ಲೈಂಗಿಕ ಸಂಪರ್ಕ ನಡೆಸುವುದರಿಂದ ಕೊರೋನಾ ವೈರಸ್ ಹರಡಲಿದೆಯೇ? ಈ ಕುರಿತು ಅಧ್ಯಯನ ಏನು ಹೇಳುತ್ತೆ.?

0
701

ಕೊರೊನಾ ಭೀತಿಯಲ್ಲಿರುವ ಜನರಲ್ಲಿ ಏನೆಲ್ಲಾ ಗೊಂದಲಗಳು ಮೂಡಿವೆ ಎನ್ನುವುದು ಊಹಿಸಲು ಸಾಧ್ಯವಾಗುತ್ತಿಲ್ಲ, ಇಷ್ಟು ದಿನ ಸಮಯವಿಲ್ಲದೆ ಗಂಡ ಹೆಂಡತಿಯರಲ್ಲಿ ಸರಿಯಾದ ಹೊಂದಾಣಿಕೆ ಇರುತ್ತಿರಲಿಲ್ಲ, ಆದರೆ ಲಾಕ್ ಡೌನ್ ನಿಂದ ಇಬ್ಬರಿಗೂ ಸರಿಯಾದ ಸಮಯ ಸಿಕ್ಕಿದೆ. ಆದರೆ ಮಹಾಮಾರಿ ಭಯದಿಂದ ಲೈಂಗಿಕ ಜೀವನ ಸರಿ ಇಲ್ಲ ಎನ್ನುವ ಚರ್ಚೆ ಶುರುವಾಗಿದೆ, ಏಕೆಂದರೆ ಸೆಕ್ಸ್ ಮಾಡಿದರೆ ಕೊರೊನಾ ಬರುತ್ತೆ ಎನ್ನುವ ಭಯದಿಂದ ಇಬ್ಬರು ಹತ್ತಿರ ವಿದ್ದರು ಸಾಕಷ್ಟು ಸಮಯವಿದ್ದರೂ ಲೈಂಗಿಕ ಸಂಪರ್ಕ ನಡೆಸುವುದರಿಂದ ಕೊರೋನಾ ವೈರಸ್ ಹರಡಲಿದೆಯೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ ಈ ವಿಷಯ ಕುರಿತು ಹಲವು ವ್ಯೆದ್ಯರನ್ನು ಸಂಪರ್ಕಿಸಿದ್ದಾರೆ ಎನ್ನುವುದು ಕೂಡ ಮೂಲಗಳಿಂದ ತಿಳಿದಿದೆ. ಆದರೆ ಈ ಕುರಿತು ಸಂಶೋಧನೆ ಏನು ಹೇಳುತ್ತೆ ಅಂತ ಇಲ್ಲಿದೆ ನೋಡಿ.

ಲೈಂಗಿಕ ಸಂಪರ್ಕದಿಂದ ಕೊರೊನಾ ಬರುತ್ತಾ?

ಹೌದು ಸೂಕ್ತ ಸುರಕ್ಷತೆ ಇಲ್ಲದೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ತಬ್ಬಿಕೊಳ್ಳುವುದು ಅಥವಾ ಹಸ್ತಲಾಘವ ಮಾಡಲು ಸಾಧ್ಯವಿಲ್ಲ. ಆದರೆ ಹೊಸ ಸಂಶೋಧನೆಯು ಸೆಕ್ಸ್‌ನಿಂದ ಸೋಂಕು ಹರಡುವುದಿಲ್ಲ ಎಂದು ತಿಳಿಸಿದೆ. ಈ ಕುರಿತು ಇತ್ತೀಚೆಗೆ ಆನ್‍ಲೈನ್ ಜರ್ನಲ್ ‘ಫರ್ಟಿಲಿಟಿ ಅಂಡ್ ಸ್ಟೆರಿಲಿಟಿ’ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ. ಕೊರೊನಾ ವೈರಸ್‍ನಿಂದಾಗಿ ಜಗತ್ತಿನಾದ್ಯಂತ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಮಧ್ಯೆ ಚೀನಾದಲ್ಲಿ ಕೊರೊನಾ ಸೋಂಕಿತ 34 ಪುರುಷರಿಂದ ವೀರ್ಯ ಮಾದರಿಗಳನ್ನು ಸಂಶೋಧಕರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದರು. ರಿಪೋರ್ಟ್ ನಲ್ಲಿ ಯಾವುದೇ ವೀರ್ಯ ಮಾದರಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಜೊತೆಗೆ ಪುರುಷರ ವೃಷಣಗಳಲ್ಲಿ ವೈರಸ್ ಇರುವುದಿಲ್ಲ ಎಂದು ಹೇಳಿದೆ.

ಅಷ್ಟೇ ಅಲ್ಲದೆ ಕೊರೊನಾ ವೈರಸ್ ವೃಷಣಗಳಲ್ಲಿ ಅಥವಾ ವೀರ್ಯದಲ್ಲಿ ಕಾಣಿಸುವುದಿಲ್ಲ ಎಂಬುದು ಒಂದು ಪ್ರಮುಖ ಶೋಧನೆಯಾಗಿದೆ” ಎಂದು ಅಮೆರಿಕದ ಉತಾಹ್ ವಿಶ್ವವಿದ್ಯಾಲಯದ ಸಹ-ಪ್ರಾದ್ಯಾಪಕ ಡಾ.ಜೇಮ್ಸ್ ಹೊಟಾಲಿಂಗ್ ತಿಳಿಸಿದ್ದಾರೆ. “ಕೊರೊನಾ ಲೈಂಗಿಕವಾಗಿ ಹರಡಿದರೆ ಅದು ರೋಗ ತಡೆಗಟ್ಟುವಿಕೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಮನುಷ್ಯನಿಗೆ ಸುದೀರ್ಘ ಕಾಲ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ.

“ಸಂಶೋಧನೆಗಳ ಹೊರತಾಗಿಯೂ ನಿಕಟ ಸಂಪರ್ಕ, ಕೆಮ್ಮು, ಸೀನುವಿಕೆ ಮತ್ತು ಚುಂಬನದ ಮೂಲಕ ಕೊರೊನಾ ವೈರಸ್ ಹರಡುವ ಅಪಾಯವನ್ನು ಇನ್ನೂ ಹೆಚ್ಚಿಸುತ್ತದೆ. ಕೆಲವು ಸೋಂಕಿತರಿಗೆ ರೋಗಲಕ್ಷಣಗಳು ಕಂಡುಬರುವುದಿಲ್ಲ, ಅವರು ಆರೋಗ್ಯಕರವಾಗಿ ಕಾಣಿಸಬಹುದು. ಆದರೆ ಕೊರೊನಾ ವೈರಸ್ ಅನ್ನು ಇತರರಿಗೆ ಹರಡಬಹುದು” ಎಂದು ಅವರು ಎಚ್ಚರಿಸಿದ್ದಾರೆ. ಅಧ್ಯನನದಲ್ಲಿ ವೀರ್ಯದ ಮೂಲಕ ಕೊರೋನಾ ವೈರಸ್ ಹರಡುವುದಿಲ್ಲವಂತೆ. ಏಕೆಂದರೆ ವೀರ್ಯದಲ್ಲಿ ಕೊರೋನಾ ವೈರಸ್ ಇರುವುದಿಲ್ಲವಂತೆ. ಆದರೆ, ಈ ವೈರಸ್ ಕಫ ಹಾಗೂ ಎಂಜಲಿನಲ್ಲಿ ಕಂಡು ಬಂದಿದೆ. ಹೀಗಾಗಿ ಸೆಕ್ಸ್ ಮಾಡುವ ವೇಳೆ ಕಿಸ್ ಮಾಡದಂತೆ ಸೂಚನೆ ನೀಡಲಾಗಿದೆ. ಕಿಸ್ ಮಾಡುವ ವೇಳೆ ಒಬ್ಬರ ಎಂಜಲು ಒಬ್ಬರ ದೇಹ ಪ್ರವೇಶಿಸುತ್ತದೆ. ಈ ವೇಳೆ ಕೊರೋನಾ ವೈರಸ್ ಸುಲಭವಾಗಿ ಹರಡುತ್ತದೆ ಎನ್ನುತ್ತಾರೆ ತಜ್ಞರು ಅದಕ್ಕಾಗಿ ನಿಮ್ಮ ಇಷ್ಟದಂತೆ ಸುರಕ್ಷಿತ ವ್ಯಕ್ತಿಗಳ ಜೊತೆಗೆ ಲೈಂಗಿಕ ಸಂಪರ್ಕ ಹೊಂದಬಹುದು.

Also read: ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ವಿಮಾನಯಾನ ಮಾಡುವುದು ಸುಲಭದ ಮಾತಲ್ಲ; ವಿಮಾನದಲ್ಲಿ ಪ್ರಯಾಣಿಸಲು ವೈದ್ಯರ ಪ್ರಮಾಣಪತ್ರ ಕಡ್ಡಾಯವಂತೆ.!