ಇಡೀ ದೇಶ 500 ಮತ್ತು 1000 ಮುಖಬೆಲೆಯ ನೋಟು ರದ್ದಿನಿಂದ ತಲೆಕೆಡಿಸಿಕೊಂಡಿದ್ದರೆ ಅತ್ತ ಹೊಸ ರಾಜ್ಯವಾಗಿ ಉದಯವಾದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ೯ ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಮನೆ ಅಲ್ಲಲ್ಲ, ಬೃಹತ್ ಬಂಗಲೆಗೆ ಗೃಹಪ್ರವೇಶ ಮಾಡಿದ್ದಾರೆ. ಬಾಗಂಪೇಟೆಯಲ್ಲಿ ನಿರ್ಮಿಸಲಾಗಿರುವ ಈ ಬಂಗಲೆ ಯಾವುದೇ ಐಷಾರಾಮಿ ಮನೆಗಳಿಗೂ ಕಡಿಮೆ ಇಲ್ಲದಂತೆ ನಿರ್ಮಿಸಲಾಗಿದ್ದು, ನಿರ್ಮಾಣ ವೆಚ್ಚ 50 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಈ ಬಂಗಲೆಯ ವೈಶಿಷ್ಟ್ಯಗಳು ಇಲ್ಲಿವೆ.
- ಈ ಬಂಗ್ಲೆಯ ಬಚ್ಚಲುಮನೆಯ ವಿಸ್ತೀರ್ಣವೇ 1 ಲಕ್ಷ ಚದರ ಅಡಿಯಾಗಿದ್ದು, ಇದಕ್ಕೆ ಬುಲೆಟ್ಪ್ರೂಫ್ ಗಾಜುಗಳನ್ನು ಅಳವಡಿಸಲಾಗಿದೆ.
- ಇದರಲ್ಲಿ ಎರಡು ಕೊಠಡಿಗಳನ್ನು ವಿಶೇಷವಾಗಿ ನಿರ್ಮಿಸಲಾಗಿದೆ. ಒಂದು ಕೆಸಿಆರ್ ಅವರದ್ದಾಗಿದ್ದರೆ ಮತ್ತೊಂದು ಅವರ ಪುತ್ರ ಕೆಟಿಆರ್ ಅವರದ್ದು. ಇದಕ್ಕೆ ಉತ್ಕೃಷ್ಟ ಗುಣಮಟ್ಟದ ಗಾಜುಗಳನ್ನು ಅಳವಡಿಸಲಾಗಿದೆ.
- ಈ ಬಂಗ್ಲೆಯನ್ನು ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಶಾಪೂರ್ಜಿ ಪಲ್ಲೊಂಜಿ ನಿರ್ಮಾಣ ಜವಾಬ್ದಾರಿ ವಹಿಸಿದ್ದಾರೆ.
- ಆರಂಭದಲ್ಲಿ ಇದರ ನಿರ್ಮಾಣ ವೆಚ್ಚ 35 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ 50 ಕೋಟಿ ದಾಟಿದೆ ಎನ್ನಲಾಗುತ್ತಿದೆ.
- ಸಿಎಂ ಅಧಿಕೃತ ನಿವಾಸಕ್ಕೆ ಪ್ರಗತಿ ಭವನ್ ಎಂದು ಹೆಸರಿಡಲಾಗಿದೆ.
- ಈ ಬಂಗ್ಲೆಗೆ 50 ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ದಿನದ 24 ಗಂಟೆ ಕಾವಲು ಇದ್ದಾರೆ.
- ಎಲ್ಲಾ ಗೇಟ್ಗಳಲ್ಲಿ ಮೆಟಲ್ ಡಿಕ್ಟೇಟರ್ ಅಳವಡಿಸಲಾಗಿದೆ.
- ಸುಮಾರು 250 ಮಂದಿ ಆಸನ ವ್ಯವಸ್ಥೆ ಇರುವ ಥಿಯೇಟರ್ ಇದೆ.
- ಬೃಹತ್ ಕಾನ್ಫರೆನ್ಸ್ ಹಾಲ್, ಸೆಕ್ರೆಟರಿಗಳ ಕಿರು ತಂಡ, ಸರಕಾರಿ ಅಧಿಕಾರಿಗಳು ತಂಗುವ ವ್ಯವಸ್ಥೆ ಇದೆ.
- ಇಡೀ ಬಂಗ್ಲೆಯನ್ನು ವಾಸ್ತು ಪ್ರಕಾರ ನಿರ್ಮಿಸಲಾಗಿದೆ.
- ಗುರುವಾರ ಸಂಜೆ ೫.೨೨ ನಿಮಿಷಕ್ಕೆ ಚಂದ್ರಶೇಖರ್ ಮತ್ತು ಪತ್ನಿ ಅಧಿಕೃತವಾಗಿ ಗೃಹಪ್ರವೇಶ ಮಾಡಿದರು.