ಮದುವೆ ಮಂಟಪದಲ್ಲಿ ಸುಮಲತಾ ಅಂಬರೀಶ್ ಅಲೆ; ಸಪ್ತಪದಿ ತುಳಿದ ಬಳಿಕ ಸುಮಲತಾ ಗೆ ಮತ ನೀಡಿ ಎಂದು ಮನವಿ ಮಾಡಿಕೊಂಡ ನವ ಜೋಡಿಗಳು..

0
752

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ವಿಭಿನ್ನವಾಗಿದ್ದು. ಮೋದಿ ಅವರಿಗೆ ಮತ ನೀಡಿ ಅಂತ ಲಗ್ನ ಪತ್ರಿಕೆ ಮನವಿ ಮಾಡಿಕೊಂಡ ಹಲವು ವಿಷಯಗಳು ಗಮನ ಸೆಳೆಯುತ್ತಿವೆ ಈ ಎಲ್ಲ ಬೆಳವಣಿಗೆಗಳ ನಡುವೆ ಸುಮಲತಾ ಪರ ಪ್ರಚಾರಯೊಂದು ನಡೆದಿದ್ದು. ಎಲ್ಲೆಡೆ ವೈರಲ್ ಆಗಿ ಸುದ್ದಿ ಮಾಡುತ್ತಿದೆ. ರಾಮನಗರದಲ್ಲಿ ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಮದುವೆ ಬಳಿಕ ಸುಮಲತಾ ಪರ ಮತಯಾಚನೆ ಮಾಡಿದ್ದಾರೆ.


Also read: ಪುಲ್ವಾಮ ದಾಳಿಯಂತೆ ಮತ್ತೊಂದು ಆತ್ಮಹತ್ಯೆ ದಾಳಿ; ತಪ್ಪಿತು ಮಹಾ ದುರಂತ, ಉಗ್ರನ ಪತ್ರದಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..

ಹೌದು ಮಂಡ್ಯ ಲೋಕಸಭೆ ಚುನಾವಣೆ ಕಾವು ರಾಮನಗರಕ್ಕೂ ಹಬ್ಬಿದ್ದು ಸಪ್ತಪದಿ ತುಳಿದ ಬಳಿಕ ನವ ವಧು-ವರರು ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ವರ ನಾಗರಾಜ್ ಹಾಗೂ ವಧು ರೇಷ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮಂಡ್ಯ ಪಕ್ಷೇತ್ತರ ಅಭ್ಯರ್ಥಿ ಸುಮಲತಾ ಅವರ ಪರ ಮತಯಾಚಿಸಿದರು. ರಾಮನಗರ ತಾಲೂಕಿನ ಬಿಡದಿಯ ಎಸ್.ಪಿ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ದಂಪತಿಗಳು ಕಲ್ಯಾಣ ಮಂಟಪದ ಹೊರಗೆ ವೋಟ್ ಫಾರ್ ಸುಮಲತಾ ಎಂದು ಮತಯಾಚಿಸಿದ್ದಾರೆ. ಚನ್ನಪಟ್ಟಣದ ಮಂಗಳವಾರಪೇಟೆಯ ವರ ನಾಗರಾಜ್ ಹಾಗೂ ವಧು ರೇಷ್ಮಾ ಮದುವೆಯಾದ ಮೇಲೆ ಸುಮಲತಾ ಪರ ವೋಟ್ ಹಾಕುವಂತೆ ಮನವಿ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.


Also read: ಸುಮಲತಾ ಅಂಬರೀಷ್ ಗೆಲುವಿಗಾಗಿ 6 ಕಿಮೀ ಉರುಳು ಸೇವೆ ಮಾಡಿದ ಯುವಕ; ಈ ಸೇವೆ ಸುಮಲತಾ ಗೆಲುವಿಗೆ ಸಾತ್ ನೀಡುತ್ತಾ?

ಇಂದಿನಿಂದ ನಟ ಯಶ್ ಅಧಿಕೃತ ಪ್ರಚಾರ

ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರವಾಗಿ ಇಂದಿನಿಂದ ನಟ ಯಶ್​ ಅಧಿಕೃತವಾಗಿ ಪ್ರಚಾರ ನಡೆಸಲಿದ್ದಾರೆ. ಮಂಡ್ಯದ 24 ಹಳ್ಳಿಗಳಲ್ಲಿ ಯಶ್ ರೋಡ್ ಶೋ ನಡೆಸಲಿದ್ದು, ಬೆಳಗ್ಗೆ 9 ಗಂಟೆಗೆ ಉರಮಾರಕಸಲಗೆರೆಯಿಂದ ಪ್ರಚಾರ ಆರಂಭಿಸಲಿದ್ದಾರೆ. ತೂಬಿನಕೆರೆ, ಎಲೆಚಾಕನಹಳ್ಳಿ, ಯಲಿಯೂರು, ಸಿದ್ದಯ್ಯನಕೊಪ್ಪಲು, ಇಂಡವಾಳು, ಕಿರಗಂದೂರು, ಬೇವಿನಹಳ್ಳಿ, ಕೊತ್ತತ್ತಿ, ಕಾಳೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಯಶ್​ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 16ರವರೆಗೆ ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಮದ್ದೂರು, ನಾಗಮಂಗಲ, ಕೆ.ಆರ್​. ಪೇಟೆ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.

ಇಂದಿನಿಂದ ಸುಮಲತಾ ಪರ ಡಿ ಬಾಸ್​ ಪ್ರಚಾರ;


Also read: ಸುಮಲತಾ ವಿರುದ್ದ ಮಂಡ್ಯದ ಚುನಾವಣಾಧಿಕಾರಿಯಿಂದ ನೋಟೀಸ್? ನಾಳೆಯೊಳಗೆ ಡಿಸಿ ನೋಟೀಸ್ ಗೆ ಉತ್ತರಿಸದೆ ಹೋದಲ್ಲಿ ಕಾನೂನು ಕ್ರಮ..

ಮೊದಲ ದಿನವೇ 28 ಹಳ್ಳಿಗಳಿಗೆ ದರ್ಶನ್​ ಭೇಟಿ ಫೈಲ್​ ಫೋಟೋ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ದರ್ಶನ್​-ಸುಮಲತಾ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಚುನಾವಣೆ ಅಖಾಡ ಇಂದಿನಿಂದ ಮತ್ತಷ್ಟು ರಂಗೇರಲಿದೆ. ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅಂಬರೀಶ್​ ಪರವಾಗಿ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಇಂದಿನಿಂದ ಪ್ರಚಾರ ನಡೆಸಲಿದ್ದಾರೆ. ಮೊದಲ ದಿನವೇ ಅವರು 28 ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.
ಈ ಎಲ್ಲದರ ನಡುವೆ ಸುಮಲತಾ ಪರ ಜನರು ಹೆಚ್ಚು ವಾಲುತ್ತಿದ್ದು ಮಂಡ್ಯದ ತುಂಬಾ ಸುಮಲತಾ ಅಲೆ ಶುರುವಾಗಿದೆ. ಅದರಲ್ಲೇ ಬಿಜೆಪಿಯಿಂದ ಸುಮಲತಾಗೆ ಬೆಂಬಲ ಸಿಕ್ಕಿದ್ದು ಮತ್ತಷ್ಟು ಪ್ರತಿಸ್ಪರ್ಧಿಯಲ್ಲಿ ನಡುಕ ಹುಟ್ಟಿಸಿದೆ. ಮುಖ್ಯಮಂತ್ರಿಯವರ ಮಗನಾಗಿದ್ದರಿಂದ ನಿಖಿಲ್ ಪ್ರಚಾರ ಕೂಡ ಜೋರಾಗಿದ್ದು, ಹಣದ ಹೊಳೆ ಹರಿಸುತ್ತಾರೆ ಎನ್ನುವ ಶಂಕೆಗಳು ಮೂಡುತ್ತಿವೆ ಈ ಹಿನ್ನೆಲೆಯಲ್ಲಿ ಈಗಾಗಲೇ ಐಟಿ ದಾಳಿ ನಡೆದಿದ್ದು ಜೆಡಿಎಸ್ ನಾಯಕರು ರಸ್ತೆಗಿಳಿಯುವಂತೆ ಮಾಡಿದೆ. ಒಟ್ಟಾರೆಯಾಗಿ ಈ ಸಲದ ಚುನಾವಣೆ ಬಲು ಚುರುಕ್ಕಾಗಿದ್ದು ಯಾರ ಹಣೆಯಲ್ಲಿ ಮಂಡ್ಯ ಎನ್ನುವುದು ಕಾಡು ನೋಡಬೇಕಿದೆ.