ಎರಡು ವರ್ಷದ ಮಗು ಇದ್ದಾಗ ದೂರವಾಗಿದ್ದ ಮಗನಿಗೆ 41 ವರ್ಷಗಳ ಬಳಿಕ ತಾಯಿ ಸಿಕ್ಕಾಗ ಆ ಅದ್ಭುತ ಕ್ಷಣ ಹೇಗಿರುತ್ತೆ ನೋಡಿ.!

0
376

ತಾಯಿ ಪ್ರೀತಿಗೆ ಎಂದು ಕೊನೆಯಿಲ್ಲ ಎಂದು ಹೇಳುವುದು ಸುಳ್ಳಲ್ಲ, ಇದಕ್ಕೆ ಸಾಕ್ಷಿಯಾಗುವಂತ ಘಟನೆ ನಡೆದಿದ್ದು, 2 ವರ್ಷದ ಮಗುವಿದ್ದಾಗ ಮಿಸ್ ಆಗಿದ್ದ ಮಗ 41 ವರ್ಷದ ಬಳಿಕ ಸಿಕ್ಕಿರುವ ಸುದ್ದಿ ಭಾರಿ ವೈರಲ್ ಆಗಿದೆ. ಏಕೆಂದರೆ ಅರಿಯದ, ತಿಳಿಯದ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಇಷ್ಟೊಂದು ವರ್ಷದ ನಂತರ ಬೇಟಿ ಆದರೆ ಅದರಷ್ಟು ದೊಡ್ಡ ಸಂತೋಷ ಎಲ್ಲಿದೆ? ಕಳೆದು ಹೋದ ಮಗ ಡೆನ್ಮಾರ್ಕಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆದರೆ ತಾಯಿ ಪ್ರೀತಿ ತಮಿಳುನಾಡಿನ ತಿರುವಳ್ಳೂರು ಜಿಲ್ಲೆ ಮನಾಲಿ ತನಕ ಕರೆ ತಂದು ತಾಯಿ-ಮಗ ಒಂದಾದಾಗ ಆಗುವ ಸಂತೋಷದ ಹೇಗಿರುತ್ತೆ ನೋಡಿ.

ಡೆನ್ಮಾರ್ಕಿನ ಡೇವಿಡ್ ನೀಲ್ಸನ್ ಎಂಬ 43 ವರ್ಷದ ವ್ಯಕ್ತಿಯಿಂದ. ಎರಡು ವರ್ಷದ ಮಗುವಾಗಿದ್ದಾಗಿನಿಂದ ಇವರು ಡೆನ್ಮಾರ್ಕ್ ದಂಪತಿಯ ಆಶ್ರಯದಲ್ಲಿ ಬೆಳೆದವರು. ಆದರೆ, ಯಾವುದೋ ಒಂದು ಕ್ಷಣದಲ್ಲಿ ಇವರಿಗೆ ತನ್ನ ತಾಯಿ ತಮಿಳುನಾಡಿನವರು ಎಂದು ಗೊತ್ತಾಗಿತ್ತು. ಅಲ್ಲಿಂದ ಶುರುವಾಗಿತ್ತು ತಾಯಿಯ ಹುಡುಕಾಟದ ಪ್ರಯತ್ನ. ಆರು ವರ್ಷಗಳ ಹಿಂದೆ ತಮಿಳುನಾಡಿಗೆ ಬಂದಿದ್ದ ಡೇವಿಡ್ ತಾಯಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಟ ನಡೆಸಿದ್ದರು.

ತಾಯಿ-ಮಗ ದೂರವಾಗಿದ್ದು ಹೇಗೆ?

1976ರ ಆಗಸ್ಟ್‌ 3ರಂದು ಡೇವಿಡ್ ರಾಯಪುರಂನ ಸರ್ಕಾರಿ ಆರ್ಎಸ್‌ಆರ್ಎಂ ಆಸ್ಪತ್ರೆಯಲ್ಲಿ ಜನಿಸಿದ್ದರು. ಧನಲಕ್ಷ್ಮೀ ಮತ್ತು ಕಲೈಮೂರ್ತಿ ದಂಪತಿ ಪುತ್ರ ಡೇವಿಡ್. ಕುಟುಂಬದಲ್ಲಿ ಬಡತನ ಇತ್ತು. ಹೀಗಾಗಿ, ಧನಲಕ್ಷ್ಮಿ ಪಲ್ಲಾವರಂನ ಆಶ್ರಯ ಕೇಂದ್ರದಲ್ಲೇ ಮಕ್ಕಳೊಂದಿಗೆ ವಾಸವಾಗಿದ್ದರು. ಆದರೆ, ಮುಂದೊಂದು ದಿನ ಈ ಆಶ್ರಯ ನಿಲಯ ತೊರೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದರು. ಹೀಗಾಗಿ, ಬಡತನದ ಕಾರಣದಿಂದ ಧನಲಕ್ಷ್ಮೀ ತನ್ನ ಇಬ್ಬರು ಮಕ್ಕಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದರು. ಆಶ್ರಯ ಕೇಂದ್ರದ ಸಿಬ್ಬಂದಿಯೇ ಈ ಮಕ್ಕಳ ಆರೈಕೆ ಮಾಡುತ್ತಿದ್ದರು. ಸ್ವಲ್ಪ ದಿನ ತಾಯಿ ಬರಲಿಲ್ಲವೆಂದು ಅಶ್ರಮದವರು ಡೆನ್ಮಾರ್ಕಿನಿಂದ ಬಂದಿದ್ದ ದಂಪತಿ ಎರಡು ವರ್ಷದ ಈ ಗಂಡು ಮಗವನ್ನು ದತ್ತು ಕೊಟ್ಟಿದ್ದರು.

ಈ ವಿಷಯ ತಾಯಿ ಧನಲಕ್ಷ್ಮಿಗೆ ಗೊತ್ತೇ ಇರಲಿಲ್ಲ. ಮುಂದೊಂದು ದಿನ ಮಗುವನ್ನು ನೋಡಲೆಂದು ಇಲ್ಲಿಗೆ ಬಂದಿದ್ದ ಸಂದರ್ಭದಲ್ಲಿ ಮಗುವನ್ನು ದತ್ತು ಪಡೆದಿರುವ ವಿಷಯ ಧನಲಕ್ಷ್ಮಿಗೆ ಗೊತ್ತಾಗಿತ್ತು. ಆಗ ಇವರು ಕಣ್ಣೀರಿಟ್ಟು ಮನೆಗೆ ಹೋಗಿದ್ದರು. ಈ ವೇಳೆ, ಮಗು ಡೆನ್ಮಾರ್ಕಿನಲ್ಲಿ ಸುಖವಾಗಿ ಜೀವನ ನಡೆಸುತ್ತಿದೆ ಎಂದು ಆಶ್ರಯ ಕೇಂದ್ರದ ಸಿಬ್ಬಂದಿ ಧನಲಕ್ಷ್ಮಿಗೆ ಧೈರ್ಯ ತುಂಬಿದ್ದರು. ಕ್ರಮೇಣ ಧನಲಕ್ಷ್ಮೀ ನೋವಿನಲ್ಲೂ ತಮ್ಮ ಸಹಜ ಜೀವನಕ್ಕೆ ಮರಳಿದ್ದರು. ಆದರೂ ಮಗನ ಕೊರಗು ಕಾಡುತ್ತಲೇ ಇತ್ತು. ಆಶ್ರಯ ಕೇಂದ್ರದಲ್ಲಿ ಇನ್ನೊಂದು ಮಗುವನ್ನು ಕೂಡಾ ಡೆನ್ಮಾರ್ಕನಿನ ಇನ್ನೊಂದು ದಂಪತಿ ದತ್ತು ಪಡೆದಿದ್ದರು.

ಇನ್ನೊಂದೆಡೆ, ಡೇವಿಡ್ ನೀಲ್ಸನ್ ಬೆಳೆದು ದೊಡ್ಡವರಾಗಿದ್ದರು. ಜೀವನ ಸುಖವಾಗಿತ್ತು. ಆದರೆ, ಒಂದು ಹಂತದಲ್ಲಿ ಇವರಿಗೆ ನಿಜ ಗೊತ್ತಾಗಿತ್ತು. ಹೀಗಾಗಿ, ತಾಯಿಯ ಹುಡುಕಾಟ ಆರಂಭಿಸಿದ್ದರು. ಆಗ ಇವರ ಕೈಗೆ ಸಿಕ್ಕಿದ್ದು ಒಂದು ಬ್ಲ್ಯಾಕ್ ಆಂಡ್ ವೈಟ್ ಫೋಟೋ. ಅದರ ಹಿಂಭಾಗದಲ್ಲಿ ವಿಳಾಸ ಕೂಡಾ ಬರೆದಿತ್ತು. ಅದು ತಾನು ಮಗುವಾಗಿದ್ದಾಗ ಇದ್ದ ಪಲ್ಲಾವರಂನ ಆಶ್ರಯ ಕೇಂದ್ರದ ವಿಳಾಸ. ತಡ ಮಾಡದೆ ಡೇವಿಡ್ ತಮಿಳುನಾಡಿಗೆ ಬಂದು ಹುಡುಕಾಟ ಶುರುಮಾಡಿದ್ದರು. ಆದರೆ, ದುರದೃಷ್ಟವಶಾತ್ 1990ರಲ್ಲೇ ಆ ಆಶ್ರಯ ಕೇಂದ್ರ ಅಲ್ಲಿ ಮುಚ್ಚಿತ್ತು. ಆದರೆ, ಡೇವಿಡ್ ತಾಯಿಯನ್ನು ಹುಡುಕುವ ಪ್ರಯತ್ನ ಕೈಬಿಟ್ಟಿರಲಿಲ್ಲ.

ಈ ನಡುವೆ, ಇವರಿಗೆ ಸ್ನೇಹಿತರು ಸಹಾಯದಿಂದ ಸುಮಾರು ಆರು ವರ್ಷಗಳ ಕಾಲ ಡೇವಿಡ್ ತಮಿಳುನಾಡಿನಲ್ಲಿ ತಮ್ಮ ತಾಯಿಯ ಹುಡುಕಾಟ ನಡೆಸಿದ್ದರು. ಈಗ ತಾಯಿ ಸಿಕ್ಕಿದ್ದು, ಕಳೆದ ತಿಂಗಳು ಡೇವಿಡ್ ತಮ್ಮ ತಾಯಿ ಧನಲಕ್ಷ್ಮೀ ಅವರೊಂದಿಗೆ ಡೆನ್ಮಾರ್ಕಿನಿಂದ ವಿಡಿಯೋ ಕಾಲ್‌ ಮೂಲಕ ಮಾತನಾಡಿದ್ದರು. ಇದೀಗ ನೇರವಾಗಿಯೇ ಬಂದು ಇವರು ತಾಯಿ ಬೇಟಿಯಾಗಿ ಬಿಗಿದಪ್ಪಿ ಅಮ್ಮನನ್ನು ಮುದ್ದಾಡಿದ್ದಾರೆ. ಈ ಕ್ಷಣವನ್ನು ನೋಡಿದಾಗ ಎಲ್ಲರ ಕಣ್ಣಾಲಿಗಳೂ ತುಂಬಿದ್ದವು. ನೀಲ್ಸನ್ ಜೊತೆ ಇವರ ಅಣ್ಣ ಮ್ಯಾನುಯೆಲ್ ರಾಜನ್‌ರನ್ನೂ ಡೆನ್ಮಾರ್ಕಿನ ಇನ್ನೊಂದು ದಂಪತಿ ದತ್ತು ಪಡೆದಿದ್ದರು. ಇದನ್ನು ದಾಖಲೆಯ ಮೂಲಕ ತಿಳಿದುಕೊಂಡಿದ್ದ ಡೇವಿಡ್ ಡೆನ್ಮಾರ್ಕಿನಲ್ಲಿ ಅಣ್ಣನ್ನು ಹುಡುಕಿದ್ದರು. ಡಿಎನ್‌ಎ ಪರೀಕ್ಷೆ ಮೂಲಕ ಅಣ್ಣನೂ ಇವರಿಗೆ ಸಿಕ್ಕಿದ್ದರು. ಸದ್ಯ ತಾಯಿ ಕೂಡಾ ಡೇವಿಡ್‌ಗೆ ಸಿಕ್ಕಿದ್ದಾರೆ.