ಪಾತಾಳದಲ್ಲಿ ಮೆನೆಗಳು.. ಇಲ್ಲಿ ವಾಸಿಸುವವರು ಯಾರು ಗೊತ್ತಾ..?

0
485

ಅಜ್ಜಿ ಹೇಳುವ ಕಥೆಗಳಲ್ಲಿ ಪಾತಾಳ ಲೋಕದ ಕಥೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಅಷ್ಟೇ ಅಲ್ಲದೇ, ಪೌರಾಣಿಕ ಕಥೆಗಳನ್ನು ಸಹ ಪಾತಾಳಲೋಕದ ಪ್ರಸ್ತಾಪವಿದೆ. ಆದರೆ, ಅಂತಹ ಪಾತಾಳಲೋಕದಲ್ಲಿ ವಾಸಿಸುವವರು ಯಾರು..? ನಿಜ್ವಾಗ್ಲೂ ಪಾತಾಳ ಲೋಕ ಅನ್ನೋದು ಇದ್ಯಾ..? ಇದ್ರೆ ಅದು ಹೇಗಿರಬಹುದು..? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಈ ಲೇಖನದಲ್ಲಿದೆ.

ಪಾತಾಳದಲ್ಲಿ ವಾಸಿಸುವ ಜನರು ಈಗಲೂ ಕೂಡ ಕಂಡು ಬಂದಿದ್ದಾರೆ. ಈಗಿನ ಕಾಲದಲ್ಲಿ ಭೂಮಿ ಮೇಲೆ ಮನೆ ಕಟ್ಟಿಕೊಂಡು ವಾಸಿಸುಸೋದು ಸರ್ವೇ ಸಾಮಾನ್ಯ.. ಇನ್ನು ಬೆಟ್ಟದ ತುದಿಯಲ್ಲೊಂದು ಮನೆಯ ಮಾಡಿ ಬದುಕೋರನ್ನೂ ನೋಡಿದ್ದೀವಿ. ಆದರೆ ಇಲ್ಲಿನ ಜನ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕಾಗಿ ನೆಲದ ಒಳಗೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ಆಫ್ರಿಕಾದ ದೇಶವಾದ ಟುನೀಶಿಯಾದ ಡಿಜೇಬೆಲ್ ದಾಹ್ರ ಪ್ರದೇಶದಲ್ಲಿ ನೂರಾರು ವರ್ಷಗಳಷ್ಟು ಹಳೆಯ ಮನೆಗಳಲ್ಲಿ ಇನ್ನು ಜನರು ವಾಸಿಸುತ್ತಿದ್ದಾರೆ. ಮನೆಗಳನ್ನು ನೆಲದಡಿಯಲ್ಲಿ ನಿರ್ಮಿಸಿಕೊಂಡಿದ್ದಾರೆ. ತಮಗೆ ಬೇಕಾದ ಸಾಮಗ್ರಿಗಳನ್ನು ಸಹ ಹೊಂದಿಸಿ ಕೊಂಡಿದ್ದಾರೆ. ಭೂಗತ ಗ್ರಾಮವನ್ನು ಟಿಜ್ಮಾಎಂದು ಕರೆಯುತ್ತಾರೆ.

ಇಲ್ಲಿಯ ಜನರ ಕಸುಬು ಕೃಷಿಯಾಗಿದ್ದು, ಪಕ್ಕದಲ್ಲಿಯೇ ಇರುವ ಭೂಮಿಯಲ್ಲಿ ವ್ಯವಸಾಯವನ್ನು ಮಾಡಿಕೊಂಡು ಬದುಕುತ್ತಿದ್ದಾರೆ. ಇದು ಇಂದು ನಿನ್ನೆಯದಲ್ಲ ಅವರಪೂರ್ವಜರಲ್ಲಿ ಅಲ್ಲಿ ಬಾಳಿ ಬದುಕಿರುವ ನಿದರ್ಶನಗಳಿವೆ. 100 ವರ್ಷಗಳ ಹಿಂದಿನ ಈ ಮನೆಯಲ್ಲಿ ಇಂದಿಗೂ ಜನ ವಾಸಿಸುತ್ತಾರೆ. ಹಾಗಂತ ಇವರ ಜೀವನವೂ ಕಡು ಬಡತನದಿಂದೇನೂ ಇಲ್ಲ. ಈ ಅಂಡರ್ ಗ್ರೌಂಡ್ ಮನೆಯೊಳಗೇ ಎಲ್ಲಾ ರೀತಿಯ ವ್ಯವಸ್ಥೆಯೂ ಇದೆ. ಇವರ ತೋಟ, ಕೃಷಿ ಅಲ್ಲೇ ಇರುವುದರಿಂದ ಅಲ್ಲೇ ಮನೆ ಮಾಡಿಕೊಂಡು, ವಾಸಿಸುತ್ತಿದ್ದಾರೆ. ಹೆಚ್ಚಿನವರು ಈ ನಗರವನ್ನು ಬಿಟ್ಟು ಸಿಟಿಗೆ ಹೋಗಿ ನೆಲೆಸಿದ್ದಾರೆ.

ಈ ಜನರ ಪ್ರಕಾರ, ನಮ್ಮ ಭೂಮಿ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇವೆ ಆದ್ದರಿಂದ ಇದನ್ನು ಬಿಟ್ಟು ಬೇರೆಲ್ಲೂ ಹೋಗಲಾರೆವು ಎಂದು ಹೇಳುತ್ತಾರೆ.
ಆ ಮನೆಗಳಿಗೆ ಬೆಳಕು ಗಾಳಿ ಸುಸೂತ್ರವಾಗಿ ಬರುತ್ತದೆ. ಆದರೆ ಬಿಸಿಗಾಳಿ ದೂಳು ಬಾರದಂತೆ ವ್ಯವಸ್ಥೆ ಮಾಡಲಾಗಿದೆ. ಈ ಮನೆಗಳನ್ನು ನಿರ್ಮಿಸಲು ಪ್ರಮುಖವಾದ ಕಾರಣ ಅಲ್ಲಿ ಬೀಸುವ ಭೀಕರ ಬಿಸಿಗಾಳಿ ಯಿಂದ ತಪ್ಪಿಸಿಕೊಳ್ಳಲು ಹೌದು.. ಅಲ್ಲಿ ಬೀಸುವ ಬಿಸಿ ಉಗ್ಗುವ ಗಾಳಿಯು ಜನರನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ಹಾಗಾಗಿ ಅಲ್ಲಿಯ ಜನ ನೆಲದಲ್ಲೇ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ರಜಾದಿನಗಳಲ್ಲಿ ಪ್ರವಾಸಿಗರು ವಿಚಿತ್ರವಾದ ಮನೆ ನಿರ್ಮಾಣ ನೋಡಲೆಂದು ಬರುತ್ತಾರೆ ಎನ್ನಲಾಗಿದೆ.