ಎಳ್ಳಿನ ತಂಬುಳಿ ಮಾಡುವ ವಿಧಾನ

0
1172

ಸಾಮಗ್ರಿ:

  • ಎರಡು ಲೋಟ ಮಜ್ಜಿಗೆ,
  • ಎರಡು ಟೀ ಚಮಚ ಬಿಳಿ ಎಳ್ಳು,
  • ಒಂದು ಕೆಂಪು ಮೆಣಸಿನ ಕಾಯಿ,
  • ಎರಡು ಟೀ ಚಮಚ ಕಾಯಿತುರಿ,
  • ಒಂದುವರೆ ಟೀ ಚಮಚ ತುಪ್ಪ,
  • ಒಗ್ಗರಣೆ ಸಾಮಗ್ರಿ,
  • ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ:

ಒಂದು ಟೀ ಚಮಚ ತುಪ್ಪವನ್ನು ಬಾಣಲೆಯಲ್ಲಿ ಬಿಸಿಮಾಡಿ ಎಳ್ಳನ್ನು ಹಾಕಿ ಕೆಂಪು ಮೆಣಸಿನೊಂದಿಗೆ ಹೊಂಬಣ್ಣ ಬರುವವರೆವಿಗೆ ಹುರಿಯಿರಿ. ಆರಿದ ನಂತರ ಕಾಯಿತುರಿ ಮತ್ತು ಉಪ್ಪು ಸೇರಿಸಿ ಸ್ವಲ್ಪ ಮಜ್ಜಿಗೆಯೊಂದಿಗೆ ರುಬ್ಬಿ ನಂತರ ಉಳಿದ ಮಜ್ಜಿಗೆಯನ್ನು ಸೇರಿಸಿರಿ. ತುಪ್ಪದಲ್ಲಿ ಜೀರಿಗೆ, ಸಾಸಿವೆ, ಮೆಣಸಿನಕಾಯಿ ಸಿಡಿಸಿ ಒಗ್ಗರಣೆ ಕೊಡಿ. ರುಚಿಕರ ತಂಬುಳಿ ರೆಡಿ.