ಸ್ವದೇಶೀ ತಳಿಗಳಿಗೆ ಹಾಗು ರೈತರಿಗೆ ಮಾರಕವಾಗುತ್ತಿದೆ ಸರ್ಕಾರದ ನೀತಿಗಳು!!

0
797

Kannada News | kannada Useful Tips

ಸಾಸಿವೆಗಾಗಿ ಸೆಣಸಾಟ
ಸ್ವದೇಶಿ ಹೆಸರಿನಲ್ಲಿ ದೇಶದೊಳಗೆ ನುಗ್ಗಲು ಸಿದ್ಧತೆ
ನಾವು ಕುಲಾಂತರಿ ತಂತ್ರಜ್ಞಾನದ ವಿರುದ್ಧ ಇಲ್ಲ. ನಾವು ನಮ್ಮ ಜೀವವೈವಿಧ್ಯವನ್ನು ಮತ್ತು ಬೀಜ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದೇವೆ. ಬಿತ್ತನೆ ಬೀಜವನ್ನು ಸಂಗ್ರಹಿಸಲು, ಬೀಜವನ್ನು ಉತ್ಪಾದಿಸಲು, ಅದನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಮಗೆ 10 ಸಾವಿರ ವರ್ಷಗಳಷ್ಟು ಹಳೆಯ ಪರಂಪರೆ ಇದೆ. ಕಾಡಿನಲ್ಲಿ ಬೆಳೆದ ಹುಲ್ಲಿನ ತಳಿಯೊಂದನ್ನು ಪತ್ತೆ ಹಚ್ಚಿ ಅದರಿಂದ 2 ಲಕ್ಷ ತಳಿಗಳನ್ನು ಅಭಿವೃದ್ಧಿಪಡಿಸಿದ ಕೃಷಿ ಸಂಸ್ಕøತಿ, ಇತಿಹಾಸ ನಮ್ಮದು. ಇದು ಕೃಷಿ ಕ್ಷೇತ್ರದಲ್ಲಿ ನಾವು ಸಾಧಿಸಿರುವ ವಿದ್ವತ್.ಸಾಸಿವೆ ಬೆನ್ನು ಹತ್ತಿದ್ದೇ 1998ರಲ್ಲಿತಿನ್ನುವ ಧಾನ್ಯಗಳಿಗೆ ವಿಷವನ್ನು ಇಕ್ಕುವುದು ಬಹುಸುಲಭ.

ಈ ಹಿನ್ನೆಲೆಯಲ್ಲಿಯೇ ಸಾಸಿವೆಯ ಕಥೆ 1998ರಷ್ಟು ಹಿಂದಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಯಾವಾಗ 1995ರಲ್ಲಿ ವಿಶ್ವ ವ್ಯಾಪಾರ ಸಂಘಟನೆ ಶುರುವಾಯಿತೋ ಆಗ ಅಮೆರಿಕದ ಒತ್ತಡಕ್ಕೆ ಮಣಿದ ನಾವು 1997ರಲ್ಲಿ ಭಾರತದ ಮಾರುಕಟ್ಟೆ ಬಾಗಿಲನ್ನು ವಿದೇಶಿ ಮಾರುಕಟ್ಟೆದಾರರಿಗೆ ತೆರವುಗೊಳಿಸಿದೆವು. ಇದಾದ ನಂತರವೇ ಜಲೋದರ (ಡ್ರಾಪ್ಸಿ) ಪ್ರಕರಣ 1998ರಲ್ಲಿ ಕಾಣಿಸಿಕೊಂಡಿತು.ದಿಲ್ಲಿಯಲ್ಲಿ ನಡೆದಿತ್ತು ಸಾಸಿವೆ ಎಣ್ಣೆಯಲ್ಲಿ ಕಲಬೆರಕೆ ಇದರ ಬೆನ್ನು ಹತ್ತಿದಾಗ ಕೇವಲ ದಿಲ್ಲಿಯಲ್ಲಷ್ಟೇ ಜಲೋದರ ಪ್ರಕರಣಗಳು ವರದಿಯಾಗಿದ್ದವು. ದೇಶದ ಉಳಿದೆಡೆ ಎಲ್ಲಿಯೂ ಜಲೋದರ ಪ್ರಕರಣಗಳು ವರದಿಯಾಗಿರಲಿಲ್ಲ.

ಇದು ಸಾಸಿವೆಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಕೋಲಾಹಲ ಎಬ್ಬಿಸಲು ನಡೆಸಿದ ಮೊದಲ ಪ್ರಯತ್ನವಾಗಿತ್ತು. ನಂತರದಲ್ಲಿ ನಮಗೆ ತಿಳಿದುಬಂದ ಸಂಗತಿಯೆಂದರೆ ಸಾಸಿವೆ ಎಣ್ಣೆಯಲ್ಲಿ ಅಕ್ರಮವಾಗಿ ರಸಾಯನಿಕವೊಂದನ್ನು ಸೇರಿಸುವ ಕಾರ್ಯ ನಡೆದಿತ್ತು.ಇದಾದ ನಂತರದಲ್ಲಿ ಸಾಸಿವೆ ಎಣ್ಣೆ ಮೇಲೆ ನಿಷೇಧ ಹೇರಲ್ಪಟ್ಟಿತು, ಸೋಯಾಬೀನ್ ಮೇಲಿದ್ದ ಆಮದು ಸುಂಕ ತೆರವುಗೊಂಡಿತು. ಸೋಯಾಬೀನ್ ಆಮದು ಶುರುವಾಯಿತು.

ಆಮದು ಸುಂಕವನ್ನು ತೆರವುಗೊಳಿಸಿದ್ದು ಮಾತ್ರವಲ್ಲ ಅದಕ್ಕೆ ಸಹಾಯಧವನ್ನೂ ನೀಡಲಾಯಿತು. ಇದರಿಂದಾಗಿಯೇ ಇಂದು ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ದರದಲ್ಲಿ ಸೋಯಾಬೀನ್ ಎಣ್ಣೆ ದೊರೆಯುತ್ತಲಿದೆ. ಸಾಸಿವೆ ಎಣ್ಣೆಯ ಹಿಂದೆ ಆಗಿನಿಂದಲೂ ಸೋಯಾಬೀನ್ ಬೆಂಬತ್ತಿದೆ.ಮೊದಲು ಸಾಸಿವೆ ಮೇಲೆ ದಾಳಿ ಮಾಡಿ ಸೋಯಾಬೀನನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಲಾಯಿತು. ಇತ್ತೀಚಿನ ದಿನಗಳಲ್ಲಿ ಖಾದ್ಯ ತೈಲ ಉತ್ಪಾದನೆ ದೇಶದಲ್ಲಿ ಕಡಿಮೆ ಆಗುತ್ತಿದ್ದು, ಆಮದು ಪ್ರಮಾಣ ವಿಪರೀತವಾಗುತ್ತಿದೆ ಎಂಬ ಹುಯಿಲನ್ನು ಎಬ್ಬಿಸಿ ಕುಲಾಂತರಿ ತಳಿ ಸಾಸಿವೆ ಬೆಳೆಗೆ ಅನುಮೋದನೆ ಪಡೆಯುವ ಯತ್ನ ನಡೆದಿದೆ.

ಸುಳ್ಳುಗಳ ಸರಮಾಲೆಕುಲಾಂತರಿ ಸಾಸಿವೆಗೆ ಸಂಬಂಧಿಸಿದಂತೆ ಸುಳ್ಳುಗಳನ್ನು ಹೇಳಲಾಗುತ್ತಿದೆ. ಮೊದಲ ಸುಳ್ಳು, ನಾವು ಕುಲಾಂತರಿ ಬೀಜ ಮತ್ತು ಸಸ್ಯಗಳನ್ನು ಮಾಡುತ್ತಿದ್ದೇವೇನೋ ಸರಿ, ಜೀವನವೇ ಒಂದು ಸಂಕೀರ್ಣ ವ್ಯವಸ್ಥೆ ಆಗಿರುವಾಗ ಒಂದು ವಂಶವಾಹಿಯನ್ನು ಬದಲಾಯಿಸಿದಾಕ್ಷಣ ಜೀವನವೇ ಬದಲಾಗಿ ಹೋಗುವುದಿಲ್ಲ. ಜೀವನ ತನ್ನ ಪಾಡಿಗೆ ತಾನು ರೂಪುಗೊಳ್ಳುತ್ತಿರುತ್ತದೆ ಎಂಬುದು.ಇವರು ತಯಾರಿಸಿದ ಒಂದು ವಿಷಯುಕ್ತ ಬೀಜವೇ ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸುತ್ತಲಿದೆ.

ಇದನ್ನು ಇವರು ಪರಿಗಣಿಸಿಯೇ ಇಲ್ಲವೇ?ಎರಡನೇ ಸುಳ್ಳೆಂದರೆ- ಇವರಲ್ಲಿರುವ ವೈಜ್ಞಾನಿಕ ಕ್ಷಮತೆ ಎಷ್ಟೆಂದರೆ ಕುಲಾಂತರಿ ಬೀಜದಿಂದ ಏನೆಲ್ಲ ಸಾಧ್ಯಾಸಾಧ್ಯತೆಗಳಿವೆ ಎಂಬುದನ್ನು ತಾವು ಊಹಿಸಬಲ್ಲೆವು ಎಂದು ಹೇಳುವುದಾಗಿದೆ. ಬಿಟಿ ಹತ್ತಿ ವಿಚಾರದಲ್ಲೂ ಇದೇ ಸುಳ್ಳನ್ನು ಹೇಳಲಾಗಿತ್ತು. ಬಿಟಿ ಹತ್ತಿ ಉತ್ಪಾದನೆ ಪ್ರಮಾಣದಲ್ಲಿ ಹೆಚ್ಚಳವಾಗಿದ್ದೆಲ್ಲ ಕುಲಾಂತರಿ ತಳಿಯಿಂದಾಗಿಯೇ ಎಂದು ಹೇಳಲಾಯಿತು.

ಇವರು ಇಳುವರಿ ಹೆಚ್ಚುತ್ತದೆಂದು ಹೇಳುತ್ತಲೇ ಇದ್ದರೂ ಬಿಟಿ ಹತ್ತಿ ಇಳುವರಿ ಕಡಿಮೆ ಆಗುತ್ತಲೇ ಇದೆ. ಅದು ಏಕೆ ಕಡಿಮೆ ಆಗುತ್ತಲಿದೆ ಎಂಬ ಪ್ರಶ್ನೆಗೆ ಇವರಲ್ಲಿ ಉತ್ತರವಿದೆಯೇ?ಭರತಪುರದಲ್ಲಿ ರಾಷ್ಟ್ರೀಯ ಸಾಸಿವೆ ಸಂಶೋಧನಾ ಕೇಂದ್ರವಿದೆ. ಅಲ್ಲಿನ ನಿರ್ದೇಶಕರು ಸರ್ಕಾರಕ್ಕೆ 10 ವಿಧದ ಸಂಕರಣ (ಹೈಬ್ರೀಡ್) ಸಾಸಿವೆ ತಳಿಗಳನ್ನು ಕಳುಹಿಸಿದ್ದಾರೆ.

source: media2.intoday.in

ಈ ಸಂಕರಣ ತಳಿಗಳು ಕುಲಾಂತರಿ ತಳಿಗಳಿಗಿಂತಲೂ 25ರಿಂದ 50ರಷ್ಟು ಹೆಚ್ಚು ಇಳುವರಿ ನೀಡಬಲ್ಲವು.ಒಂದೊಮ್ಮೆ ಇವರಿಗೆ ಉತ್ಪಾದನೆ ಹೆಚ್ಚು ಮಾಡಬೇಕು ಎಂದೇ ಇದ್ದರೆ ಇವೇ ಸಂಕರಣ ತಳಿಗಳನ್ನು ಬಳಸಿ ಉತ್ಪಾದನೆಯನ್ನು ಹೆಚ್ಚಿಸಬಹುದಾದರೆ ಕುಲಾಂತರಿ ತಳಿಯ ಅಗತ್ಯವೇನಿದೆ.ಇವರ ಮತ್ತೊಂದು ಸುಳ್ಳೇನೆಂದರೆ- ಕುಲಾಂತರಿ ಸಾಸಿವೆ ತಳಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಆವಿಷ್ಕರಿಸಿದ್ದಾಗಿದೆ ಎಂಬುದು. ವಾಸ್ತವವಾಗಿ ಕುಲಾಂತರಿ ಸಾಸಿವೆ ಬಹುರಾಷ್ಟ್ರೀಯ ಕಂಪನಿ ಬಾಯರ್ ಮಾಡಿದ ಆವಿಷ್ಕಾರವಾಗಿದೆ.

Also Read: ಚಿಕ್ಕದಾದ ಅಡುಗೆಮನೆ ಇದ್ದರೂ ಚೊಕ್ಕವಾಗಿ ಇಟ್ಟುಕೊಳ್ಳುವುದು ಹೇಗೆ??ಇಲ್ಲಿದೆ ಟಿಪ್ಸ್…

Watch: