ಲಂಡನ್ ಏರ್ ಫೋರ್ಟಿನಲ್ಲಿ ಸೋಮಯಾಜಿಯವರಿಗೆ ನಿಜವಾಗ್ಲೂ ಆಗಿದ್ದು ಏನು ವಿಭೂತಿ ತೆಗಿಸಿದ್ದು ಏಕೆ…?

0
634

ಲಂಡನ್ ಏರ್ ಫೋರ್ಟಿನಲ್ಲಿ ತಪಾಸಣೆಯ ಹೆಸರಿನಲ್ಲಿ ಜ್ಯೋತಿಷಿ ಸೋಮಯಾಜಿಯವರ ವಿಭೂತಿ, ಕುಂಕುಮ ಮತ್ತು ಧರಿಸಿದ್ದ ಶಾಲು , ಬಟ್ಟೆಗಳನ್ನು ತೆಗೆಸಿ ಲಂಡನ್ ಏರ್ ಪೋರ್ಟ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಲಂಡನ್ನಿನಿಂದ ಬೆಂಗಳೂರಿಗೆ ಹೊರಟಿದ್ದ ಪ್ರಖ್ಯಾತ ಜ್ಯೋತಿಷಿ ಕೆ.ಎನ್. ಸೋಮಯಾಜಿ ಅವರಿಗೆ ಲಂಡನ್ನಿನ ಏರ್ ಪೋರ್ಟಿನಲ್ಲಿ ಅಪಮಾನವಾಗಿದೆ.

Image result for london airport

ತಪಾಸಣೆಯ ಹೆಸರಿನಲ್ಲಿ ಏರ್ ಪೋರ್ಟ್ ಸಿಬ್ಬಂದಿ ಸೋಮಯಾಜಿಯವರ ವಿಭೂತಿ, ಕುಂಕುಮ ಮತ್ತು ಧರಿಸಿದ್ದ ಶಲ್ಯ, ಬಟ್ಟೆಗಳನ್ನು ತೆಗೆಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅವರನ್ನು ತಪಾಸಣೆ ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಇದರಿಂದ ಮುಜುಗರಕ್ಕೀಡಾದ ಸೋಮಯಾಜಿ,ಲಂಡನ್ ಏರ್ ಫೋರ್ಟಿನ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.