ಚಾಕೋಲೆಟ್ ತಿನ್ನೋದೇ ಆದ್ರೆ ಈ ಡಾರ್ಕ್ ಚಾಕೋಲೆಟ್ ತಿನ್ನಿ, ಇದು ನಿಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ವೃದ್ಧಿಸುತ್ತದೆ!!

0
966

ಸೌದರ್ಯದ ಗುಟ್ಟು ಎಲಲ್ಲಿ ಅಡಗಿದೆ ಎಂಬುವುದು ಸೃಷ್ಟಿ ಮಾಡಿದ ದೇವರಿಗೂ ಲೆಕ್ಕಕೆ ಸಿಗುತ್ತಿಲ್ಲ, ಇದರ ಬಗ್ಗೆ ಸಾಕಷ್ಟು ಚರ್ಚೆಗಳು, ಸಂಶೋಧನೆಗಳು ನಡೆದು ಯಾವ ಆಹಾರ ತಿಂದರೆ ನಿಮ್ಮ ಬ್ಯೂಟಿ ಜೊತೆಗೆ ಆರೋಗ್ಯ ವೃದಿಯಾಗುತ್ತದೆ ಎಂಬುವುದ್ದನು ತಿಳಿಸಿದ್ದಾರೆ. ಅದರಲ್ಲಿ ಒಂದಾದ ಡಾರ್ಕ್ ಚಾಕೊಲೆಟ್ ತಿಂದರೆ ಎಷ್ಟೊಂದು ಪ್ರಯೋಜನ ವಿದೆ ನೋಡಿ. ಏನು ಚಾಕೊಲೆಟ್ ತಿಂದರೆ ಹಲ್ಲು ಹಾಳಾಗುತ್ತೆ, ಹೊಟ್ಟೆಗೆ ಸಂಬಂಧಿಸಿದ ಹಲವಾರು ಖಾಯಿಲೆಗಳು ಬರುತ್ತದೆ ಎಂಬುವುದನ್ನು ಚಿಕ್ಕವರಿದ್ದಾಗಿಂದ ಕೇಳುತ್ತ ಬಂದಿದೇವೆ, ಈಗ ಏನ್ ಇದು ಹೊಸ ವಿಷಯ ಅನಿಸಿದರು ಸತ್ಯವಾಗಿದೆ.

Also read: ಈ ಅಮೃತ ನೋನಿ ಹಣ್ಣನ್ನು ತಿನ್ನುವುದರಿಂದ ಮಾರಕ ರೋಗಗಳಾದ ಕ್ಯಾನ್ಸರ್ ಹಾಗೂ ಎಚ್.ಐ.ವಿ. ಗಳನ್ನು ತಡೆಗಟ್ಟಬಹುದು ಹಾಗೂ ಗುಣಪಡಿಸಲೂಬಹುದು..

ಹೌದು ನಾವು ಚಿಕ್ಕ ಮಕ್ಕಳಿದ್ದಾಗೆ ಚಾಕೊಲೆಟ್ ಎಂದರೆ ಬಾಯಲ್ಲಿ ನೀರು ಬರುತಿತ್ತು. ಮನೆಯಲ್ಲಿ ಚಾಕೊಲೆಟ್ ಆಸೆ ತೋರಿಸಿ ಏನೆಲ್ಲಾ ಕೇಳುವ ಹಾಗೆ ಮಾಡಿದ್ದು ನೆನಪಿಗೆ ಬರುತ್ತೆ. ಅದರಲ್ಲೂ ಸಾಮಾನ್ಯವಾಗಿ ಮಕ್ಕಳಿಗಂತೂ ಸಿಹಿ ತಿನಿಸು ಅಂದ್ರೆ ತುಂಬಾನೇ ಇಷ್ಟ. ಹಾಗೆಯೇ ದೊಡ್ಡವರಿಗೂ ಕೂಡ ಇಷ್ಟ ಆದಕಾರಣ ಮಕ್ಕಳಿಗೆ ಕೊಡಿಸುವ ನೆಪದಲ್ಲಿ ಒಂದೆರೆಡು ದೊಡ್ದವರೇ ಮೇಲ್ಕುತ್ತಾರೆ. ಇದರಿಂದ ಎಷ್ಟೊಂದು ಉಪಯೋಗಗಳಿವೆ ನೋಡಿ.

ಚಾಕೊಲೆಟ್ ತಿಂದರೆ ಸೌದರ್ಯ ಹೆಚ್ಚುತ್ತಾ?

ಸ್ವೀಡಿಷ್ ಸಂಶೋಧಕರು ಚಾಕೊಲೆಟ್​ ಮೇಲೆ ನಡೆಸಿದ ಅಧ್ಯಯನದಿಂದ ಚಾಕೊಲೆಟ್ ತಿಂದರೆ ಸಾಮರ್ಥ್ಯ ಮತ್ತು ಸೌಂದರ್ಯ ಹೆಚ್ಚುತ್ತದೆ, ಎಂಬುದನ್ನು ತಿಳಿಸಿದ್ದಾರೆ ಈ ಸಂಶೋಧನೆ ಚಾಕೊಲೆಟ್​ ಪ್ರಿಯರಿಗೆ ಸಂತಸ ತಂದಿದೆ. ಚಾಕೊಲೆಟ್​ನಲ್ಲಿ ಕೆಫಿನ್ ಮತ್ತು ಕೊಬ್ಬಿನಾಂಶ ಇರುವುದರಿಂದ ಹೆಚ್ಚಿನವರು ಚಾಕೊ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. ಆದರೆ ಸೌಂದರ್ಯ ಹೆಚ್ಚಿಸಲು ಮತ್ತು ಆರೋಗ್ಯ ಸುಧಾರಿಸಲು ಡಾರ್ಕ್ ಚಾಕೊಲೆಟ್ ತುಂಬಾ ಪ್ರಯೋಜನಕಾರಿ ಎಂದಿದ್ದಾರೆ.

ಚಾಕೊಲೆಟ್ ದೇಹಕ್ಕೆ ಅಪಾಯವಲ್ಲ?

ಚಾಕೊಲೆಟ್-ನಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸೃಷ್ಟಿಸುತ್ತದೆ ಎಂದು ಈ ಹಿಂದೆ ಹೇಳಲಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಚಾಕೊಲೆಟ್​ನಲ್ಲಿರುವ ಸಿಟ್ರಿಕ್ ಆಮ್ಲದಿಂದ ಕೊಬ್ಬು ಉಂಟಾಗುವುದಿಲ್ಲ, ಬದಲಾಗಿ ಚಾಕೊಲೆಟ್​ನೊಂದಿಗೆ ತಿನ್ನುವ ಇತರೆ ಫ್ಯಾಟಿ ಫುಡ್​ಗಳಿಂದ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಚಾಕೊಲೆಟ್-ನಲ್ಲಿ ಯಾವೆಲ್ಲ ಅಂಶಗಳಿವೆ?

ಹೆಚ್ಚಾಗಿ ಡಾರ್ಕ್ ಚಾಕೊಲೆಟ್​ನಲ್ಲಿ ಮೆಗ್ನಿಷಿಯಂ, ಐರನ್ ಮತ್ತು ಕಾಪರ್ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಪಾಲಿಫೆನಾಲ್ ಎಂಬ ಅಂಟಿ-ಆ್ಯಕ್ಸಿಡೆಂಟ್​​ ಅಂಶವಿದ್ದು ಇದು ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪಾಲಿಫೆನಾಲ್ ಅಂಶ ದೇಹದಲ್ಲಿ ಹೆಚ್ಚಾದಂತೆ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ. ಅಲ್ಲದೆ ಡಾರ್ಕ್​ ಚಾಕೊಲೆಟ್​ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಗೊಳ್ಳುತ್ತದೆ. 40 ಗ್ರಾಂ ಚಾಕೊಲೆಟ್​ನಲ್ಲಿ ಕೇವಲ 6 ಮಿಲಿ ಗ್ರಾಂಗಳಷ್ಟು ಮಾತ್ರ ಕೆಫಿನ್ ಕಂಡುಬರುತ್ತದೆ. ಆದರಿಂದ ಚಾಕೊಲೆಟ್​ನಲ್ಲಿ ಕೆಫಿನ್ ಅಂಶ ಹೆಚ್ಚಿರುತ್ತದೆ ಎಂಬುದು ತಪ್ಪು ಗ್ರಹಿಕೆಯಾಗಿದೆ. 6 ಮಿಲಿ ಗ್ರಾಂ ಕೆಫಿನ್ ಪ್ರತಿನಿತ್ಯ ಕುಡಿಯುವ ಕಾಫಿನಲ್ಲೂ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಚಾಕೊಲೆಟ್ ಹಲ್ಲುಗಳಿಗೆ ಮಾರಕ ?

ಬಹಳಷ್ಟು ಜನರು ಚಾಕೊಲೆಟ್​ ತಿನ್ನುವುದು ಹಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ನಂಬಿದ್ದಾರೆ. ಆದರೆ ಹಲ್ಲುಗಳು ಹುಳುಕಾಗಲು ಚಾಕೊಲೆಟ್​ ಒಂದೇ ಕಾರಣವಲ್ಲ. ಬದಲಾಗಿ ಬಾಯಲ್ಲಿ ಉಳಿಯುವ ಪಿಷ್ಟ ಮತ್ತು ಸಕ್ಕರೆ ಅಂಶಗಳ ಆಹಾರಗಳು ಕಾರಣವಾಗುತ್ತವೆ. ಚಾಕೊಲೆಟ್​ನಲ್ಲಿರುವ ಕ್ಯಾಲ್ಸಿಯಂ ಮತ್ತು ಫಾಸ್ಪೇಟ್​ ಅಂಶಗಳು ಹಲ್ಲಿನ ಆರೋಗ್ಯ ಹೆಚ್ಚಿಸುವಲ್ಲಿಯು ಪ್ರಮುಖ ಪಾತ್ರವಹಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Also read: ಸಾಸಿವೆ ತಿನ್ನುವುದರಿಂದ ಈ ಏಳು ಲಾಭಗಳು ನಿಮ್ಮದಾಗಲಿವೆ ಯಾವು ಅಂತೀರಾ ಇಲ್ಲಿವೆ ನೋಡಿ…!