ಫೆಬ್ರವರಿ 23 ರಂದು ಬಿಡುಗಡೆಯಾದ ಶಿವಣ್ಣ ಮತ್ತು ಮಾಸ್ ಡೈರೆಕ್ಟರ್ ಸೂರಿ ಕಾಂಬಿನೇಷನ್ನಿನ ಟಗರು ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಗೊತ್ತೇ ಇದೆ.. ಬಿಡುಗಡೆಯಾದ ಮೂರೇ ದಿನಕ್ಕೆ 22 ಕೋಟಿಯ ದಾಖಲೆಯ ಗಳಿಕೆಯನ್ನೂ ಗಳಿಸಿ ಹೆಸರು ಮಾಡುತ್ತಿದೆ.. ಜೊತೆ ಜೊತೆಗೆ ವಿವಾದವೊಂದು ಭುಗಿಲೆದ್ದಿದೆ..
ಏನಿದು ವಿವಾದ..
ಸಿನಿಮಾದಲ್ಲಿ ಶಿವಣ್ಣನ ಪಾತ್ರದ ಜೊತೆಗೆ ಹೈಲೈಟ್ ಆಗುವ ಧನಂಜಯ್ ರವರ ಡಾಲಿ ಪಾತ್ರ ಶಿವಣ್ಣನಿಗೆ ಸಿನಿಮಾದಲ್ಲಿ ಅವಾಚ್ಯ ಶಬ್ಧಗಳಿಂದ ಬೈಯ್ಯುವ ದೃಶ್ಯವೊಂದು ಇದಕ್ಕೆ ಕಾರಣವಾಗಿದೆ.. ಸಿನಿಮಾ ನೋಡಿದ ಶಿವಣ್ಣನ ಅಭಿಮಾನಿಗಳು ನಿರ್ದೇಶಕ ಸೂರಿಯವರು ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಶಿವಣ್ಣನನ್ನು ಕ್ಷಮೆ ಕೇಳಬೇಕೆಂದು ತಾಕೀತು ಮಾಡಿದ್ದರು..
ಆದರೆ ಸಿನಿಮಾದಲ್ಲಿ ನಡೆದದ್ದೆಲ್ಲಾ ಶಿವಣ್ಣನ ಗಮನಕ್ಕೆ ಬಾರದೆ ನಡೆದದ್ದಲ್ಲ.. ಎಲ್ಲವೂ ಅವರಿಗೆ ತಿಳಿದೆ ನಡೆದಿದೆಯಾದರೂ ಅಭಿಮಾನಿಗಳ ಕೋಪ ತಣ್ಣಗಾಗಿಲ್ಲ.. ಈ ಕುರಿತು ಶಿವಣ್ಣ ಅಭಿಮಾನಿಗಳಿಗೆ ಸಿನಿಮಾವನ್ನು ಸಿನಿಮಾದ ರೀತಿಯಲ್ಲಿ ನೋಡಿ…ಸಂತೋಷ ಪಡಿ.. ನಾನು ವಿಲನ್ ಗಳಿಗೆ ಬೈದರೆ ಶಿಳ್ಳೆ ಚಪ್ಪಾಳೆ ಹೊಡೆಯುತ್ತೀರಾ.. ಅದೇ ರೀತಿಯಾಗಿ ಇದು ಕೂಡ ಕೇವಲ ಪಾತ್ರವಷ್ಟೇ ಎಂದು ಅಭಿಮಾನಿಗಳಿಗೆ ಇದನ್ನು ದೊಡ್ಡ ವಿಷಯ ಮಾಡದಂತೆ ಮನವಿ ಮಾಡಿದ್ದಾರೆ..
Also Read: ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಕಂಪ್ಲೀಟ್ ಡೀಟೇಲ್ಸ್..