ವಿಧಾನಸೌಧದಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ! ಅಯ್ಯೋ ಹಾಗಾದ್ರೆ ಸಚಿವ ರೇವಣ್ಣನ ಗತಿಯೇನು??

0
423

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದ ನಂತರ “ನಿಂಬೆ ಹಣ್ಣಿನ” ಹವಾ ಇಡಿ ದೇಶಕ್ಕೆ ಹಬ್ಬಿದೆ, ಏಕೆಂದರೆ ಮೈತ್ರಿ ಸರ್ಕಾರದಲ್ಲಿ ಸಚಿರಾಗಿರುವ ಎಚ್. ಡಿ ರೇವಣ್ಣ ಹೋದಕಡೆಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಹೋಗುತ್ತಿದ್ದರು, ಅಷ್ಟಕ್ಕೇ ಮಾತ್ರವಲ್ಲದೆ ವಿಧಾನಸೌಧದ ಒಳಗೆ ಹೋಗುವಾಗಲು ಐದು ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ಹೋಗುತ್ತಿದ್ದರು, ಹೀಗೆ ನಿಂಬೆ ಹಣ್ಣು ಹಿಡಿದು ಸಚಿವರಾದರು ಎನ್ನುವುದನ್ನು ಜನರು ತಿಳಿಸು ವಿಧಾನಸೌಧದಲ್ಲಿ ಮತ್ತು ಯಾವುದೇ ಸರ್ಕಾರಿ ಮತ್ತು ಕೋರ್ಟ್ ಕೆಲಸಗಳು ಆಗಬೇಕು ಎಂದರೆ ಜನರು ಕೈಯಲ್ಲಿ ರೇವಣ್ಣನ ನಿಂಬೆಕಾಯಿ ಹಿಡಿದು ಹೋಗುತ್ತಿದ್ದಾರೆ. ಆದರೆ ಈಗ ಇದಕ್ಕೆಲ್ಲ ನಿರ್ಬಂಧ ಹೇರಲಾಗಿದ್ದು. ಇನ್ಮುಂದೆ ವಿಧಾನಸಭೆಯಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ ಮಾಡಿದ್ದಾರೆ.

Also read: ಬಿಗ್ ಬ್ರೆಕಿಂಗ್; ಕನ್ನಡಿಗರ ಹೋರಾಟಕ್ಕೆ ಕಡೆಗೂ ಫಲ, ಇನ್ಮುಂದೆ ಕನ್ನಡದಲ್ಲೂ ಬ್ಯಾಕಿಂಗ್ ಪರೀಕ್ಷೆ ಬರೆಯಲು ಅನುಮತಿ..

ವಿಧಾನಸೌಧದಲ್ಲಿ ನಿಂಬೆಹಣ್ಣು ನಿಷೇಧ?

ಹೌದು ಸಚಿವ ರೇವಣ್ಣನಿಂದ ಶುರುವಾದ ಟ್ರೆಂಡ್ ಈಗ ಜನಸಾಮಾನ್ಯರಲ್ಲಿ ಬೆಳೆಯುತ್ತಿದೆ. ಅದರಂತೆ ಸಿಗರೇಟ್, ಪಾನ್ ಹಾಗೂ ಗುಟ್ಕಾ ಲಿಸ್ಟ್ ಗೆ ನಿಂಬೆಹಣ್ಣು ಸೇರಿದ್ದು, ಇನ್ನು ಮುಂದೆ ವಿಧಾನ ಸೌಧದೊಳಗೆ ನಿಂಬೆ ಹಣ್ಣು ತೆಗೆದುಕೊಂಡು ಹೋಗುವಂತಿಲ್ಲ. ವಿಧಾನಸೌಧ ಮುಂಭಾಗ ಸೆಕ್ಯುರಿಟಿಯವರು ಚೆಕ್ ಮಾಡುತ್ತಿದ್ದಾರೆ. ಈ ವೇಳೆ ನಿಂಬೆ ಹಣ್ಣು ಸಿಕ್ಕರೆ ಸೆಕ್ಯುರಿಟಿಯವರು ಅದನ್ನು ತೆಗೆದುಕೊಳ್ಳುತ್ತಿದ್ದಾರೆ. ನಿಂಬೆ ಹಣ್ಣು ತೆಗೆದುಕೊಂಡು ಹೋದವರನ್ನು ಮೆಟಲ್ ಡಿಟೆಕ್ಟರ್ ಒಳಗೆ ಬಿಡುವುದಿಲ್ಲ, ವಿಧಾನಸೌಧದಲ್ಲಿ ಮಾಟ-ಮಂತ್ರ ಶಂಕೆಯಿಂದಾಗಿ ನಿಂಬೆಹಣ್ಣನ್ನು ಒಳಗೆ ಬಿಡದಿರಲು ನಿರ್ಧರಿಸಿದ್ದಾರೆ.

ಏನಿದು ನಿಂಬೆಹಣ್ಣಿನ ಮಹಿಮೆ?

Also read: ಮತ್ತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ; ಹೇಗಿದೆ ನೋಡಿ ಹೊಸ ಪ್ರಶ್ನೆಪತ್ರಿಕೆ ಸ್ವರೂಪ..

ಸಾರ್ವಜನಿಕರು ತಮ್ಮ ಕೆಲಸ ಆಗಲೆಂದು ನಿಂಬೆ ಹಣ್ಣು ಹಿಡಿದುಕೊಂಡು ಬರುತ್ತಾರೆ. ಆದರೆ ಮಾಟ ಮಂತ್ರದ ಭೀತಿಗೆ ನಿಂಬೆ ಹಣ್ಣು ಬ್ಯಾನ್ ಮಾಡಲಾಗಿದೆ. ಹೀಗಾಗಿ ಹೊರಗಡೆ ನಿಂಬೆಹಣ್ಣು ಟ್ರೇನಲ್ಲಿ ಇಟ್ಟು ವಿಧಾನ ಸೌಧಕ್ಕೆ ಹೋಗಬೇಕು. ಈ ಹಿಂದೆಯೂ ಬಿಜೆಪಿ ಸರ್ಕಾರ ಇರುವಾಗ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಇದೀಗ ಮತ್ತೆ ಕಟ್ಟುನಿಟ್ಟಾಗಿ ಪೊಲೀಸರು ಜನರನ್ನು ತಪಾಸಣೆ ಮಾಡುತ್ತಿದ್ದಾರೆ. ಆದರೆ ಈ ನಿಯಮ ನಿಂಬೆಹಣ್ಣು ಹಿಡಿದುಕೊಂಡು ಓಡಾಡೋ ಸಚಿವ ರೇವಣ್ಣನವರಿಗೆ ಅನ್ವಯವಾಗುತ್ತಾ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಅಷ್ಟೆಅಲ್ಲದೆ ನಿಂಬೆಹಣ್ಣುಗಳು ಭಯ ಹೆಚ್ಚು ಮಾಡುತ್ತಿರುವ ಕಾರಣ ವಿಧೌನಸೌಧದಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ. ಹೀಗಾಗಿ ಒಳಬರುವ ಎಲ್ಲರನ್ನು ರಿಶೀಲಿಸಲಾಗುತ್ತಿದೆ, ಧಾನಸೌಧದಲ್ಲಿ ಪ್ರತಿದಿನ ಸುಮಾರು 20 ರಿಂದ 25 ನಿಂಬೆಹಣ್ಣು ದೊರಕುತ್ತಿವೆ.

ರೇವಣ್ಣನಿಗೆ ಕಂಟಕವಾದ ನಿಂಬೆ ನಿಷೇಧ?

Also read: ಟೋಲ್-ಗಳಲ್ಲಿ ಉದ್ದದ ಕ್ಯೂ ಇರುವಾಗ ಕ್ಯಾಶ್ ಮೂಲಕ ಹಣ ಪಾವತಿಸಲು ಮುಂದಾದರೆ ಬೀಳುತ್ತೆ ಭಾರಿ ದಂಡ!! ಇನ್ಹೇಗೆ ಪಾವತಿಸಬೇಕು ಅಂತ ಇಲ್ಲಿ ಓದಿ!!

ವಿಧಾನಸಭೆ ಒಳಗಡೆ ನಿಂಬೆ ಹಣ್ಣನು ನಿಷೇಧ ಮಾಡಿದ್ದು, ಜನಸಾಮಾನ್ಯರಿಗಿಂತ ಲೋಕೋಪಯೋಗಿ ಸಚಿವ ರೇವಣ್ಣನಿಗೆ ಅನ್ವಯಿಸುತ್ತದೆ, ಎನ್ನುವ ಚರ್ಚೆಗಳು ನಡೆಯುತ್ತಿವೆ. ಇನ್ನೂ ಇದೇ ತಿಂಗಳು ವಿಧಾನಸಭೆ ಕಲಾಪ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ, ಹೀಗಾಗಿ ನಿಂಬೆಹಣ್ಣುಗಳ ಸಂಖ್ಯೆ ಕೂಡ ಹೆಚ್ಚುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಅಷ್ಟೇ ಅಲ್ಲದೆ ನಿಂಬೆಹಣ್ಣನ್ನು ಒಳಗಡೆ ತೆಗೆದುಕೊಂಡು ಹೋಗುವುದರಿಂದ ಕೆಲ ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟಾಗುತ್ತಿದೆ, ನಿಂಬೆಹಣ್ಣಿನ ಜೊತೆಗೆ ಮೆಣಸಿನಕಾಯಿ ತರುವುದು ಕಂಡು ಬಂದಿತ್ತು, ಇದರಿಂದ ಹಲವು ಜನ ಪ್ರತಿನಿಧಿಗಳು ಆತಂಕಗೊಂಡಿದ್ದರು,. ಹೀಗಾಗಿ ಒಳತರದಂತೆ ತಡೆದು ಚೆಕ್ ಮಾಡುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,