ಮೊದಲು ಬಸಳೆಸೊಪ್ಪನ್ನು ಸಣ್ಣಗೆ ಹೆಚ್ಚಿ ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಹೆಚ್ಚಿದ ಬಸಳೆಸೊಪ್ಪನ್ನು ಸಣ್ಣ ಉರಿಯಲ್ಲಿ ಹುರಿದು ಬಾಡಿಸಿ. (ಹಸಿ ಬಸಳೆಸೊಪ್ಪಿನಲ್ಲಿ ಸ್ವಲ್ಪ ಲೋಳೆ. ಬಸಳೆಸೊಪ್ಪಿನ ಲೋಳೆಯ ಅಂಶವು ಬೇಯುವ ತನಕ ಸಣ್ಣ ಉರಿಯಲ್ಲಿ ಬಾಡಿಸಿಬೇಕು)
ನಂತರ ಬಾಡಿಸಿದ ಬಸಳೆಸೊಪ್ಪು, ಸ್ವಲ್ಪ ತೆಂಗಿನಕಾಯಿತುರಿ, ಜೀರಿಗೆ, ಕಾಳುಮೆಣಸು, ಹಸಿರುಮೆಣಸಿನಕಾಯಿ ಎಲ್ಲವನ್ನು ರುಬ್ಬಿಕೊಳ್ಳಿ.
ರುಬ್ಬಿದ ಮಸಾಲೆಗೆ 4 ಸೌಟು ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಈಗ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ , ಸಾಸಿವೆ, ಉದ್ದಿನಬೇಳೆ, ಒಣಮೆಣಸು ಒಂದು, ಕರಿಬೇವಿನ ಸೊಪ್ಪು ಸ್ವಲ್ಪ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
ರುಬ್ಬಿದ ಮಸಾಲೆ ಮತ್ತು ಮಜ್ಜಿಗೆಗೆ ಕರಿಬೇವಿನ ಒಗ್ಗರಣೆ ಕೊಟ್ಟರೆ ಬಸಳೆಸೊಪ್ಪಿನ ತಂಬುಳಿ ಸಿದ್ಧವಾಗುತ್ತದೆ.