ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿದಾಗ ರೈತರು ಕೆಂಗಡುವ ಕಾಲ ಮುಗಿಯಿತು, ಟೊಮೊಟೊ ಬೆಳೆಗೆ ಚಿನ್ನದ ಬೆಲೆ ಕೊಡಿಸುವ ಯೋಜನೆಯನ್ನು ಹೊರತಂದಿದೆ ಈ ಕಂಪನಿ…

0
1088

ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿದಾಗ ಸಾಲ ಮಾಡಿ ಬೆಳೆದ ರೈತರು ಹತಾಶೆಯಿಂದ ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವುದು ಪ್ರತಿ ವರ್ಷ ಸಾಮಾನ್ಯವಾಗಿ ಬಿಟ್ಟಿದೆ, ಸರ್ಕಾರ ಕೂಡ ಯಾವಾಗಲು ಬೆಂಬಲ ಬೆಲೆ ಅಂತ ರೈತರಿಗೆ ಸುಳ್ಳು ಆಶ್ವಾಸನೆ ನೀಡಿ ಸುಮ್ಮನಾಗುತ್ತಿದ್ದರು. ಆದರೆ ಈಗ ರೈತರ ಕಷ್ಟಕ್ಕೆ ಸಹಾಯ ಮಾಡಲು ಕಂಪನಿಯೊಂದು ಮುಂದಾಗಿದೆ.

DFRL ಎಂಬ ಕಂಪನಿ ಬೆಲೆ ಕುಸಿತದ ಸಮಯದಲ್ಲಿ ರೈತರು ಕಂಗಾಲಾಗದೆ, ಟೊಮ್ಯಾಟೋ ಅನ್ನು ಸಂಸ್ಕರಿಸಿದರೆ ಅದಕ್ಕೂ ಒಳ್ಳೆ ಬೆಲೆ ಬರುತ್ತದೆ ಎಂದು ಮೈಸೂರಿನ ಕೇಂದ್ರಿಯ ರಕ್ಷಣಾ ಆಹಾರ ಸಂಶೋಧನಾಲಯ ತೋರಿಸಿಕೊಟ್ಟಿದೆ. ಈ ಹೊಸ ತಂತ್ರಜ್ಞಾನವನ್ನು ಈಗ ರೈತರಿಗೆ ನೀಡಲು ಮುಂದಾಗಿದೆ.

ಮಷೀನ್ ಟ್ರೈಲ್ ಮತ್ತು ಎರರ್ ಎಂಬ ವಿಧಾನವನ್ನು ಬಳಸಿ ಕೆಲವು ಆಹಾರ ಮಾದರಿಗಳನ್ನ ಸಂಶೋಧಿಸಿದ್ದಾರೆ, ಇದರ ತಂತ್ರಜ್ಞಾನ ಮತ್ತು ಘಟಕವನ್ನು 2 ಲಕ್ಷದ 70 ಸಾವಿರ ರೂ. ಗಳಿಗೆ ನೀಡಲು ಯೋಜನೆ ರೂಪಿಸಿದೆ. ಇದನ್ನು ಎಲ್ಲ ರೈತರು ಒಟ್ಟು ಗೂಡಿ ಖರೀದಿಸಿ ಬೆಲೆ ಕುಸಿತವಾದಾಗ ಈ ಘಟಕದಲ್ಲಿ ಸಂಸ್ಕರಣೆ ಮಾಡಿ ಮಾರಬಹುದಾಗಿದೆ.

ಈ ಘಟಕದಲ್ಲಿರುವ ಮಶೀನಿನಲ್ಲಿ ಮೊದಲು ಸೋಡಿಯಮ್ ಹೈಫೋ ಕ್ಲೋರೈಡ್ ಸಲ್ಯೂಷನ್ ಮಿಶ್ರಣ ಮಾಡಿರುವ ನೀರಿನಲ್ಲಿ ಟೊಮ್ಯಾಟೋ ಮುಳುಗಿಸಿ ಕ್ರಿಮಿ ಮುಕ್ತವಾಗಿಸುತ್ತಾರೆ, ನಂತರ ಅವನ್ನು ಕತ್ತರಿಸಿ ಕಿಣ್ವಗಳು ಸಾಯುವುದಕ್ಕಾಗಿ ಕುದಿಯುವ ನೀರಿನಲ್ಲಿ ಹಾಕಲಾಗುತ್ತದೆ.

ನೀರಿನಲ್ಲಿ ಕುದಿಸಿದ ಟೊಮ್ಯಾಟೋದಿಂದ ರಸವನ್ನು ತೆಗೆಯಲು ಅವನ್ನು ರಸ ತೆಗೆಯುವ ಯಂತ್ರದಲ್ಲಿ ಹಾಕಲಾಗುತ್ತದೆ. ಇದರಲ್ಲಿ ಬೀಜ ಮತ್ತು ರಸವನ್ನು ಬೇರ್ಪಡಿಸಲಾಗುತ್ತದೆ. ಟೊಮ್ಯಾಟೋ ರಸವನ್ನು ಚೆನ್ನಾಗಿ ಕುದಿಸಿದ ನಂತರ ನೀರು ಆವಿಯಾಗಿ ಟೊಮ್ಯಾಟೋ ಗಟ್ಟಿಯಾಗುತ್ತದೆ. ಇದನ್ನು ಬಳಸಿ ಟೊಮ್ಯಾಟೋ ಸಾಸ್, ಕೆಚ್ ಅಪ್, ಚೆಟ್ನಿ, ಪೇಸ್ಟ್ ಮೊದಲಾದ ಆಹಾರ ಪದಾರ್ಥಗಳನ್ನು ತಯಾರಿಸ ಬಹುದಾಗಿದೆ.

DFRL ಕಂಪನಿಯ ಈ ನೂತನ ಯೋಜನೆಯಿಂದ ರೈತರಿಗೆ ತಮ್ಮ ಬೆಳೆದ ಬೆಳಗ್ಗೆ ಉತ್ತಮ ಬೆಲೆ ಸಿಗುವುದಲ್ಲದೆ, ಈ ಘಟಕದ ಸುತ್ತ-ಮುತ್ತಲಿನ ನಿರುದ್ಯೋಗಿ ಯುವಕರಿಗೆ ಕೆಲಸ ಸಿಕ್ಕಂತಾಗುತ್ತದೆ. DFRL ಕಂಪನಿ ಈಗಾಗಲೇ “ರೆಡಿ ಟು ಈಟ್” ಊಟವನ್ನು ನಮ್ಮ ಸೇನೆಗೆ ಒದಗಿಸಿ ಯಶಸ್ವಿಯಾಗಿದೆ. ಈಗ ಅದೇ ಯೋಜನೆಯನ್ನು ಸ್ವಲ್ಪ ಮಾರ್ಪಾಡು ಮಾಡಿ ರೈತರಿಗೆ ನೆರವಾಗಲು ಮುಂದಾಗಿದೆ.

ಒಟ್ಟಿನಲ್ಲಿ DFRL ನ ಈ ಹೊಸ ಯೋಜನೆಯನ್ನು ರೈತರು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತಾರೆ ಕಾದು ನೋಡಬೇಕು.