ತಮಿಳುನಾಡಿನಲ್ಲಿ ಕನ್ನಡದಲ್ಲಿ ಮಾತಾಡಿದ್ರೆ 1,000 ರು ದಂಡ!

0
2329

ನಮ್ಮ ಪಕ್ಕದ ಮನೆ ತಮಿಳುನಾಡಲ್ಲಿ ಮಾತ್ರ ಕನ್ನಡ ಮಾತನಾಡಿದ್ರೆ ದಂಡ ಹಾಕುತ್ತಾರೆ.. ಕೇಳುವುದಕ್ಕೆ ಅಚ್ಚರಿ, ಆಘಾತ ಎನಿಸುವ ವಿಷಯ.

ಜಯ ಭಾರತ ಜನನಿಯ ತನುಜಾತೆ..ಜಯ ಹೇ ಕರ್ನಾಟಕ ಮಾತೆ’ ಎಂದು ಕುವೆಂಪು ಅವರು ದೇಶದ ವೈವಿಧ್ಯತೆ, ಭಾಷೆ ವೈವಿಧ್ಯತೆ, ನಾವೆಲ್ಲರೂ ಭಾರತ ಮಾತೆ ಮಕ್ಕಳು ಎಂಬ ಪಾಠ ಹೇಳಿಕೊಟ್ಟಿದ್ದಾರೆ. ಕರ್ನಾಟಕದ ಶಾಲೆಗಳಲ್ಲೂ, ಕನ್ನಡಿಗರಲ್ಲೂ ಇದೇ ಭಾವನೆ ಇದೆ. ಆದರೆ, ಇತ್ತೀಚೆಗೆ ಮಂಜುನಾಥ್ ಶೆಟ್ಟಿ ಎಂಬುವವರು ಪಾಂಡಿಚೇರಿಯಲ್ಲಿ ಕನ್ನಡದಲ್ಲಿ ಮಾತನಾಡಿ, 1,000 ದಂಡ ತೆತ್ತಿದ್ದಾರಂತೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದವಾರ ಮಂಜುನಾಥ್ ರವರು ಪಾಂಡಿಚೇರಿಗೆ ಪ್ರವಾಸಕ್ಕೆಂದು ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ವೆಲ್ಲೂರಿನ ಆರ್ ಟಿ ಒ ಚೆಕ್ ಪೋಸ್ಟ್ ಅವರ ವಾಹನವನ್ನು ತಡೆದು ನಿಲ್ಲಿಸಿದರು. ಬೇರೆ ರಾಜ್ಯದ ನೋಂದಣಿ ಸಂಖ್ಯೆ ಇದ್ದಿದ್ದರಿಂದ ಅವರು ಹಾಗೂ ಅವರ ಸ್ನೇಹಿತ ತೆರಿಗೆ ಹಣ ಕಟ್ಟಲು ಮುಂದಾದರು. ಆದರೆ, ಅವರು ಅಲ್ಲಿದ್ದ ಮಹಿಳಾ ಅಧಿಕಾರಿ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ಆಕೆ ಗರಂ ಆದರು. “ಇದು ತಮಿಳುನಾಡು, ಇಲ್ಲಿ ನೀನು ಕನ್ನಡದಲ್ಲಿ ಹೇಗೆ ಮಾತನಾಡುತ್ತೀಯ ಎಂದು ದಬಾಯಿಸಿದ್ದಲ್ಲದೆ, ಅವರಿಗೆ 1,000 ರು ದಂಡ ಹಾಕಿ ರಸೀತಿ ಹರಿದುಕೊಟ್ಟರು”. ಯಾವ ಕಾನೂನಿನ ಯಾವ ಸೆಕ್ಷನ್ ನಲ್ಲಿ ಈ ರೀತಿ ದಂಡ ವಿಧಿಸಬಹುದು ಗೊತ್ತಿಲ್ಲ.

ನಾವೆಲ್ಲರೂ ಭಾರತೀಯರು, ಯಾವ ಭಾಷೆ ಬೇಕಾದ್ರೂ ಮಾತಾಡ್ಲಿ ಬಿಡಿ ಎನ್ನುವ ವಿಶಾಲ ಹೃದಯದವರು. ಭಾರತದಲ್ಲಿ ಏಕತೆ ಮತ್ತು ಸಾಮ್ಯತೆ ತೋರುವ ಸಂವಿಧಾನದಲ್ಲಿ ಈ ರೀತಿಯಾದ ಘಟನೆಗೆ ಸ್ಥಾನವಿಲ್ಲದಿದ್ದರೂ ತಮಿಳುನಾಡಿನವರ ಈ ರೀತಿಯ ವರ್ತನೆಯು ಎರಡು ರಾಜ್ಯಗಳ ಮದ್ಯ ಸೌಹಾರ್ದತೆ ಹಾಳುಮಾಡುತಿದ್ದು, ಮುಂದೆ ಇಂತ ಘಟನೆಗಳು ಮರುಕಳಿಸಲಾದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ, ಇದೊಂದು ಭಾವನಾತ್ಮಕ ವಿಷಯವಾಗಿದ್ದು, ಕರ್ನಾಟಕದಲ್ಲಿ ಸಾವಿರಾರು ತಮಿಳಿಗರು ಜೀವನ ಸಾಗಿಸುತ್ತಿದ್ದು ಮುಂದೊಮ್ಮೆ ತಮಿಳಿಗರ ಮೇಲೆ ದಂಡ ವಿದಿಸಬಹುದಾದ ಸಂದರ್ಭ ಬರಬಹುದು.