ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಮಾರ್ಚ್ 9ರಂದು ನಗರದ ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟ ಸುದೀಪ್ ಮತ್ತವರ ಪತ್ನಿ ಪ್ರಿಯಾಗೆ ಕೌಟುಂಬಿಕ ನ್ಯಾಯಾಲಯ ಸೋಮವಾರ ನಿರ್ದೇಶಿಸಿದೆ.
ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಮುಂದಾಗಿದ್ದ ಕನ್ನಡದ ಖ್ಯಾತ ನಟ ಸುದೀಪ್ ದಂಪತಿ ಮತ್ತೆ ಒಂದಾಗಲು ಮುಂದಾಗಿದ್ದಾರಾ?
ಸುದೀಪ್ ದಂಪತಿ ಸಲ್ಲಿಸಿರುವ ಅರ್ಜಿ ಕೌಟುಂಬಿಕ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ಬಂದಿತ್ತು. ಆದರೆ, ವಿಚಾರಣೆಗೆ ಸುದೀಪ್ ಮತ್ತು ಪತ್ನಿ ಪ್ರಿಯಾ ಗೈರು ಹಾಜರಾಗಿದ್ದರು.ಈ ಸಂದರ್ಭ ಹಾಜರಾಗಿದ್ದ ಸುದೀಪ್ ಪರ ವಕೀಲರು, ಸುದೀಪ್ ದಂಪತಿ ಒಂದಾಗುತ್ತಾರೆ ಎಂದು ಕೋರ್ಟ್`ಗೆ ಮಾಹಿತಿ ನೀಡಿದರು. ಈ ಸಂದರ್ಭ, ಮಧ್ಯಸ್ಥಿಕಾ ಕೇಂದ್ರಕ್ಕೆ ಹಾಜರಾಗುವಂತೆ ಸುದೀಪ್ ದಂಪತಿಗೆ ಕೌಟುಂಬಿಕ ನ್ಯಾಯಾಲಯ ಸೂಚನೆ ನೀಡಿದೆ.ಈ ಸಂದರ್ಭ 2 ತಿಂಗಳ ಕಾಲಾವಕಾಶಕ್ಕೆ ಸುದೀಪ್ ಪರ ವಕೀಲರು ಮನವಿ ಮಾಡಿದ್ದಾರೆ.
ವಿಚ್ಛೇದನದ ಅರ್ಜಿ ಸಲ್ಲಿಸಿದಾಗಿನಿಂದಲೂ ಸುದೀಪ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ವಿಚ್ಛೇದನದ ಅರ್ಜಿಯಲ್ಲಿ ಹಣಕಾಸಿನ ಹಂಚಿಕೆ ಬಹುತೇಕ ಅಂತಿಮವಾಗಿದೆ. ಈ ಮಧ್ಯೆ ಸುದೀಪ್ ದಂಪತಿ ಮಧ್ಯಸ್ಥಿಕಾ ಕೇಂದ್ರಕ್ಕೆ ಹಾಜರಾಗುವಂತೆ ಕೌಟುಂಬಿಕ ನ್ಯಾಯಾಲಯ ಸೂಚನೆ ನೀಡಿದೆ. ಇದಕ್ಕೆ 2 ತಿಂಗಳು ಕಾಲಾವಕಾಶ ನೀಡಬೇಕೆಂದು ಸುದೀಪ್ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಮಾರ್ಚ್ 9ಕ್ಕೆ ವಿಚಾರಣೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಸುದೀಪ್ ಗೈರಾಗಿದ್ದು, ಅವರ ಪರ ವಕೀಲರು ಸುದೀಪ್ ದಂಪತಿ ಒಂದಾಗುತ್ತಾರೆ ಎಂದು ಕಿಚ್ಚ ಪರ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.