಮತ್ತೆ ಪುಂಡುತನ, ಮುಧೋಳದಲ್ಲಿ ಉತ್ತರ ಕರ್ನಾಟಕದ ಧ್ವಜ ಹಾರಿಸಿ ಮತ್ತೆ ಪ್ರತ್ಯೇಕ ರಾಜ್ಯದ ಕಿಚ್ಚು ಹತ್ತಿಸಿದ್ದಾರೆ!!