ಇಂದು ಸೂಪರ್ ಮೂನ್! ವಿಸ್ಮಯ ವೀಕ್ಷಣೆಗೆ ಸಿದ್ಧರಾಗಿ

0
684

ಬಾನಂಗಳದಲ್ಲಿ ಇಂದು ಸಂಜೆ ಘಟಿಸುವ ಎರಡು ವಿಸ್ಮಯಗಳ ವಿದ್ಯಮಾನ ಕುತೂಹಲವನ್ನಂತೂ ಕೆರಳಿಸಿದೆ. ಅತ್ಯಂತ ದೊಡ್ಡ, ಅತಿ ಉಜ್ವಲ ಮತ್ತು ತೀರಾ ಸನಿಹದ ಚಂದ್ರನನ್ನು ನೋಡುವ ಅವಕಾಶ ಜನರಿಗೆ ಲಭಿಸಲಿದೆ.

ಹೌದು…ಇಂದು ಸಂಜೆ ಚಂದ್ರ ಎಂದಿನಂತೆ ಸಾಮಾನ್ಯವಾಗಿರುವುದಿಲ್ಲ, ಸೂಪರ್ ಮೂನ್ ಆಗಿ ಈ ಹಿಂದೆಂದಿಗಿಂತಲೂ ಸ್ಪಷ್ಟವಾಗಿ ಬೃಹತ್ ಆಗಿ ಗೋಚರಿಸಲಿದ್ದಾನೆ. ವೈಜ್ಞಾನಿಕವಾಗಿ ಚಂದ್ರ ಇಂದು ಭೂಮಿಗೆ ತೀರ ಸಮೀಪದಲ್ಲಿ ಹಾದುಹೋಗಲಿದ್ದು, ಹೆಚ್ಚು ಪ್ರಕಾಶಮಯವಾಗಿ ಮತ್ತು ದೊಡ್ಡದಾಗಿ ಗೋಚರಿಸುತ್ತಾನೆ. ಖಗೋಳಶಾಸ್ತ್ರದಲ್ಲಿ ಈ ಪ್ರಕ್ರಿಯೆಯನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಭಾರತೀಯ ಕಾಲಮಾನ ಇಂದು ಸಂಜೆ 6 ಗಂಟೆಯಿಂದ 7.30ರವರೆಗೂ ಸೂಪರ್ ಮೂನ್ ಗೋಚರವಾಗಲಿದ್ದು, ಜನರು ಬರೀ ಗಣ್ಣಿನಿಂದಲೇ ಸೂಪರ್ ಮೂನ್ ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಈ ಬಾರಿಯ ಸೂಪರ್ ಮೂನ್ ತೀರಾ ವಿಶೇಷವಾಗಿದ್ದು, 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಶೇಷ ಸೂಪರ್ ಮೂನ್ ಗೋಚರವಾಗುತ್ತಿದೆ.

ಬಾನಂಗಳದಲ್ಲಿ ಇಂದು ಸಂಜೆ ಘಟಿಸುವ ಎರಡು ವಿಸ್ಮಯಗಳ ವಿದ್ಯಮಾನ ಕುತೂಹಲವನ್ನಂತೂ ಕೆರಳಿಸಿದೆ. ಅತ್ಯಂತ ದೊಡ್ಡ, ಅತಿ ಉಜ್ವಲ ಮತ್ತು ತೀರಾ ಸನಿಹದ ಚಂದ್ರನನ್ನು ನೋಡುವ ಅವಕಾಶ ಜನರಿಗೆ ಲಭಿಸಲಿದೆ. ಅಲ್ಲದೇ ಇದೇ ವೇಳೆ ಕೆಲವು ಭಾಗಗಳಲ್ಲಿ ಉಲ್ಕಾಪಾತಗಳ ಸೌರ ಅದ್ಭುತವನ್ನೂ ನೋಡಬಹುದು. ಭಾರತದ ಅನೇಕ ಭಾಗಗಳಲ್ಲಿ ಮಕ್ಕಳ ದಿನಾಚರಣೆಯಾದ ಇದೇ ದಿನ ರಾತ್ರಿ 7.22ರಲ್ಲಿ ಬೃಹತ್ ಚಂದಮಾಮ ದರ್ಶನ ನೀಡಲಿದ್ದಾನೆ.

ಇಂದು ಚಂದ್ರಮನು ಮಾಮೂಲಿಗಿಂತ 14 ಪಟ್ಟು ದೊಡ್ಡದಾಗಿ ಕಾಣಿಸಿಕೊಂಡು, ಬೆಳದಿಂಗಳಿಗಿಂತ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಬೆಳಗಲಿದ್ದಾನೆ. ಅಲ್ಲದೇ ಭೂಮಿಗೆ ಅತ್ಯಂತ ಸಮೀಪಕ್ಕೆ (48,000 ಕಿ.ಮೀ. ¸ನಿಹ) ಬರಲಿದ್ದಾನೆ. ಈ ಮೂರು ಅದ್ಭುತ ಸಂಗತಿಗಳು ಅದೇ ಘಟಿಸಲಿರುವುದು ಅತ್ಯಂತ ಸೋಜಿಗದ ಸಂಗತಿಯೂ ಹೌದು. ಜಗತ್ತಿನ ಎಲ್ಲ ಭಾಗಗಳಲ್ಲೂ ಶಶಾಂಕ ಎಂದಿಗಿಂತ ವಿಭಿನ್ನ ರೀತಿಯಲ್ಲಿ ಗೋಚರಿಸಿದರೂ, ಪೂರ್ವ, ಉತ್ತರ ಅಮೆರಿಕ ಮತ್ತು ಯುರೋಪ್ ಖಂಡದ ಕೆಲವು ಭಾಗದಲ್ಲಿ ತುಂಬಾ ಸ್ಪಷ್ಟವಾಗಿ ಕಾಣಿಸಲಿದ್ದಾನೆ. ಭಾರತದ ಅನೇಕ ಕಡೆ ಇಂದು ರಾತ್ರಿ 7.22ರ ನಂತರ ಮೋಹಕ ಚಂದಿರದ ಬೆಳದಿಂಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇದನ್ನು 21ನೇ ಶತಮಾನದ ಅತ್ಯಂತ ವಿಶಿಷ್ಟ ತಾರಾಮಂಡಲದ ವಿಸ್ಮಯ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಬಣ್ಣಿಸಿದ್ದು, ಈ ಅಪರೂಪದ ದೃಶ್ಯ ನೋಡಬೇಕಾದರೆ ನವೆಂಬರ್ 25, 2034ರವರೆಗೆ ಕಾಯಬೇಕು ಎಂದು ಹೇಳಿದ್ದಾರೆ. ಜನವರಿ 26, 1938ರಲ್ಲಿ ಅಂದರೆ 68 ವರ್ಷಗಳ ಹಿಂದೆ ಇಂಥ ಸೌರವ್ಯೂಹ ಅದ್ಭುತಕ್ಕೆ ಆಗಸವು ಸಾಕ್ಷಿಯಾಗಿತ್ತು. ಈ ಶತಮಾನದ ಸೂಪರ್‍ಮೂನ್ ಎಂದೇ ಇದನ್ನು ಬಣ್ಣಿಸಲಾಗಿದೆ. ಕಾಕತಾಳೀಯ ಸಂಗತಿ ಎಂದರೆ ಆಗಲೂ ಜಗತ್ತಿನ ಹಲವೆಡೆ ಭೂಕಂಪ, ಸುನಾಮಿಯಂಥ ನೈಸರ್ಗಿಕ ಪ್ರಕೋಪಗಳು ಸಂಭವಿಸಿದ್ದವು.

ವಿಶ್ವದ ಅನೇಕ ಭಾಗಗಳಲ್ಲಿ ಆತಂಕ ಮನೆ ಮಾಡಿದೆ.

ಅರ್ಜೈಂಟೀನಾ, ಚಿಲಿಯಲ್ಲೂ ಭೂಕಂಪ : ಇದೇ ವೇಳೆ ವಾಯುವ್ಯ ಅರ್ಜೈಂಟೀನಾದ ಮೇಲೆ ಪ್ರಬಲ ಭೂಕಂಪ ಅಪ್ಪಳಿಸಿದೆ. ಅಮೆರಿಕದ ಭೂಗರ್ಭ ಸರ್ವೇಕ್ಷಣಾ ಇಲಾಖೆ ಹೇಳಿರುವಂತೆ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು. ಅರ್ಜೈಂಟೀನಾದಲ್ಲಿ ಭೂಕಂಪ ಸಂಭವಿಸಿದ ನಂತರ ಗಡಿ ಭಾಗ ಚಿಲಿಯಲ್ಲೂ 6.4 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು ಜನರು ಭಯಭೀತರಾಗಿದ್ದಾರೆ. ಈ ದೇಶಗಳಲ್ಲಿ ಸಾವು-ನೋವಿನ ಆತಂಕ ಉಂಟಾಗಿದೆ.

ಉಲ್ಕಾಪಾತಗಳ ಆತಂಕ : ಸೂಪರ್‍ಮೂನ್ ಸಂದರ್ಭದಲ್ಲೇ ಭೂಮಿಯಿಂದ ಸುಮಾರು 3.56 ಲಕ್ಷ ಕಿ.ಮೀ.ದೂರದಲ್ಲಿ ರಾತ್ರಿ ಭಾರೀ ಪ್ರಮಾಣದ ಉಲ್ಕಾಪಾತಗಳು ಸಂಭವಿಸುತ್ತವೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ. ಇದನ್ನು ಬೆಂಕಿಯ ಚೆಂಡುಗಳೆಂದು ಬಣ್ಣಿಸಿರುವ ಅವರು, ನ.16 ಮತ್ತು 17ರಂದು ಇವುಗಳ ಆರ್ಭಟ ಜೋರಾಗಿರುತ್ತದೆ ಎಂದು ಹೇಳಿದ್ದಾರೆ.

ಇಡೀ ಜಗತ್ತಿಗೆ ಭಯ ಹುಟ್ಟಿಸಿರುವ ಸೂಪರ್‍ಮೂನ್‍ನಿಂದ ಸುನಾಮಿಯಂಥ ವಿನಾಶಕಾರಿ ನೈಸರ್ಗಿಕ ಪ್ರಕೋಪಗಳು ಬಂದೆರಗುವುದರ ಮುನ್ಸೂಚನೆ ಇದಾಗಿದೆ ಎಂಬ ವಾದಕ್ಕೆ ಪುಷ್ಟಿ ನೀಡುವ ವಿದ್ಯಮಾನಗಳು ನಡೆದಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆದರೆ ಈ ವರದಿ ಮತ್ತು ಆತಂಕಗಳನ್ನು ತಳ್ಳಿ ಹಾಕಿರುವ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೊಂದು ತೀರಾ ಅಪರೂಪದ ವಿದ್ಯಮಾನ. ಇದು ಕತ್ತಲು ಬೆಳಕಿನಾಟದ ಸಂಗತಿ. ಗುರುತ್ವಾಕರ್ಷಣೆಯಲ್ಲಿ ಸ್ವಲ್ಪ ಏರುಪೇರಾಗುವುದು ಸಹಜ.