ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ಆಯ್ತು..? 20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವೇನು..? ಇವೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ…

0
257

ಲಡಾಖ್ನ ಗಾಲ್ವನ್ ಗಡಿಯಲ್ಲಿ ನಡೆದ ಭಾರತ-ಚೀನಾ ಯೋಧರ ನಡುವಿನ ಘರ್ಷಣೆಗೆ ಗಡಿ ರೇಖೆ ಬಳಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರು ಭಾರತದ ಗಡಿಯೊಳಗೆ ಬೀಡುಬಿಟ್ಟಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅಷ್ಟಕ್ಕೂ ಗಡಿಯಲ್ಲಿ ಜೂನ್ 15ರಂದು ಏನೆಲ್ಲಾ ಆಯ್ತು..? ಇಲ್ಲಿದೆ ನೋಡಿ ಡೀಟೇಲ್ಸ್…

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಚೀನಾ ಯೋಧರು ಟೆಂಟ್ ಹಾಕಿರುವ ವಿಚಾರವಾಗಿ ಉಭಯ ದೇಶಗಳ ಸೇನಾ ಕಮಾಂಡರ್ಗಳ ಮಟ್ಟದ ಮಾತುಕತೆ ಜೂನ್ 6ರಂದು ನಡೆದಿತ್ತು. ಆ ಸಂದರ್ಭ ಉಭಯ ಸೇನಾ ಪಡೆಗಳ ಕಮಾಂಡರ್‌ಗಳು ಒಮ್ಮತಕ್ಕೆ ಬಂದಿದ್ದರು. ಭಾರತಕ್ಕೆ ಸೇರಿದ ಭೂಭಾಗದಿಂದ ಟೆಂಟ್‌ಗಳನ್ನು ತೆಗೆದು ವಾಪಸಾಗುವುದಾಗಿ ಚೀನಾ ಸೇನಾಧಿಕಾರಿಗಳು ಒಪ್ಪಿಕೊಂಡಿದ್ದರು. ಅಲ್ಲಿಗೆ ಪ್ರಕರಣ ಸುಖಾಂತ್ಯವಾಯಿತೆಂದು ಭಾವಿಸಲಾಯಿತು. ಆದರೆ, ನಂತರ ನಡೆದದ್ದೇ ಬೇರೆ. ಮೊದಲೇ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ, ಚೀನಾ ಯೋಧರು ಆ ಪ್ರದೇಶದಿಂದ ಹಿಂದೆ ತೆರಳಿದ್ದಾರೆಯೇ ಎಂದು ಪರಿಶೀಲಿಸುವ ಸಲುವಾಗಿ 16ನೇ ಬಿಹಾರ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ. ಸಂತೋಷ್ ಬಾಬು ನೇತೃತ್ವದ 30 ಯೋಧರ ತಂಡ ಜೂನ್ 15ರಂದು ಸಂಜೆ ಅಂದಾಜು 6 ಗಂಟೆ ವೇಳೆಗೆ ಗಸ್ತು ಕಾರ್ಯಾಚರಣೆಗೆ ತೆರಳಿತ್ತು.

ಈ ವೇಳೆ, ಗಸ್ತು ಪಾಯಿಂಟ್ 14 ಬಳಿ ಚೀನಾ ಯೋಧರ ಟೆಂಟ್‌ಗಳು ಮತ್ತು ವೀಕ್ಷಣಾ ಪೋಸ್ಟ್ ಇರುವುದು ಗಮನಕ್ಕೆ ಬಂದಿದೆ. ಅಲ್ಲಿ ಸುಮಾರು 20 ಚೀನಾ ಯೋಧರು ಕಮಾಂಡಿಂಗ್ ಆಫೀಸರ್ ಜತೆಗೂಡಿ ಇರುವುದು ಗೊತ್ತಾಗುತ್ತದೆ. ಅಲ್ಲಿಗೆ ತೆರಳಿದ ಕರ್ನಲ್ ನೇತೃತ್ವದ ತಂಡ ’ಹಿರಿಯ ಅಧಿಕಾರಿಗಳ ನಡುವೆ ಆಗಿರುವ ಒಪ್ಪಂದದಂತೆ ನೀವು ಹಿಂದೆ ಸರಿಯಬೇಕು’ ಎಂದು ಚೀನಾ ಯೋಧರಿಗೆ ಸೂಚಿಸಿದೆ. ಇದನ್ನವರು ನಿರಾಕರಿಸಿದ್ದು ಕಲಹಕ್ಕೆ ಕಾರಣವಾಗಿದೆ. ಈ ವೇಳೆ ಬಲ ಪ್ರಯೋಗದ ಮೂಲಕ ಚೀನಾ ಸೈನಿಕರನ್ನು ಭಾರತೀಯ ಯೋಧರು ಗಸ್ತು ಪಾಯಿಂಟ್ 14ರ ಆಚೆಗೆ ಹಿಮ್ಮೆಟ್ಟಿಸಿದ್ದರು. ಬಳಿಕ ಚೀನಾ ಯೋಧರು ಭಾರತದ ನೆಲದಲ್ಲಿ ಹಾಕಿದ್ದ ಟೆಂಟ್‌ಗಳನ್ನು ಸಂತೋಷ್ ಬಾಬು ನೇತೃತ್ವದ ತಂಡ ಸುಟ್ಟುಹಾಕಿತ್ತು. ವೀಕ್ಷಣಾ ಪೋಸ್ಟ್ ಅನ್ನೂ ನಾಶಪಡಿಸಿತ್ತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತಾವು ಹಿಮ್ಮೆಟ್ಟಿಸಿದ ಚೀನಾ ಯೋಧರು ಮತ್ತು ಕಮಾಂಡಿಂಗ್ ಆಫೀಸರ್ ಅವರನ್ನು ಈ ಹಿಂದೆ ನೋಡಿದ್ದು ನೆನಪಿಲ್ಲ. ಮುಖ ಪರಿಚಯವೂ ಇಲ್ಲ. ಇದರ ಹಿಂದೆ ಏನೋ ಸಂಚು ಅಡಗಿದೆ ಎಂಬ ಅನುಮಾನ ಸಂತೋಷ್ ಬಾಬು ಅವರಿಗೆ ಆಗಲೇ ಮೂಡಿತ್ತು. ಸಾಮಾನ್ಯವಾಗಿ ನಿರ್ದಿಷ್ಟ ಗಡಿ ಪ್ರದೇಶಗಳಲ್ಲಿ ಗಸ್ತು ಕಾರ್ಯಾಚರಣೆ ನಡೆಸುವ ಉಭಯ ದೇಶಗಳ ಯೋಧರಿಗೆ ಮುಖ ಪರಿಚಯವಿರುತ್ತದೆ. ಘರ್ಷಣೆ ಸಂಭವಿಸುವುದು ಕಡಿಮೆ. ಆದರೆ ಗಾಲ್ವನ್ ಪ್ರದೇಶಕ್ಕೆ ಉದ್ದೇಶಪೂರ್ವಕ ಚೀನಾ ಬೇರೆಡೆಗಳಿಂದ ಯೋಧರನ್ನು ಕರೆಸಿಕೊಂಡಿತ್ತು. ಈ ಕುತಂತ್ರವೂ ಸಂತೋಷ್ ಅವರ ಅರಿವಿಗೆ ಬಂದಿತ್ತು. ಆ ಪ್ರದೇಶಕ್ಕೆ ಇನ್ನಷ್ಟು ಯೋಧರನ್ನು ನಿಯೋಜಿಸಲು ಅವರು ತಮ್ಮ ನೆಲೆಗೆ ವಿನಂತಿಸಿದರು. ಚೀನಾದವರು ಹಿಂತೆರಳಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮತ್ತೆ ಗಸ್ತು ನಡೆಸಲಾಯಿತು. ಆಗ, ಚೀನಾ ಕಡೆಯ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗಿರುವುದು ಗಮನಕ್ಕೆ ಬಂದಿತ್ತು. ಹರಿತವಾದ ಆಯುಧಗಳು, ಕಬ್ಬಿಣದ ರಾಡ್‌ಗಳು, ಇನ್ನಿತರ ಸಲಕರಣೆಗಳೊಂದಿಗೆ ಸುಮಾರು 350ರಷ್ಟು ಚೀನಾ ಯೋಧರಿರುವುದು ಗಮನಕ್ಕೆ ಬಂದಿತ್ತು ಎಂದೂ ವರದಿ ಉಲ್ಲೇಖಿಸಿದೆ.

ಎರಡನೇ ಗಸ್ತು ಕಾರ್ಯಾಚರಣೆ ವೇಳೆ ಚೀನಾ ಯೋಧರು ಭಾರತೀಯ ಯೋಧರ ಮೇಲೆರಗಿದ್ದಾರೆ. ಸಂತೋಷ್ ಬಾಬು ಮತ್ತು ಇತರ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ ಸಂತೋಷ್ ಬಾಬು ಅವರು ಸಮೀಪದ ನದಿಗೆ ಬಿದ್ದರು ಎನ್ನಲಾಗಿದೆ. ಕಮಾಂಡಿಂಗ್ ಆಫೀಸರ್ ಮೇಲೆ ಚೀನಾ ಯೋಧರು ಹಲ್ಲೆ ನಡೆಸಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ಭಾರತೀಯ ಯೋಧರು ಮುನ್ನುಗ್ಗಿ ದಾಳಿ ನಡೆಸಿದ್ದರು. ಚೀನಾದ ಹಲವು ಯೋಧರನ್ನು ಹತ್ಯೆ ಮಾಡಿದ್ದರು. ಘರ್ಷಣೆ ವೇಳೆ ಚೀನಾ ಕಡೆಯಲ್ಲಿ ಅಂದಾಜು 400ಕ್ಕೂ ಹೆಚ್ಚು ಯೋಧರಿದ್ದರು. ಆದರೆ ಇತ್ತ ಕೇವಲ ನೂರು ಯೋಧರು ಮಾತ್ರ ಭಾರತದವರಿದ್ದರು. ಘರ್ಷಣೆಯಲ್ಲಿ ಮೃತಪಟ್ಟ ಯೋಧರ ಶವಗಳನ್ನು ಮರುದಿನ ಭಾರತ ಮತ್ತು ಚೀನಾ ಪರಸ್ಪರ ಹಸ್ತಾಂತರಿಸಿದವು. ಸೇನಾ ನಿಯೋಜನೆಗಳಲ್ಲಿ ಕಮಾಂಡಿಂಗ್ ಆಫೀಸರ್‌ಗೆ ಮಹತ್ವದ ಸ್ಥಾನವಿರುತ್ತದೆ. ನಿಯೋಜಿತ ತುಕಡಿಯ ಎಲ್ಲ ಯೋಧರೂ ಅವರನ್ನು ಭಾವುಕ ನೆಲೆಯಲ್ಲಿ ಕಾಣುತ್ತಾರೆ, ತಂದೆಯಂತೆ ಗೌರವಿಸುತ್ತಾರೆ. ಕಮಾಂಡಿಂಗ್ ಆಫೀಸರ್ ಸಹ ಎಲ್ಲ ಹಂತದ ಅಧಿಕಾರದ ಹಮ್ಮುಬಿಮ್ಮುಗಳಿಲ್ಲದ ಎಲ್ಲ ಹಂತದ ಸೈನಿಕರ ಜೊತೆಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಒಡನಾಟ ಇಟ್ಟುಕೊಂಡಿರುತ್ತಾರೆ, ಕಷ್ಟಸುಖ ವಿಚಾರಿಸುತ್ತಿರುತ್ತಾರೆ. ಕಮಾಂಡಿಂಗ್ ಆಫೀಸರ್ ಮೇಲೆ ಚೀನಾ ಕೈ ಮಾಡಿದ್ದು, ಭಾರತೀಯ ಯೋಧರ ಕೆಚ್ಚು ಹೆಚ್ಚಲು ಕಾರಣವಾಯಿತು ಎನ್ನಲಾಗಿದೆ.

ಆಯುಧಗಳಲ್ಲೇ ಹೊಡೆದಾಟ ನಡೆದಿದ್ದೇಕೆ?: ಉಭಯ ದೇಶಗಳ ನಡುವಣ ಗಡಿ ಒಪ್ಪಂದದ ಪ್ರಕಾರ, ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿಲ್ಲ ಎಂದು ಸರ್ಕಾರವೂ ಈಗಾಗಲೇ ಸ್ಪಷ್ಟನೆ ನೀಡಿದೆ. ಸಂಘರ್ಷದ ವೇಳೆ ಸ್ವರಕ್ಷಣೆಗೆ ಮತ್ತು ಶತ್ರುಗಳನ್ನು ಹಿಮ್ಮೆಟ್ಟಿಸಲು ಕೇವಲ ಲಭ್ಯ ಆಯುಧಗಳನ್ನಷ್ಟೇ ಬಳಸಿದ್ದರು ಭಾರತೀಯ ಯೋಧರು. ಬಿಹಾರ ರೆಜಿಮಂಟ್ಗೆ ಹೊರತಾಗಿ 3ನೇ ಪಂಜಾಬ್ ರೆಜಿಮೆಂಟ್, 3ನೇ ಮೀಡಿಯಂ ರೆಜಿಮೆಂಟ್ ಮತ್ತು 81ನೇ ಫೀಲ್ಡ್ ರೆಜಿಮೆಂಟ್ ಯೋಧರು ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಉಭಯ ಸೇನಾಪಡೆಗಳ ಯೋಧರ ನಡುವಣ ಕಾದಾಟ ಕೆಲವು ಗಂಟೆಗಳ ಕಾಲ ನಡೆದಿತ್ತು. ಕಾದಾಟದ ವೇಳೆ ಗಂಭಿರ ಗಾಯಗಳಾಗಿ, ನದಿಗೆ ಬಿದ್ದ ಪರಿಣಾಮ ಕೆಲವು ಯೋಧರು ಹುತಾತ್ಮರಾಗಿದ್ದರು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಇಡೀ ದೇಶವೇ ಚೀನಾ ವಿರುದ್ಧ ಇರಬೇಕಾದರೆ ಐ.ಪಿ.ಎಲ್.ಗೆ ಮಾತ್ರ ಚೀನಾ ಕಂಪನಿ ವಿವೋ ಹೆಸರು ಯಾಕೆ? ಐ.ಪಿ.ಎಲ್.ನು ನಮ್ಮ ಜನ ಧಿಕ್ಕರಿಸುವರೇ?